7:36 PM Thursday17 - September 2026
ಬ್ರೇಕಿಂಗ್ ನ್ಯೂಸ್
ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ*

ಇತ್ತೀಚಿನ ಸುದ್ದಿ

ಕಾವು ಶ್ರೀ ಪಂಚಲಿಂಗೇಶ್ವರ ದೇಗುಲ ಬ್ರಹ್ಮಕಲಶೋತ್ಸವ ಸಮಿತಿ ರಚನಾ ಪೂರ್ವಭಾವಿ ಸಭೆ: ಅಧ್ಯಕ್ಷರಾಗಿ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಆಯ್ಕೆ

17/09/2026, 19:35

ಮಂಗಳೂರು(reporterkarnataka.com): ಸುಮಾರು 800 ವರ್ಷ ಇತಿಹಾಸವಿರುವ ಬಜಾಲ್ ಕಾವುಬೈಲ್ ನ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರಚನಾ ಪೂರ್ವಭಾವಿ ಸಭೆಯು ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ. ರಾಮಚಂದ್ರ ಆಳ್ವ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರದ ರಾಜಾಂಗಣದಲ್ಲಿ ನಡೆಯಿತು.
ಕ್ಷೇತ್ರದ ವ್ಯವಸ್ಥಾಪನ ಸಮಿತಿ, ಸ್ಥಳೀಯ 50ಕ್ಕೂ ಮಿಕ್ಕಿ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಊರಿನ ಸರ್ವ ಭಕ್ತರ ಆಯ್ಕೆಯ ಮೇರೆಗೆ ಕಾವು ಶ್ರೀ ಪಂಚಲಿ೦ಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಮಂಜುನಾಥ್ ಭಂಡಾರಿ, ಮಾಜಿ ಸಚಿವರಾದ ಶ್ರೀ ಕೃಷ್ಣ ಜೆ. ಪಾಲೆಮಾರ್, ಶ್ರೀ ನಾಗರಾಜ ಶೆಟ್ಟಿ, ಕಂಕನಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷರಾದ ಶ್ರಿ ಚಿತ್ತರಂಜನ್ ಕೆ., ಕಾರ್ಯಾಧ್ಯಕ್ಷರಾಗಿ ಮಾಜಿ ಕಾರ್ಪೊರೇಟರ್‌ಗಳಾದ ಶ್ರೀ ಪ್ರವೀಣ್ ಚಂದ್ರ ಆಳ್ವ, ಶ್ರೀ ಭಾಸ್ಕರ್‌ಚಂದ್ರ ಶೆಟ್ಟಿ, ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಕಿರಣ್ ರೈ ಬಜಾಲ್, ಸಮಿತಿಯ ಅಧ್ಯಕ್ಷರಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು, ಪ್ರಧಾನ ಸಂಚಾಲಕರಾಗಿ ಅಂಬಾ ಮಹೇಶ್ವರಿ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಎ. ಸೀತಾರಾಮ್ ಜಪ್ಪು ಅರಕೆರೆಬೈಲ್ ಹಾಗೂ ಕಾರ್ಯದರ್ಶಿಯಾಗಿ ಶ್ರೀ ಉಮೇಶ್ ಅತಿಕಾರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಮುಂದಿನ ಸಮಿತಿಯ ಆಯ್ಕೆಯ ಜವಾಬ್ದಾರಿಯನ್ನು ಹಾಲಿ ಸಮಿತಿಗೆ ನೀಡಲಾಯಿತು.
ಈ ಸಭೆಯಲ್ಲಿ ಶ್ರೀ ಕದ್ರಿ ನವನೀತ ಶೆಟ್ಟಿ ಅವರು ಪ್ರಸ್ತಾವನೆಯೊಂದಿಗೆ ಮಾತನಾಡಿ “ಕ್ಷೇತ್ರದ ಈ ಬಾರಿಯ ಬೃಹ್ಮಕಲಶೋತ್ಸವದಿಂದ ಚಾರಿತ್ರಿಕ ನಿರ್ಮಾಣವಾಗಬೇಕು. ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಬೇರೆ ದೇವೆಸ್ಥಾನಗಳಿಗೆ ಮಾದರಿಯಾಗಬೇಕು” ಎಂದರು.
ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಅಧ್ಯಕ್ಷರಾದ ಜಪ್ಪುಗುಡ್ಡೆ ಗುತ್ತು ಗಣೇಶ್ ಶೆಟ್ಟಿ ಯವರು ಮಾತನಾಡಿ “ಶ್ರೀ ದೇವರ ಭಕ್ತರಾದ ನಾವೆಲ್ಲಾ ಭಕ್ತಿಯಿಂದ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವನ್ನು ಯಶಸ್ಸಿಯಾಗಿ ಆಯೋಜನೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವತ್ತರಾಗೋಣ ” ಎಂದರು .
ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಕಿರಣ್ ರೈ ಬಜಾಲ್ ರವರು “ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬೃಹ್ಮಕಲಶೋತ್ಸವದ ಪ್ರಯುಕ್ತ ಹಲವಾರು ಅಭಿವೃದ್ದಿ ಕಾರ್ಯಗಳು ನೆರವೇರಲಿದ್ದು, ಈ ಎಲ್ಲಾ ಕಾರ್ಯಕ್ರಮಗಳು ಸಾಂಗವಾಗಿ ಜರುಗಲು ಎಲ್ಲರೂ ಸಹಕಾರ ನೀಡಬೇಕೆಂದು” ಕೋರಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅವರು ಮಾತನಾಡಿ “ ಶ್ರೀ ದೇವರ ಅನುಗ್ರಹದಿಂದ ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಹಾಗೂ ಕ್ಷೇತ್ರದ ಸರ್ವ ಭಕ್ತರ ಸಹಕಾರದೊಂದಿಗೆ ಬೃಹ್ಮಕಲಶೋತ್ಸವವನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸಲು ಎಲ್ಲರೂ ಕೈ ಜೋಡಿಸಬೇಕೆಂದು” ವಿನಂತಿಸಿದರು.
ಕರುಬಿಸ್ಥಾನ ವೈದ್ಯನಾಥ ದೈವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಮನ್ಕು ತೋಟಗೊತ್ತು ಶ್ರೀ ಅನಿಲ್ ಶೆಟ್ಟಿ, ಶ್ರೀ ಅರವಿಂದ ಬೋಳಾರ್, ಮಾಜಿ ಟ್ರಸ್ಟಿಗಳಾದ ಶ್ರೀಮತಿ ಶಾಂಭವಿ ಕೊಟ್ಟಾರಿ, ಶ್ರೀಮತಿ ರೂಪ ಮುರಳಿಧರ, ಶ್ರೀ ಮೋಹನ್ ದಾಸ್ ಶೆಟ್ಟಿ, ಮಾಜಿ ಮೇಯರ್ ಸೇಸಮ್ಮ, ಶ್ರೀ ಸಂತೋಷ್ ಶೆಟ್ಟಿ, ಮಾಜಿ ಕಾರ್ಪೊರೇಟರ್‌ಗಳಾದ ವೀಣಾಮಂಗಳ, ಶಾಂತ, ಶ್ರೀ ಯಶೋಧರ ಚೌಟ, ಶ್ರೀ ನಾಗೇಂದ್ರ ಕುಮಾರ್, ಶೋಭಾ ಪೂಜಾರಿ, ಶ್ರೀ ದಿನೇಶ್ ಅಂಚನ್, ಶ್ರೀ ಗೋಪಾಲ ಪೂಜಾರಿ ವೀರನಗರ, ಶ್ರೀ ಯತೀಶ್ ಪೆರ್ಜಿಲ, ಶ್ರೀ ಸಂದೀಪ್ ಶೆಟ್ಟಿ, ಸತ್ಯ ಪ್ರಸಾದ ಶೆಟ್ಟಿ, ಶ್ರೀ ಸಂತೋಷ್ ಆಳ್ವ, ಸಮಿತಿ ಸದಸ್ಯರುಗಳಾದ ಶ್ರೀ ಬಿ. ನಾಗೇಶ್ ಶೆಟ್ಟಿ, ಶ್ರೀ ಹರೀಶ್ ಬಿ.ಎಂ, ಶ್ರೀ ಸದಾಶಿವ ದಾಸ್, ಶ್ರೀ ಮಿಥುನ್ ಬಜಾಲ್, ಶೀನ, ಶ್ರೀಮತಿ ಪೂರ್ಣಿಮಾ ರಾವ್, ಕವಿತಾ ಕಿರಣ್, ಐಮಾವತಿ ಶೆಟ್ಟಿ, ಶ್ರೀಮತಿ ಆರತಿ ಆಳ್ವ, ಶ್ರೀ ದಾಮೋದರ ಶೆಟ್ಟಿ, ಶ್ರೀ ಜಯ ಬಜಾಲ್, ಶ್ರೀ ರಮೇಶ್ ಸಾಲಿಯಾನ್, ಪ್ರಧಾನ ಅರ್ಚಕ ಶ್ರೀ ಸುಪ್ರೀಂ ನಾಡಿಗ್ ಹಾಗೂ ಸ್ಥಳೀಯ ದೇವಸ್ಥಾನ, ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.
ಶ್ರೀಮತಿ ಸುಜಾತ ಲೋಲಾಕ್ಷ ಆಚಾರ್ಯ ಪ್ರಾರ್ಥನೆಯನ್ನು ನೇರವೇರಿಸಿದರು. ಶ್ರೀ ಬಿ. ಅಭಿಷೇಕ್ ಶೆಟ್ಟಿ ಯವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಪೂರ್ಣಿಮಾ ರಾವ್ ಅವರು ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು