ಇತ್ತೀಚಿನ ಸುದ್ದಿ
ಮೂಡಬಿದ್ರೆ: 4 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ 17 ಪ್ರಕರಣಗಳ ಆರೋಪಿಯ ಬಂಧನ
20/04/2026, 14:15
ಮೂಡಬಿದ್ರೆ(reporterkarnataka.com): ಸುಮಾರು 17 ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದ ಆರೋಪಿಯನ್ನು ಮೂಡಬಿದ್ರೆ ಪೊಲೀಸರು ಬಂಧಿಸಿದ್ದಾರೆ.
ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆ. ಅಬ್ದುಲ್ ಬಶೀರ್ ಅಲಿಯಾಸ್ ಅರ್ಗ ಬಶೀರ್ (50) ಎಂಬಾತನ ವಿರುದ್ಧ ಮಂಗಳೂರು ನಗರ, ಚಿಕ್ಕಮಂಗಳೂರು ಜಿಲ್ಲೆ ಗಳಲ್ಲಿ ಸುಮಾರು 17 ಪ್ರಕರಣಗಳು ದಾಖಲಾಗಿತ್ತು. ಆರೋಪಿಯು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸುಮಾರು 4 ವರ್ಷಗಳಿಂದ ತಲೆ ಮರಿಸಿಕೊಂಡಿದ್ದು, ಈತನ ವಿರುದ್ಧ ನ್ಯಾಯಾಲಯವು ದಸ್ತಗಿರಿ ವಾರೆಂಟ್, ಉದ್ಗೋಷಣ ವಾರೆಂಟ್ ಹೊರಡಿಸಿದ್ದು, ಈತನನ್ನು ನ್ಯಾಯಾಲಯಕ್ಕೆ ಹಾಜರಾಗದೇ ಮೂಡಬಿದ್ರೆ ತಾಲೂಕು ತೆಂಕ ಮಿಜಾರು ಗ್ರಾಮದ ಆರ್ಗ ಮನೆಯನ್ನು ತನ್ನ ಕುಟುಂಬದೊಂದಿಗೆ ಬಿಟ್ಟು, ದ.ಕ ಜಿಲ್ಲೆಯ ಬಂಟ್ವಾಳ ತಾಲೂಕು ಬಿಸಿ ರೋಡ್ ನ ಪರ್ಲಿಯಾ ಎಂಬಲ್ಲಿ ಬಾಡಿಗೆ ಮನೆಯನ್ನು ಮಾಡಿ ಕುಳಿತವನನ್ನು ಬಾತ್ಮಿದಾರರಿಂದ ಮಾಹಿತಿ ಕಲೆ ಹಾಕಿ ದಿನಾಂಕ: 18-04-2026 ರಂದು 19.30 ಗಂಟೆಗೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್, ಪರ್ಲಿಯ ಎಂಬಲ್ಲಿ ವಶಕ್ಕೆ ಪಡೆದುಕೊಂಡು, ಈತನು ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡ ಕಾರಣ ಈತನ ವಿರುದ್ಧ ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ದಸ್ತಗಿರಿ ಮಾಡಲಾಗಿದೆ.
*ಪ್ರಕರಣಗಳ ವಿವರ*
1. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 413/2017 PÀ®A: 379 ಐಪಿಸಿ ಜೋತೆ 34 ಐಪಿಸಿ section: 4,5,7, 8,9, 11 Karnataka Prevention of cow slaughter and cattle Prevention act 1964.
2. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 439/2017 ಕಲಂ 397,506 ಜೋತೆಗೆ 34 ಐಪಿಸಿ. section: 4,5,7, 8,9, 11 ಗೋ.ಹತ್ಯೆ ನಿಷೇಧ ಕಾಯ್ದೆ.
3. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 46/2019 ಕಲಂ 143, 147, 148,341, 504, 427, 323, 324, 506 R/W 149 IPC
4. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 51/2019 ಕಲಂ 379 ಐಪಿಸಿ
5. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 207/2021 ಕಲಂ 279, 379, 511 ಐಪಿಸಿ ಮತ್ತು 5 ಮತ್ತು 25 ಭಾರತೀಯ ಶಸ್ತ್ರ ಕಾಯ್ದೆ
6. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 41/2022 ಕಲಂ 323, 324, 365, 506, ಜೋತೆಗೆ 34 ಐಪಿಸಿ
7. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 44/2026 ಕಲಂ 208, 269 ಬಿಎನ್.ಎಸ್
8. ಬಜ್ಪೆ ಪೊಲೀಸ್ ಠಾಣಾ ಅ.ಕ್ರ 250/2014 ಕಲಂ 392 ಐಪಿಸಿ section: 4,8,11 Prevention of cruelty to animals act 1960
9. ಬಜ್ಪೆ ಪೊಲೀಸ್ ಠಾಣಾ ಅ.ಕ್ರ 101/2015, ಕಲಂ 143, 147, 148, 448, 323, 324, 504, 363 ಜೊತೆಗೆ 149 ಐಪಿಸಿ
10. ಬಜ್ಪೆ ಪೊಲೀಸ್ ಠಾಣಾ ಅ.ಕ್ರ 199/2016 ಕಲಂ 143, 147, 148,448, 504, 323, 354, 307 ಜೊತೆಗೆÉ 149 ಐಪಿಸಿ
11. ಬಜ್ಪೆ ಪೊಲೀಸ್ ಠಾಣಾ ಅ.ಕ್ರ 200/2016 ಕಲಂ 143,147,148,341,504, 323,324, 307 ಜೋತೆಗೆ 149 ಐಪಿಸಿ
12. ಬಜ್ಪೆ ಪೊಲೀಸ್ ಠಾಣಾ ಅ.ಕ್ರ 170/2017 ಕಲಂ 379,429 ಐಪಿಸಿ ಮತ್ತು section: 9,4 Prevention of cruelty to animals act 1960, section: 3,4 Karnataka Prevention of cow slaughter and cattle Prevention act 1964.
13. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ 267/2015 ಕಲಂ 379 ಐಪಿಸಿ, section: 11,4,8 Karnataka Prevention of cow slaughter and cattle Prevention act 1964. ಮತ್ತು 11(1)(ಆ) ಮತ್ತು 11(1)(A),20,11(1)(E) Prevention of cruelty to animals act 1960
14. ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 21/2017 ಕಲಂ 5,8,9,11, ಕರ್ನಾಟಕ ಗೋ ಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಮತ್ತು ಕಲಂ 66 ಜೋತೆಗೆÉ 192 ಐ.ಎಂ.ವಿ ಆಕ್ಟ್
15. ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ 32/2019 ಕಲಂ 279,379 ಐಪಿಸಿ ಮತ್ತು 4,5,8,9,11 Karnataka Prevention of cow slaughter and cattle Prevention act 1964. ಕಲಂ 11(D) Prevention of cruelty to animals act 1960
16. ಕಳಸ ಪೊಲೀಸ್ ಠಾಣಾ ಅ.ಕ್ರ 77/2018 ಕಲಂ 353, 379 IPC
17. ಕಳಸ ಪೊಲೀಸ್ ಠಾಣಾ ಅ.ಕ್ರ 33/2019 ಕಲಂ 379 ಐಪಿಸಿ
ಈ ಪ್ರಕರಣದಲ್ಲಿ ಮೇಲಾಧಿಕಾರಿಯವರ ನಿರ್ದೇಶನದಂತೆ ಮುಡಬಿದ್ರೆ ಪೊಲೀಸರು ಆರೋಪಿಯ ಪತ್ತೆಯ ಕಾರ್ಯದಲ್ಲಿ ಶ್ರಮಿಸಿರುತ್ತಾರೆ.














