4:47 AM Saturday26 - September 2026
ಬ್ರೇಕಿಂಗ್ ನ್ಯೂಸ್
ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಸಿದ್ದರಾಮಯ್ಯ!: ಬೆಳ್ಳಿತೆರೆಗೆ ಭರ್ಜರಿ ಎಂಟ್ರಿ ಕೊಟ್ಟ ಮಾಜಿ ಸಿಎಂ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ವಿಜಯನಗರ | ಹೊಸಪೇಟೆ ಬಳಿ ರೈಲು ಡಿಕ್ಕಿಯಾಗಿ 8 ಎಮ್ಮೆಗಳು ಸ್ಥಳದಲ್ಲಿಯೇ ಸಾವು *ಕಾಡಾನೆ ನಿಯಂತ್ರಣ ಚಟುವಟಿಕೆಗೆ ವಾಹನಗಳ ಕೊಡುಗೆ: ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಕೇಂದ್ರ ಹಣಕಾಸು… ಬಂಗಾಳ ಕೊಲ್ಲಿಯಲ್ಲಿ ವಾಯಭಾರ ಕುಸಿತ: ಮಂಗಳೂರು ಸೇರಿದಂತೆ ಕರಾವಳಿ, ಮಲೆನಾಡಿನಲ್ಲಿ ಮಳೆ ಅ.11ರಿಂದ ಕೆಆರ್‌ಎಸ್‌ನಲ್ಲಿ ಸಂಪ್ರದಾಯಬದ್ಧ ಕಾವೇರಿ ಆರತಿ: ಮುಖ್ಯಮಂತ್ರಿ ಉದ್ಘಾಟನೆ *ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ*

ಇತ್ತೀಚಿನ ಸುದ್ದಿ

ಸಂಘನಿಕೇತನ ಗಣೇಶನಿಗೆ ಅಮೃತ ಮಹೋತ್ಸವ ಸಂಭ್ರಮ: ಮಂಗಳ ವಾದ್ಯದೊಂದಿಗೆ ದೇವರ ಮೃತಿಕಾ ವಿಗ್ರಹ ಆಗಮನ

30/08/2022, 20:50

ಚಿತ್ರ: ಮಂಜು ನೀರೇಶ್ವಾಲ್ಯ

ಮಂಗಳೂರು(reporterkarnataka.com): ನಗರದ ಮಣ್ಣಗುಡ್ಡೆಯಲ್ಲಿರುವ ಸಂಘನಿಕೇತನದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ಈ ಬಾರಿ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಅಮೃತ ಮಹೋತ್ಸವ ಸಂಭ್ರಮ ( 75 ವರ್ಷ ) ಈ ಪ್ರಯುಕ್ತ ಶ್ರೀ ಮಹಾಗಣಪತಿ ದೇವರ ಮೃತಿಕಾ ವಿಗ್ರಹವನ್ನು ವಿಜೃಂಭಣೆಯಿಂದ ತರಲಾಯಿತು . ದಿನಾಂಕ 31 ರಿಂದ ಸೆ.4ರ ವರೆಗೆ ಗಣೇಶೋತ್ಸವ ನಡೆಯಲಿದೆ. ಸಾರ್ವಜನಿಕ ಗಣೇಶ್ಜೋತ್ಸವದ ಉದ್ಘಾಟನೆ  ಶ್ರೀ ಮುಕುಂದ್   ಮಾನನೀಯ 

(ಸಹಸರ ಕಾರ್ಯವಾಹ ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಇವರ ದಿವ್ಯ ಹಸ್ತಗಳಿಂದ ನೆರವೇರಲಿದೆ . ವಿವಿಧ  ಧಾರ್ಮಿಕ , ಸಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಸದ್ಭಕ್ತ ರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪುನೀತರಾಗಬೇಕಾಗಿ ಸಮಿತಿಯು ವಿನಂತಿಸಿಕೊಂಡಿದೆ . ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ , ಪ್ರಧಾನ ಕಾರ್ಯದರ್ಶಿ ಎಂ . ಸತೀಶ್ ಪ್ರಭು , ಸುರೇಶ ಕಾಮತ್ , ಉಪಾಧ್ಯಕ್ಷರಾದ ಜೆ . ಕೆ ರಾವ್ , ಆನಂದ ಪಾಂಗಳ , ಕೆ ಪಿ ಟೈಲರ್ , ಅಭಿಷೇಕ್ ಭಂಡಾರಿ, ಕೇಶವ  ಸ್ಮ್ರತಿ ಸಂವರ್ಧನ ಸಮಿತಿಯ ವಿನೋದ್ ಶೆಣೈ , 

ರಘುವೀರ್ ಕಾಮತ್ , ಎಸ್. ಆರ್. ಕುಡ್ವ , ಗಣೇಶ್ ಪ್ರಸಾದ್ , ಜಯಪ್ರಕಾಶ್ ಮಂಗಳಾದೇವಿ, ಸ್ವಾಮಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು