10:32 PM Thursday29 - October 2026
ಬ್ರೇಕಿಂಗ್ ನ್ಯೂಸ್
4 ಎಂಎಲ್‌ಸಿ ಕ್ಷೇತ್ರ ಗೆದ್ದ ಮಾತ್ರಕ್ಕೆ ಬಿಜೆಪಿ ಬಿಗೋದು ಬೇಡ: ಕಲಬುರಗಿಯಲ್ಲಿ ಆರೋಗ್ಯ… ಮುಂದಿನ ಚುನಾವಣೆಯಲ್ಲಿ 130 ಸ್ಥಾನ ಗೆದ್ದು ಎನ್‌ಡಿಎ ಅಧಿಕಾರಕ್ಕೆ’: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.… Chikkamagaluru | ಕಡೂರು ಬಳಿ ಬಸ್ಸಿಗೆ ಹಿಂಭಾಗದಿಂದ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ… ಮೈಸೂರು ಅರಮನೆ ವಿಚಾರವಾಗಿ ಸಚಿವ ಯತೀಂದ್ರ ಹೇಳಿಕೆಗೆ ವಿರೋಧ: ಪ್ರಮೋದಾದೇವಿ ಒಡೆಯರ್ ಬೆಂಬಲಕ್ಕೆ… Chikkamagaluru | ಆಟೋ‌- ಬೈಕ್ ನಡುವೆ ಮುಖಾಮುಖಿ ‌ಡಿಕ್ಕಿ: ಬೈಕ್ ಸವಾರರ ಸ್ಥಳದಲ್ಲೇ… ಆಯುಧ ಪೂಜೆ–ವಿಜಯ ದಶಮಿ: ನಾಡಿನ ಒಳಿತಿಗಾಗಿ ರಾಜ್ಯಪಾಲ ಡಾ. ಸುಧಾ ಯಾದವ್ ಪ್ರಾರ್ಥನೆ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣ | ವಿಜಯದಶಮಿಯೊಳಗೆ ಆರೋಪಿಗಳ ಬಂಧಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ:… ಗೊತ್ತು ಗುರಿ ಇಲ್ಲದ ಟೂರಿಸಂ ನೀತಿ | ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾದ… ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ

ಇತ್ತೀಚಿನ ಸುದ್ದಿ

ಖರ್ಗೆ ವಿರುದ್ಧದ ಟೀಕೆಗೆ ಖಂಡನೆ: ಆರ್. ಅಶೋಕ್ ಕ್ಷಮೆಯಾಚಿಸುವಂತೆ ಕಾಂಗ್ರೆಸ್ ಮುಖಂಡರ ಆಗ್ರಹ

29/10/2026, 22:32

ಬೆಂಗಳೂರು(reporterkarnataka.com):ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾಡಿರುವ ಟೀಕೆಗಳನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು. ಈ ವೇಳೆ ಆರ್. ಅಶೋಕ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ಅವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯ ರಾಜಕೀಯ ನಾಯಕರು ಹಾಗೂ ದೀರ್ಘಕಾಲದ ಸಂಸದೀಯ ಅನುಭವ ಹೊಂದಿರುವ ವ್ಯಕ್ತಿಯಾಗಿದ್ದು, ಅವರ ವಯಸ್ಸು ಮತ್ತು ನಡೆಯನ್ನು ಉಲ್ಲೇಖಿಸಿ ಆರ್. ಅಶೋಕ್ ಅಪಹಾಸ್ಯ ಮಾಡಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ಅವರು ಸುಮಾರು 3,400 ಕಿಲೋಮೀಟರ್ ಪಾದಯಾತ್ರೆ ನಡೆಸಿರುವುದನ್ನು ಉಲ್ಲೇಖಿಸಿದ ಕಾಂಗ್ರೆಸ್ ಮುಖಂಡರು, ಕಾಂಗ್ರೆಸ್ ನಾಯಕರ ಸಾಮರ್ಥ್ಯದ ಬಗ್ಗೆ ಆರ್. ಅಶೋಕ್ ಮಾಡಿರುವ ಟೀಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು.

ದೇಶದ ಹಿರಿಯ ರಾಜಕೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಗೌರವದಿಂದ ಮಾತನಾಡಬೇಕು. ಹಿರಿಯರನ್ನು ಅಪಹಾಸ್ಯ ಮಾಡುವ ಹೇಳಿಕೆಗಳನ್ನು ರಾಜಕೀಯ ನಾಯಕರು ನೀಡಬಾರದು ಎಂದು ಅವರು ಒತ್ತಾಯಿಸಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೂ ಇಂದಿಗೂ ಸಕ್ರಿಯ ರಾಜಕಾರಣದಲ್ಲಿದ್ದು, ಹಿರಿಯ ನಾಯಕರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಆರ್. ಅಶೋಕ್ ಅವರು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮಾಡಿರುವ ಟೀಕೆಗಳಿಗೆ ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್, ಕಾಂಗ್ರೆಸ್ ಮುಖಂಡರಾದ ಎಂ.ಎ. ಸಲೀಂ, ಪ್ರಕಾಶ್, ಪುಟ್ಟರಾಜು, ಲಕ್ಷ್ಮೀನಾರಾಯಣ್, ಕುಶಾಲ್ ಹರವೇಗೌಡ, ಪ್ರವೀಣ್ ರಾವ್, ಓಬಳೇಶ್, ರಂಜಿತ್, ನವೀನ್ ಸಾಯಿ, ಉಮೇಶ್ ಹಾಗೂ ಅಜಯ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು