5:14 AM Tuesday8 - July 2025
ಬ್ರೇಕಿಂಗ್ ನ್ಯೂಸ್
ಪುನರ್ವಸು ಮಳೆ ಅಬ್ಬರ: ಕೊಚ್ಚಿ ಹೋಗುವ ಭೀತಿಯಲ್ಲಿ ತೀರ್ಥಹಳ್ಳಿಯ ಕುನ್ನಿಕೇವಿ ಸೇತುವೆ! ತುಂಗಾ ಕಮಾನು ಸೇತುವೆ ಮೇಲೆ ಹರಿಯುತ್ತಿದೆ ನೀರು!: ಹೆದ್ದಾರಿ ಇಂಜಿನಿಯರ್ ಗಳ ಅದ್ಬುತ… ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ…

ಇತ್ತೀಚಿನ ಸುದ್ದಿ

‘ಪಿಲಿಪಂಜ’ ತುಳು ಸಿನಿಮಾ ಶೀರ್ಷಿಕೆ ಬಿಡುಗಡೆ: ನವೆಂಬರ್‌ 7ರಂದು ಮಂಗಳೂರಿನಲ್ಲಿ ಚಿತ್ರೀಕರಣ ಆರಂಭ

01/11/2024, 23:44

ಮಂಗಳೂರು(reporterkarnataka.com): ಎಸ್ ಬಿ ಗ್ರೂಪ್ಸ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ನಿರ್ಮಾಣದ, ಪಿಲಿಪಂಜ ಸಿನಿಮಾದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ನಗರದ ಬಂದರಿನ ಶ್ರೀ ನಿತ್ಯಾನಂದ ಸೇವಾಶ್ರಮದಲ್ಲಿ ನಡೆಯಿತು.
ಹಿರಿಯ ತುಳು ರಂಗಭೂಮಿ ಹಾಗೂ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಶೀರ್ಷಿಕೆ ಬಿಡುಗಡೆ ಮಾಡುತ್ತಾ, “ಪಿಲಿಪಂಜ” ಒಂದು ವಿಭಿನ್ನ ಹಾಗೂ ಕುತೂಹಲ ಮೂಡಿಸುವ ಟೈಟಲ್. ಇದೊಂದು ವಿಭಿನ್ನ ಚಿತ್ರವಾಗಿ ಮೂಡಿಬರುವುದರಲ್ಲಿ ಸಂಶಯವಿಲ್ಲ. ಒಂದೊಳ್ಳೆ ಕಥೆಯೊಂದಿಗೆ ಚಿತ್ರ ತಂಡ ನಮ್ಮ ಮುಂದೆ ಬರುತ್ತಿದೆ, ತುಳುನಾಡಿನ ಜನತೆ ಈ ಚಿತ್ರವನ್ನು ಗೆಲ್ಲಿಸಿ ಕೊಡ ಬೇಕು. ಗುರು ನಿತ್ಯಾನಂದರ ಆಶೀರ್ವಾದ ಚಿತ್ರ ತಂಡದ ಮೇಲಿರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಿಯಾನ ಪ್ರೊಡಕ್ಷನ್ ಹೌಸ್ ನ ಪ್ರತೀಕ್ ಪೂಜಾರಿ, ಚಿತ್ರದ ನಿರ್ದೇಶಕ ಭರತ್ ಶೆಟ್ಟಿ, ಎಕ್ಸಿಕ್ಯುಟಿವ್ ಪ್ರೊಡ್ಯುಷರ್ ರಮೇಶ್ ರೈ ಕುಕ್ಕುವಳ್ಳಿ, ಮುಂಬಯಿಯ ರಂಗ ನಿರ್ದೇಶಕ, ಭ್ರಾಮರಿ ಸುದ್ದಿವಾಹಿನಿಯ ರೂವಾರಿ ಬಾಬಾ ಪ್ರಸಾದ್ ಅರಸ, ಪ್ರಕಾಶ್ ಶೆಟ್ಟಿ ಧರ್ಮನಗರ, ರಾಜೇಶ್ ಕಣ್ಣೂರು, ರಕ್ಷಣ್ ಮಾಡೂರು, ಅಕ್ಷತ್ ವಿಟ್ಲ, ಸುರೇಶ್ ಬಲ್ಮಠ,ಅಭಿಷೇಕ್ ಕುಲಾಲ್, ಚಿತ್ರದ ಸಂಕಲನಕಾರ ಶ್ರೀನಾಥ್ ಪವರ್ ಮುಂತಾದವರು ಉಪಸ್ಥಿತರಿದ್ದರು.
ನವೆಂಬರ್‌ 7ಕ್ಕೆ ಮಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ.
ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ರವಿ ರಾಮಕುಂಜ, ಸುಂದರ್ ರೈ ಮಂದಾರ, ಶಿವಪ್ರಕಾಶ್ ಪೂಂಜ, ರೂಪಾಶ್ರೀ ವರ್ಕಾಡಿ, ಪ್ರಕಾಶ್ ಶೆಟ್ಟಿ ಧರ್ಮನಗರ, ರಕ್ಷಣ್ ಮಾಡೂರು, ಪ್ರವೀಣ್ ಕೊಡಕ್ಕಲ್, ರಂಜನ್ ಬೋಳಾರ್ , ದಿಶಾ ರಾಣಿ ಮುಂತಾದವರು ನಟಿಸಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು