3:41 PM Saturday28 - November 2026
ಬ್ರೇಕಿಂಗ್ ನ್ಯೂಸ್
ಪಶ್ಚಿಮ ಬಂಗಾಳಕ್ಕೆ ಇನ್ನು ಮುಂದೆ ಹೊಸ ಹೆಸರು!: ಮರು ನಾಮಕರಣಕ್ಕೆ ಅದೊಂದೇ ಕಾರಣ! ಮೇಕೆದಾಟು ಯೋಜನೆ : ಪರಿಸರ ಪರಿಣಾಮಗಳ ಅಧ್ಯಯನಕ್ಕೆ ಕೇಂದ್ರ ವನ್ಯಜೀವಿ ಮಂಡಳಿ ಒಪ್ಪಿಗೆ ಮೂಡಿಗೆರೆ | ಮುತ್ತಿಗೆಪುರ ಗ್ರಾಮದ ವಿಂಧನ್ ಮನೆ ಮೇಲೆ ಗುಂಡಿನ ದಾಳಿ: ಕೂದಲೆಳೆಯ… ಆಫ್ರಿಕಾದ ಕಾಂಗೋದಲ್ಲಿ 95 ಕನ್ನಡಿಗರ ಬಂಧನ: ಶಿವಮೊಗ್ಗ, ದಾವಣಗೆರೆಯ ಹಕ್ಕಿಪಿಕ್ಕಿ ಸಮುದಾಯ ಏಜೆಂಟರ… ಚಿಕ್ಕಮಗಳೂರು | ಬಸವ ಮಂಟಪ ಪುಸ್ತಕದ ವಿವಾದ: ಬಾಳೆಹೊನ್ನೂರಿನ ರಂಭಾಪುರಿ ಪೀಠ ಖಂಡನೆ ಕರ್ನಾಟಕದಲ್ಲಿ ಬೈಕ್‌ ಟ್ಯಾಕ್ಸಿ ಸೇವೆಗೆ ಗ್ರೀನ್ ಸಿಗ್ನಲ್: ರಾಜ್ಯ ಸರ್ಕಾರದ ಮೇಲ್ಮನವಿ‌ ವಜಾಗೊಳಿಸಿದ… ಕಾವೇರಿ ನದಿ ನೀರು ಹಂಚಿಕೆ | ಕರ್ನಾಟಕಕ್ಕೆ ಬಿಗ್ ರಿಲೀಫ್: ತಮಿಳನಾಡು 2… ತಲಕಾವೇರಿ ಅನ್ನದಾನ ಮಹಾಯಜ್ಞ ಸಂಪನ್ನ: ಕೊಡಗು ಏಕೀಕರಣ ರಂಗದ ವತಿಯಿಂದ ಒಂದು ತಿಂಗಳ… ಸಿನಿಮಾ ನಟರನ್ನು ನೋಡಿ ಸಿಗರೇಟ್ ಸೇದಬೇಡಿ, ಐಸಿಯು ಸೇರುವ ಪರಿಸ್ಥಿತಿ ಬರಬಹುದು: ಆರೋಗ್ಯ… ಉತ್ತರಾಖಂಡ | ಸುಮಾರು 100 ಮೀಟರ್‌ ಆಳದ ಕಂದಕಕ್ಕೆ ಉರುಳಿದ ಬಸ್: 8…

ಇತ್ತೀಚಿನ ಸುದ್ದಿ

ಮಂಗಳೂರು | ಸಂತ ತೆರೆಜಾ ಚರ್ಚಿನಲ್ಲಿ ಚರ್ಚಿನ ಗಾಯನ ಮಂಡಳಿಯ ವಾರ್ಷಿಕೋತ್ಸವ

28/11/2026, 15:40

ಮಂಗಳೂರು(reporterkarnataka.com): ಮಂಗಳೂರಿನ ಸಂತ ತೆರೆಜಾ ಚರ್ಚಿನಲ್ಲಿ ಚರ್ಚಿನ ಗಾಯನ ಮಂಡಳಿಯ ವಾರ್ಷಿಕೋತ್ಸವ ಜರಗಿತು.
ಪ್ರಾರಂಭದಲ್ಲಿ ನಡೆದ ಬಲಿಪೂಜೆಯಲ್ಲಿ ತಂಡದ ಪ್ರತಿ ಸದಸ್ಯರು ಭಾಗವಹಿಸಿದರು. ಸಂಜೆ ಸಭಾಕಾರ್ಯಕ್ರಮದಲ್ಲಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ರೆ.ಫಾ.ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಮಾತನಾಡಿ, ಗಾಯನ ಮಂಡಳಿಯು ಬಲಿಪೂಜೆ ಹಾಗೂ ಹಬ್ಬದ ಸಮಯದಲ್ಲಿ ದೇವ ಗೀತೆಗಳನ್ನು ಹಾಡಿರುವುದು ಭಕ್ತಿಗೆ ಪೂರಕವಾಗಿದೆ. ಸದಸ್ಯರ ಸಮಯ ತ್ಯಾಗವನ್ನು ಮೆಚ್ಚಿದ ಅವರು ಯಾರು ಹಾಡುತ್ತಾರೋ ಅವರು ಹೆಚ್ಚಿನ ಪ್ರಾರ್ಥನೆ ಮಾಡಿದಂತಾಗುತ್ತದೆ ಎಂದು ಪ್ರತಿ ಸದಸ್ಯರಿಗೆ ಕೃತಜ್ಞತೆ ಅರ್ಪಿಸಿ ಮುಂದೆಯೂ ಸಹಕರಿಸಬೇಕು ಎಂದರು.
ವೇದಿಕೆಯಲ್ಲಿದ್ದ ಸಹಾಯಕ ಧರ್ಮಗುರು ವಂ.ಫಾ.ಜೋಸೆಫ್ ಕುವೆಲ್ಲೊ, ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡೀಸ್, ಸಿ.ಮೊಂತಿ ಅವರು ಶುಭಾಶಯ ತಿಳಿಸಿದರು.
ಗಾಯನ ಮಂಡಳಿಯ ಅಧ್ಯಕ್ಷೆ ಲಿಝಿ ಫೆರ್ನಾಂಡೀಸ್ ಸ್ವಾಗತಿಸಿದರು. ಸದಸ್ಯರು ಅನಿಸಿಕೆ ವ್ಯಕ್ತಪಡಿಸಿದರು. ಹಿರಿಯ ಸದಸ್ಯ ಹಾಗೂ ಕೊಯರ್ ಮಾಸ್ಟರ್ ಚಾರ್ಲ್ಸ್ ಡಿಮೆಲ್ಲೊ, ಸದಸ್ಯರಾದ ಮರಿಯಾ ರೇಗೊ, ಪ್ರಿಯಾನ್, ಅಲಿಶ್ಯಾ, ವಿನೋಲಾ, ಅಲಿಟಾ ಜನಿಶ್ಯಾ, ಮಿಶೆಲ್, ರಿಶೋನ್, ಏತನ್, ಹೆಲ್ಡನ್, ಓಸಿನ್, ಕ್ರಿಸ್, ಆಧ್ಯಾತ್ಮಿಕ ಸಮಿತಿಯ ಸಂಚಾಲಕ ಆಸ್ಟಿನ್ ಮೊಂತೇರೊ, ಸಿ.ದೊರೊತಿ ಮೊದಲಾದವರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು