ಇತ್ತೀಚಿನ ಸುದ್ದಿ
ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಅಕ್ಟೋಬರ್ ತಿಂಗಳ ಟಾಪರ್ ಆಗಿ ನಮಸ್ವಿ ಭಾಸ್ಕರ್ ಹಾಗೂ ಭುವಿ ಸಜಿಪ ಆಯ್ಕೆ
25/11/2026, 14:07
ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಅಕ್ಟೋಬರ್ ತಿಂಗಳ ಟಾಪರ್ ಆಗಿ ನಮಸ್ವಿ ಭಾಸ್ಕರ್ ಹಾಗೂ ಭುವಿ ಸಜಿಪ ಆಯ್ಕೆಯಾಗಿದ್ದಾರೆ.
*ಸಾಧನೆಯತ್ತ ಪುತ್ತೂರಿನ ಕಲಾ ಪ್ರತಿಭೆ..*
“ಕಲೆ “ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಇರುತ್ತದೆ. ಮನುಷ್ಯನ ಭಾವನೆಗಳನ್ನ ಹೇಳುವ ಒಂದು ಸುಂದರ ದಾರಿಯೂ ಹೌದು. ಅದು ಮಾತಿನಲ್ಲೂ ಇರಬಹುದು, ದನಿಯಲ್ಲೂ ಇರಬಹುದು, ನೃತ್ಯದಲ್ಲೂ ಇರಬಹುದು. ಕಲೆ ಅನ್ನೋದು ಬರೀ ಮನೋರಂಜನೆಯಷ್ಟೇ ಅಲ್ಲ. ಅದೊಂದು ಭಾರತೀಯ ಸಂಸ್ಕೃತಿ ಕೂಡ ಹೌದು.. ಕಲೆಗೆ ವಯಸ್ಸೆಂಬುದೇ ಇಲ್ಲ. ಹಾಗೆಯೇ ಇಲ್ಲಿ ಕೂಡ ಎಳೆ ವಯಸ್ಸಿನಲ್ಲಿಯೇ ಕಲೆಯಲ್ಲಿ ತೊಡಗಿಸಿಕೊಂಡಿರುವ ಪುತ್ತೂರಿನ ಹೆಮ್ಮೆಯ ಕಲಾ ಪ್ರತಿಭೆ ನಮಸ್ವಿ ಭಾಸ್ಕರ್.
ಪುತ್ತೂರಿನ ಬಾಸ್ಕರ್ ಹಾಗೂ ದೀಪಾ ದಂಪತಿಯ ಮಗಳಾದ ಈಕೆ ಪ್ರಸ್ತುತ ಮಂಗಳೂರು ಅತ್ತಾವರದ
KPS Govt Schoolನಲ್ಲಿ 6ನೇ ತರಗತಿ ವಿದ್ಯಾರ್ಥಿನಿ. ಈಕೆ ಸಂಗೀತದ ಜೊತೆ ಯಕ್ಷಗಾನ , ಭರತನಾಟ್ಯ , ಡ್ರಾಯಿಂಗ್ , ಕಥೆ ಬರೆಯುವುದು , ಅಭಿನಯ, ಕಾರ್ಯಕ್ರಮ ನಿರೂಪಣೆ , ಸಾಹಿತ್ಯ ರಚಿಸುವುದು ಇತ್ಯಾದಿ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದಾಳೆ.
ಶಾರ್ಟ್ ಮೂವಿಯಲ್ಲಿ ನಟನೆ ಹಾಗೂ ಕಣ್ಣ್ ಕಟ್ಟ್ ತುಳು ಸೀರಿಯಲ್ ನಲ್ಲಿ(ಸಿಕೆ ಜೊತೆ) ಅಭಿನಯಿಸಿದ್ದಾಳೆ.
ತುಳು ಹಾಗೂ ಕನ್ನಡ ಮೂವಿಗೆ ಡಬ್ಬಿಂಗ್ ನೀಡಿರುತ್ತಾಳೆ. ಇತ್ತಿಚೇಗೆ ತೆರೆಕಂಡ ಪಿಚ್ಚರ್ ತುಳು ಮೂವಿ ಹಾಗೂ ಅಮರ್ಥ ಕನ್ನಡ ಮೂವಿಗೆ ವಾಯ್ಸ್ ಡಬ್ಬ್ ಮಾಡಿರುತ್ತಾಳೆ. ಕನ್ನಡ ಮೂವಿ ಅಡಿಷನ್ ನಲ್ಲೂ ಸೆಲೆಕ್ಟ್ ಆಗಿರುತ್ತಾಳೆ. ರೇಡಿಯೋ ಸರಂಗ್ 107.8 .FM ಇದರಲ್ಲಿ ನಿರೂಪಣೆ ಮಾಡಿರುತ್ತಾಳೆ.
