8:27 AM Monday24 - August 2026
ಬ್ರೇಕಿಂಗ್ ನ್ಯೂಸ್
ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ

ಇತ್ತೀಚಿನ ಸುದ್ದಿ

ರಾಜ್ಯದಲ್ಲಿ ಕನಿಷ್ಠ ವೇತನ‌ ಜಾರಿ: ಇನ್ಮುಂದೆ ಇಷ್ಟು ಸಂಬಳ ಕೊಡ್ಲೇಬೇಕು; ಯಾರಿಗೆಷ್ಟು ವೇತನ..?

05/08/2022, 23:33

ಬೆಂಗಳೂರು(reporterkarnataka.com): ಕೊರೊನಾದಿಂದ ನನೆಗುದಿಗೆ ಬಿದ್ದಿದ್ದ ಕನಿಷ್ಠ ವೇತನವನ್ನು ರಾಜ್ಯ ಸರ್ಕಾರ ಕೊನೆಗೂ ಪ್ರಕಟಿಸಿದೆ. ಕೊರೋನಾ ಕಾಟದಿಂದಾಗಿ ಕಳೆದ 2 ವರ್ಷಗಳಿಂದ ನಿಂತುಹೋಗಿದ್ದ ಕನಿಷ್ಠ ವೇತನ ಜಾರಿಗೆ ಸರ್ಕಾರ ಜಾರಿಗೆ ಮುಂದಾಗಿದೆ. ಈ ಮೂಲಕ ಕಾರ್ಮಿಕರಿಗೆ ಸರ್ಕಾರ ಶುಭ ಸುದ್ದಿ ಕೊಟ್ಟಿದೆ.

ಕೊರೋನಾದಿಂದ ಕನಿಷ್ಠ ವೇತನ ಪರಿಷ್ಕೃರಣೆ ಆಗಿರಲಿಲ್ಲ. ಈಗ ಒಂದಷ್ಟು ವಿಭಾಗಕ್ಕೆ ಕನಿಷ್ಠ ವೇತನ ಜಾರಿಯಾಗಿದ್ದು ಕಾರ್ಮಿಕರಿಗೆ ಹಬ್ಬಗಳ ಮಾಸದಂದೇ ಗಿಫ್ಟ್ ಸಿಕ್ಕಂತಾಗಿದೆ. ಹೊಸ ವೇತನವು ಜುಲೈ 28ರಿಂದ ಅಧಿಸೂಚನೆ ಪ್ರಕಟವಾದಾಗಿನಿಂದ ಜಾರಿಗೆ ಬಂದಿದೆ. ಕಾರ್ಮಿಕರ ವೇತನ, ಪಿಎಫ್​ಗಾಗಿ ಕಡಿತವಾಗುವ ಹಣ ಹಾಗೂ ಕೆಲಸದ ಸಮಯ ಬದಲಾಗುತ್ತೆ ಅನ್ನೋ ಚರ್ಚೆ ನಡುವೆಯೇ ಕನಿಷ್ಠ ವೇತನ ಪ್ರಕಟವಾಗಿದೆ.

ಯಾರಿಗೆಷ್ಟು ಕನಿಷ್ಠ ವೇತನ..?

ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಗುಡ್​ನ್ಯೂಸ್ ಸಿಕ್ಕಂತಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ಸಿಗಲಿದೆ. ಈ ಬಗ್ಗೆ ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿದೆ. ಬಿಬಿಎಂಪಿ ಸಿಬ್ಬಂದಿಗೂ ಕನಿಷ್ಠ ವೇತನ ಜಾರಿ ನೆಮ್ಮದಿ ತರಿಸಿದೆ. ಸರ್ಕಾರ ಕೊಡುವ ಕನಿಷ್ಠ ವೇತನ ಪ್ಲಾನ್​ನಲ್ಲಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯೂ ಸೇರಿದೆ.

ಕನಿಷ್ಠ ವೇತನ ಜಾರಿ

ಕನಿಷ್ಠ ವೇತನದಿಂದ BBMP ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳ ಕಾರ್ಮಿಕರು ಮತ್ತು ಕ್ಲರ್ಕ್‌ಗಳು, ಕಂಪ್ಯೂಟರ್/ಡಾಟಾ ಎಂಟ್ರಿ ಆಪರೇಟರ್‌ಗಳು, ಲ್ಯಾಬ್ ತಂತ್ರಜ್ಞರು ಮತ್ತು ಸಹಾಯಕ ಗ್ರಂಥಪಾಲಕರು ಅಂದಾಜು 18,000 ರೂಪಾಯಿಯಷ್ಟು ಸಂಬಳ ಪಡೆಯಲಿದ್ದಾರೆ.

ಯಾರ ಸಂಬಳ ಎಷ್ಟಾಗಿದೆ..?

ಕ್ಲರ್ಕ್​-16,564 ರೂಪಾಯಿ

ಡ್ರೈವರ್ ಕಮ್ ನಿರ್ವಾಹಕರು- 15,777 ರೂಪಾಯಿ.

ಚಾಲಕರು- 15,112 ರೂಪಾಯಿ.

ಕ್ಲೀನರ್- 13,974 ರೂಪಾಯಿ.

ಮೆಕ್ಯಾನಿಕ್‌ಗಳು- 14,657 ರೂಪಾಯಿ.

ಪ್ಲಂಬರ್‌ಗಳು- 14,657 ರೂಪಾಯಿ.

ವಾಟರ್‌ಮೆನ್​ಗಳು- 14,657 ರೂಪಾಯಿ.

ಇದಿಷ್ಟೇ ಅಲ್ಲದೇ ವಿವಿಧ ಸಂಸ್ಥೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಗುಡ್​ನ್ಯೂಸ್ ಸಿಕ್ಕಿದೆ. ಅವರ ವೇತನವೂ 13 ಸಾವಿರ ರೂಪಾಯಿಯಿಂದ 17 ಸಾವಿರ ರೂಪಾಯಿವರೆಗೆ ಏರಿಕೆಯಾದಂತಾಗಿದೆ.

ವಿವರ ನೋಡಿ:

ಅಟೆಂಡರ್- 13,974 ರೂಪಾಯಿ.

ತೋಟದ ಕೆಲಸಗಾರರು- 13,974 ರೂಪಾಯಿ.

ಸೆಕ್ಯೂರಿಟಿ ಗಾರ್ಡ್​- 13,974 ರೂಪಾಯಿ.

ಬೀದಿ ಗುಡಿಸುವವರು-17,306 ರೂಪಾಯಿ.

ತ್ಯಾಜ್ಯ ಕೆಲಸಗಾರರು- 17,306 ರೂಪಾಯಿ.

ಹೊಸ ವೇತನವು ಜುಲೈ 28ರಿಂದ ಅಧಿಸೂಚನೆಯಾದಾಗಿನಿಂದ ಜಾರಿಗೆ ಬಂದಿದೆ. ಆದಾಯ ಕುಂಠಿತದಿಂದ ಕನಿಷ್ಠ ವೇತನ ಜಾರಿಯಾಗಿರಲಿಲ್ಲ

ಕೇಂದ್ರ ಸರ್ಕಾರ ಕನಿಷ್ಠ ವೇತನ ದರವನ್ನು ಅಧಿನಿಯಮ 1948ರ ಅಡಿಯಲ್ಲಿ 2010ರಲ್ಲಿ ಜಾರಿಮಾಡಿತು. ಅಕ್ಟೋಬರ್ 1ಕ್ಕೆ ಇದನ್ನು ಪರಿಷ್ಕೃರಿಸಲಾಗಿತ್ತು. ಆಯಾ ರಾಜ್ಯ ಸರ್ಕಾರಗಳು ಆಯಾ ಕಾಲಕ್ಕೆ ತಕ್ಕಂತೆ, ವರ್ಷಕ್ಕೊಮ್ಮೆ ದರವನ್ನು ಪರಿಷ್ಕರಣೆ ಮಾಡುತ್ತದೆ. ಆದರೆ ಕೊರೋನಾದಿಂದಾಗಿ, ಆದಾಯ ಕುಂಠಿತವಾಗಿ ಕನಿಷ್ಠ ವೇತನ ಜಾರಿಯಾಗಿರಲಿಲ್ಲ. ಈಗ ಸರ್ಕಾರ ಪ್ರಕಟ ಮಾಡಿದೆ.

ಮುಖ್ಯವಾಗಿ ಕನಿಷ್ಠ ವೇತನ ದರ, ಕೃಷಿ ಸೇರಿದಂತೆ ಅನುಸೂಚಿತ ಉದ್ಯೋಗಗಳಿಗೆ ನಿಗದಿಪಡಿಸಿದ ಸಂಘಟಿತ ಮತ್ತು ಅಸಂಘಟಿತ ವಲಯಗಳ ಕ್ಷೇತ್ರಕ್ಕೂ ಅನ್ವಯವಾಗುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು