5:53 PM Friday30 - October 2026
ಬ್ರೇಕಿಂಗ್ ನ್ಯೂಸ್
ಭೂತಾನ್‌ನಲ್ಲಿ ಹಿಮನದಿ ಸರೋವರ ಸ್ಫೋಟ: ಅಸ್ಸಾಂ, ಬಂಗಾಳದಲ್ಲಿ ಪ್ರವಾಹದ ಎಚ್ಚರಿಕೆ ರಾಜ್ಯಾದ್ಯಂತ ನೀರಿನ ಘಟಕಗಳ ಮೇಲೆ ಅಧಿಕಾರಿಗಳ ದಾಳಿ: 24 ಘಟಕಗಳಿಗೆ ನೋಟಿಸ್; ಮುಳಬಾಗಿಲಿನಲ್ಲಿ… ಅತ್ಯಾಚಾರ ಎಸಗಿದ ಯುವಕರನ್ನು ಅಪಹರಿಸಿ ಹಣದ ಬೇಡಿಕೆಯಿಟ್ಟ ಸಂತ್ರಸ್ತೆ: 10 ಮಂದಿ ಆರೋಪಿಗಳ… ಮಾಜಿ ಸಚಿವ, ಹಿರಿಯ ರಾಜಕಾರಣಿ ಶಿವಾನಂದ ಕೌಜಲಗಿ ನಿಧನ 4 ಎಂಎಲ್‌ಸಿ ಕ್ಷೇತ್ರ ಗೆದ್ದ ಮಾತ್ರಕ್ಕೆ ಬಿಜೆಪಿ ಬಿಗೋದು ಬೇಡ: ಕಲಬುರಗಿಯಲ್ಲಿ ಆರೋಗ್ಯ… ಮುಂದಿನ ಚುನಾವಣೆಯಲ್ಲಿ 130 ಸ್ಥಾನ ಗೆದ್ದು ಎನ್‌ಡಿಎ ಅಧಿಕಾರಕ್ಕೆ’: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.… Chikkamagaluru | ಕಡೂರು ಬಳಿ ಬಸ್ಸಿಗೆ ಹಿಂಭಾಗದಿಂದ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ… ಮೈಸೂರು ಅರಮನೆ ವಿಚಾರವಾಗಿ ಸಚಿವ ಯತೀಂದ್ರ ಹೇಳಿಕೆಗೆ ವಿರೋಧ: ಪ್ರಮೋದಾದೇವಿ ಒಡೆಯರ್ ಬೆಂಬಲಕ್ಕೆ… Chikkamagaluru | ಆಟೋ‌- ಬೈಕ್ ನಡುವೆ ಮುಖಾಮುಖಿ ‌ಡಿಕ್ಕಿ: ಬೈಕ್ ಸವಾರರ ಸ್ಥಳದಲ್ಲೇ… ಆಯುಧ ಪೂಜೆ–ವಿಜಯ ದಶಮಿ: ನಾಡಿನ ಒಳಿತಿಗಾಗಿ ರಾಜ್ಯಪಾಲ ಡಾ. ಸುಧಾ ಯಾದವ್ ಪ್ರಾರ್ಥನೆ

ಇತ್ತೀಚಿನ ಸುದ್ದಿ

40ರ ಹರೆಯದ ಧರ್ಮಗುರು ಜತೆ ಮದುವೆಯಾದ 22ರ ಶಿಷ್ಯೆ.!: ಠಾಣೆ ಮೆಟ್ಟಿಲೇರಿದ ಪೋಷಕರ ಆಕ್ರಂಧನ

29/10/2026, 14:28

ಮಂಗಳೂರು(reportetkarnataka.com): ಧರ್ಮ ಶಿಕ್ಷಣ ನೀಡುವ 40 ವರ್ಷ ವಯಸ್ಸಿನ ವಿವಾಹಿತ ಧರ್ಮಗುರು ಒಬ್ಬ, ತನಗಿಂತ ಅರ್ಧ ವಯಸ್ಸಿನ ಯುವತಿಯನ್ನು ಪ್ರೀತಿಸಿ ಮದುವೆಯಾದ ಘಟನೆ ಉತ್ತರ ಕನ್ನಡದ ಕುಮಟಾ ಮತ್ತು ಮಂಗಳೂರಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

*ಮದರಸಾದಲ್ಲಿ ಶುರುವಾಗಿದ್ದ ಪ್ರೇಮ ಕಥೆ*

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆಟಗುಳಿ ನಿವಾಸಿ ದಾವುದ್ ಖಾಸಿಂ ಅವರ 22 ವರ್ಷದ ಪುತ್ರಿ , ಸ್ಥಳೀಯ ಮದರಸಾಗೆ ಧರ್ಮ ಶಿಕ್ಷಣ ಕಲಿಯಲು ತೆರಳುತ್ತಿದ್ದರು. ಈ ಮದರಸಾದಲ್ಲಿ ಮಂಗಳೂರಿನ ಅಸೈಗೋಳಿ ನಿವಾಸಿಯಾದ ವಿವಾಹಿತ ಅಶ್ರಫ್ ಸಅದಿ (40) ಹಲವು ವರ್ಷಗಳಿಂದ ಧರ್ಮಗುರುವಾಗಿ ಸೇವೆ ಸಲ್ಲಿಸುತ್ತಿದ್ದ. ಪವಿತ್ರ ಧರ್ಮಬೋಧನೆ ಮಾಡುವ ನೆಪದಲ್ಲಿ ಅಶ್ರಫ್, ಯುವತಿ ಜೊತೆ ಸ್ನೇಹ ಬೆಳೆಸಿಕೊಂಡಿದ್ದಾನೆ. ಕಳೆದ ಮೂರು ವರ್ಷಗಳಿಂದ ಇವರಿಬ್ಬರ ನಡುವೆ ನಿರಂತರ ಸಂಪರ್ಕವಿದ್ದು, ಅದು ಪ್ರೀತಿಯಾಗಿ ಬದಲಾಗಿತ್ತು.

*ಮೊದಲ ಮದುವೆ ಮುಚ್ಚಿಟ್ಟು ಬಲೆಗೆ ಬೀಳಿಸಿದ ಆರೋಪ*
ಅಶ್ರಫ್ ಸಅದಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ. ಆದಾಗ್ಯೂ, ತನ್ನ ಮೊದಲ ಮದುವೆಯ ವಿಷಯವನ್ನು ಮುಚ್ಚಿಟ್ಟು, ಯುವತಿಯ ತಲೆಯಲ್ಲಿ ಪ್ರೀತಿಯ ಭ್ರಮೆ ತುಂಬಿ ಆಕೆಯನ್ನು ತಮ್ಮತ್ತ ಸೆಳೆದಿದ್ದಾನೆ ಎಂದು ಯುವತಿಯ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗೆ ಇಬ್ಬರೂ ರಹಸ್ಯವಾಗಿ ನಿಖಾ (ಮದುವೆ) ಮಾಡಿಕೊಂಡು, ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಅಶ್ರಫ್ ಯುವತಿಯನ್ನು ಮಂಗಳೂರಿನ ಅಸೈಗೋಳಿಯಲ್ಲಿರುವ ತನ್ನ ಮನೆಗೆ ಕರೆದುಕೊಂಡು ಬಂದಿದ್ದ.

*ಠಾಣೆ ಮೆಟ್ಟಿಲೇರಿದ ಪೋಷಕರ ಆಕ್ರಂದನ*
ಮಗಳು ಕಾಣೆಯಾಗಿದ್ದನ್ನು ಕಂಡು ಕಂಗಾಲಾದ ಪೋಷಕರು ಆಕೆಯನ್ನು ಹುಡುಕಿಕೊಂಡು ಮಂಗಳೂರಿಗೆ ಆಗಮಿಸಿದ್ದರು. ಕೊಣಾಜೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದಾಗ, ಪೊಲೀಸರು ಅಶ್ರಫ್ ಸಅದಿ ಹಾಗೂ ಯುವತಿನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು.
ಠಾಣೆಯ ಆವರಣದಲ್ಲಿ ಯುವತಿಯ ತಂದೆ, ತಾಯಿ, ಸಹೋದರ ಹಾಗೂ ಸಂಬಂಧಿಕರು ಕಣ್ಣೀರಿಡುತ್ತಾ, ಆಕೆಗೆ ಬುದ್ಧಿಹೇಳಿ ಮನೆಗೆ ಹಿಂತಿರುಗುವಂತೆ ಎಷ್ಟೇ ಬೇಡಿಕೊಂಡರೂ ಯುವತಿ ಮಣಿಯಲಿಲ್ಲ. ಹೆತ್ತವರ ಆಕ್ರಂದನ, ಅಳಲು ಯಾವುದಕ್ಕೂ ಕ್ಯಾರೇ ಎನ್ನದ ಆಕೆ, ವಾಪಸ್ ಮನೆಗೆ ಹೋಗಲು ಸಂಪೂರ್ಣವಾಗಿ ನಿರಾಕರಿಸಿದಳು.

*ಪೊಲೀಸರ ಮುಂದೆ ಧರ್ಮಗುರು ಪರ ಹೇಳಿಕೆ*
ಪೊಲೀಸ್ ವಿಚಾರಣೆ ವೇಳೆ ಯುವತಿಯು, ತಾನು ಸಪ್ತಪದಿ ತುಳಿದಿರುವ ಧರ್ಮಗುರು ಅಶ್ರಫ್ ಜೊತೆಯೇ ಬಾಳುವುದಾಗಿ ಪಟ್ಟು ಹಿಡಿದಳು. ತಾನು ಸ್ವ ಇಚ್ಛೆಯಿಂದ ಬಂದಿರುವುದಾಗಿ ಪೊಲೀಸರಿಗೆ ಅಧಿಕೃತ ಹೇಳಿಕೆ ದಾಖಲಿಸಿ, ಹೆತ್ತವರನ್ನು ತೊರೆದು ಧರ್ಮಗುರುವಿನ ಜೊತೆಯೇ ಹೆಜ್ಜೆ ಹಾಕಿದಳು.

ಇತ್ತೀಚಿನ ಸುದ್ದಿ

ಜಾಹೀರಾತು