ಕೃಷ್ಣ ವೇಷ ಧರಿಸಿ ಮೊದಲ ಬಾರಿ ವೇದಿಕೆ ಏರಿದ ಈಕೆ (Ten-month-old baby) ನಂತರ ಎರಡು ವರ್ಷ ಇರುವಾಗ Mc ಮಾಡುವ ಮೂಲಕ ಕಲಾ-ಜಗತ್ತಿಗೆ ಪುಟ್ಟ ಹೆಜ್ಜೆಯನ್ನಿಟ್ಟು ನಂತರ ಸಾಹಿತ್ಯದ ಕಡೆ ಒಲವು ಹೆಚ್ಚಿಸಿ ತಾನೇ ಸಾಹಿತ್ಯ ಬರೆಯುತ್ತಾ ಸಂಗೀತದ ಕಡೆ ಆಸಕ್ತಿ ಬೆಳೆಸಿಕೊಂಡು ತಾನೇ ಮೊಬೈಲ್ ನಲ್ಲಿ ಹಾಡನ್ನು ಕೇಳುತ್ತಾ ಸಂಗೀತ ಅಭ್ಯಾಸ ಮಾಡುತ್ತಾ ಬಂದಿದ್ದಾಳೆ. ಯಾವುದೇ ಸಂಗೀತ ಗುರುಗಳಿಲ್ಲದೇ ತಾನೇ ಸ್ವತಃ YouTube ಮೂಲಕ ಹಾಡನ್ನು ಕಲಿತು ಹಾಡುವ ಈಕೆ ಸುಗಮ ಸಂಗೀತವನ್ನು ಚಂದ್ರಶೇಖರ್ ಮಂಗಳೂರು ಅವರ ಬಳಿ ಕಲಿಯುತ್ತಿದ್ದಾಳೆ.
ಕುಂದಾಪುರ ಕಲಾವಿದರ ವತಿಯಿಂದ ಪ್ರತಿಭಾ ರತ್ನ ಪ್ರಶಸ್ತಿ Max Life ಇವರ ವತಿಯಿಂದ ಕಲಾ ರತ್ನ ಪ್ರಶಸ್ತಿ ಆರ್ ಪಿ Creation ಇವರ ವತಿಯಿಂದ ಸೇವಾ ರತ್ನ ಪ್ರಶಸ್ತಿ ಯನ್ನು ಪಡೆದಿದ್ದಾಳೆ.




ಎದೆ ತುಂಬಿ ಹಾಡಿದೆನು ಅಂತಿಮ ಸುತ್ತಿನವರೆಗೆ ಆಯ್ಕೆ ಆಗಿದ್ದು , ಜೀ ಕನ್ನಡ ಸರಿಗಮಪ ದಲ್ಲಿ 2nd Round ಗೆ ವರೆಗೆ ಬಂದಿರುತ್ತಾಳೆ.
ಅಭಿಮತ ಚಾನೆಲ್ ನಲ್ಲಿ ನಿರೂಪಣೆ ಹಾಗೂ MC ಮಾಡಿರುತ್ತಾಳೆ.
ಈಕೆಗೆ ವಾಯ್ಸ್ ಆಪ್ ಆರಾಧನ ಸಂಸ್ಥೆಯ ಪ್ರದ್ಮಶ್ರೀ ಅವರು ಹಲವಾರು ವೇದಿಕೆಯನ್ನು ಕಲ್ಪಿಸಿಕೊಟ್ಟಿರುತ್ತಾರೆ.
ಕಲಾ ಪ್ರತಿಭೆ ಇವರ ಏರ್ಪಡಿಸಿದ Online Competition ಹಾಡು ಬಾ ಕೋಗಿಲೆ ಸೀಸನ್ -2 ಇದರಲ್ಲಿ ಪ್ರಥಮ ಸ್ಥಾನ ಬಹುಮಾನಗಳನ್ನು ಪಡೆದಿರುತ್ತಾಳೆ. ಗಾನ ಶಾರದೇ ಸ್ವರ್ಧೆ, ವಾಯ್ಸ್ ಆಫ್ ಸಾಣೂರು ಗಾಯನ ಸ್ವರ್ಧೆ, ಜೈ ತುಳುನಾಡ್ (ರಿ) ಇವರು ಏರ್ಪಡಿಸಿದ ಸ್ವರ ಸುಧೆ ಗಾಯನ ಸ್ಪರ್ಧೆಯಲ್ಲಿ ಬಹುಮಾನ ಪಡಿದಿದ್ದಾಳೆ.
ಹಲವಾರು ಸಂಘ-ಸಂಸ್ಥೆಯವರು
ಗುರುತಿಸಿ ಗೌರವಿಸಿದೆ.
ಹಾಗೂ ಹತ್ತು ಹಲವು
ಪಶಂಸನಾ ಪತ್ರ ಸ್ಮರಣಿಗೆ ಬಹುಮಾನ ಪಡೆದಿದ್ದಾಳೆ.
*ಪಾಣೆಮಂಗಳೂರಿನ ಪ್ರತಿಭೆ:*
ಉದಯ ಕುಮಾರ್ ಮತ್ತು ಪವಿತ್ರಾ ದಂಪತಿಯ ಪುತ್ರಿ ಭುವಿ ಸಜಿಪ ಅವರು ಪ್ರಸ್ತುತ ಪಾಣೆಮಂಗಳೂರು ಎಸ್ಎಲ್ ಎನ್ ಪಿ ವಿದ್ಯಾಲಯದಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಬಾಲ್ಯದಿಂದಲೇ ಕಲೆಯತ್ತ ವಿಶೇಷ ಆಸಕ್ತಿ ಬೆಳೆಸಿಕೊಂಡಿರುವ ಭುವಿ ಸಜೀಪ ಭರತನಾಟ್ಯ ,ಶಾಸ್ತ್ರೀಯ ಸಂಗೀತ, ವೆಸ್ಟೆರ್ನ್ ಡ್ಯಾನ್ಸ್ , ಚಿತ್ರಕಲೆ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಈಕೆ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದ್ದಾಳೆ. ಭರತನಾಟ್ಯವನ್ನು ವಿದುಷಿ ಸ್ವಾತಿ ಭಟ್ ಅವರಲ್ಲಿ ಕಲಿಯುತ್ತಿದ್ದಾಳೆ. ಲಸೀನಿಯರ್ ಪರೀಕ್ಷೆಯಲ್ಲಿ ಡಿಸ್ಟ್ರಿಕ್ಷನ್ ನಲ್ಲಿ ಪಾಸಾಗಿದ್ದಾಳೆ. ಈಗಾಗಲೇ ವಿವಿಧ ವೇದಿಕೆಯಲ್ಲಿ ನೂರಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿ ಜನಮನ ಗೆದ್ದಿದ್ದಾಳೆ . ಪ್ರತಿಭಾ ಕಾರಂಜಿಯ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ಶಾಸ್ತ್ರೀಯ ಸಂಗೀತವನ್ನು ಗುರುಗಳಾದ
ಶಶಿಕಲಾ ಪ್ರಭು ಅವರಲ್ಲಿ ಕಲಿಯುತ್ತಿದ್ದಾಳೆ. ಚಿತ್ರಕಲೆಯನ್ನು ಅಭ್ಯಾಸ ಮಾಡುತ್ತಿದ್ದಾಳೆ. ಹಾಗೆಯೇ ಚಿತ್ರಕಲೆಯ ಗ್ರೇಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. ಚಿತ್ರಕಲೆಯಲ್ಲಿ ಹಲವಾರು ಕಡೆಗಳಲ್ಲಿ ಬಹುಮಾನವನ್ನು ಪಡೆದಿದ್ದಾಳೆ. ಹಲವಾರು ವೇದಿಕೆಯಲ್ಲಿ ಸುಂದರವಾದ ಚಿತ್ರಗಳನ್ನು ಬಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಭುವಿ ಸಜೀಪ ವಾಯ್ಸ್ ಆಫ್ ಆರಾಧನ ತಂಡದ ಸದಸ್ಯೆ .axis Max life insurance ರವರ “ಕಲಾ ರತ್ನ ಪ್ರಶಸ್ತಿ” ” ಭರವಸೆಯ ಬೆಳಕು ಪ್ರಶಸ್ತಿ” ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ ಇವರಿಂದ ” ಕಲಾ ಸೌರಭ ಪ್ರಶಸ್ತಿ” ಈಕೆಗೆ ದೊರಕಿದೆ.












