11:30 AM Tuesday11 - August 2026
ಬ್ರೇಕಿಂಗ್ ನ್ಯೂಸ್
Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ…

ಇತ್ತೀಚಿನ ಸುದ್ದಿ

Mangalore : ಕಷ್ಟದಲ್ಲಿದ್ದ 350ಕ್ಕೂ ಅಧಿಕ ಕುಟುಂಬಗಳಿಗೆ ರೇಷನ್ ಕಿಟ್ ವಿತರಿಸಿದ ಕೋಸ್ಟಲ್‌ವುಡ್ ನಟ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ ಹಾಗೂ ಅವರ ತಂಡ

14/05/2021, 21:28

ಮಂಗಳೂರು (Reporter Karnataka News)

ಕೋಸ್ಟಲ್ ವುಡ್ ನಟ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಹಾಗೂ ಅವರ ತಂಡದಿಂದ ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿ ತೀವ್ರ ಕಷ್ಟದಲ್ಲಿದ್ದ ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.

ಕಾವೂರು, ಕೋಡಿಕಲ್, ಬೋಳೂರು, ಉರ್ವ, ಬಜಾಲ್, ಜಲ್ಲಿಗುಡ್ಡೆ, ಫೈಸಲ್‌ನಗರ, ಸುರತ್ಕಲ್, ಕೊಡಿಯಾಲ್ ಬೈಲ್, ಕುದ್ರೋಳಿ, ಮಂಗಳಾದೇವಿ, ಪಾಂಡೇಶ್ವರ, ಉರ್ವ ಸ್ಟೋರ್ ಸೇರಿದಂತೆ ಮಂಗಳೂರು ನಗರದಾದ್ಯಂತ ಅತಿ ಕಷ್ಟದಲ್ಲಿರುವ ಕುಟುಂಬಗಳಿಗೆ ರೇಶನ್ ಕಿಟ್‌ಗಳನ್ನು ಹಂಚಲಾಯಿತು.

ಸಾವಿರಕ್ಕೂ ಅಧಿಕ ಕರೆಗಳು ತಂಡಕ್ಕೆ ಬಂದಿದ್ದು, ಬಹುತೇಕ ಕುಟುಂಬಗಳಿಗೆ ಕಿಟ್ ವಿತರಿಸುವ ಪ್ರಯತ್ನವನ್ನು ತಂಡ ಮಾಡುತ್ತಿದೆ. ಸದ್ಯಕ್ಕೆ 350 ಕುಟುಂಬಗಳಿಗೆ ಕಿಟ್ ವಿತರಿಸಲಾಗಿದೆ. ಅರ್ಹರ ಮನೆಗಳಿಗೆ ಭೇಟಿ ಅವರಿಗೆ ಕಿಟ್‌ಗಳನ್ನು ನೀಡಲಾಗುತ್ತಿದೆ.

ರೂಪೇಶ್ ಶೆಟ್ಟಿ ಅವರ ಜತೆಗೆ ಅನಿಲ್ ಶೆಟ್ಟಿ, ದೀಕ್ಷಿತ್ ಆಳ್ವ, ಮಂಜುನಾಥ್ ಅತ್ತಾವರ್, ಲವಿತ್ ಕೊಟ್ಟಾರಿ, ನಿತೇಶ್ ಕುಲಾಲ್, ವಜ್ರೇಶ್ ಸನಿಲ್, ರಾಜ ಮಾಣಿ, ನಿಖಿಲ್ ಬೇಕಲ್ ಮೊದಲಾದವರೂ ಸಾಥ್ ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು