ಇತ್ತೀಚಿನ ಸುದ್ದಿ
Kodagu | ಕಾಡಾನೆ ದಾಳಿ: ತೋಟದ ಮಾಲೀಕ ಸ್ಥಳದಲ್ಲೇ ಸಾವು; ಬೆಳಗ್ಗೆ ತೋಟಕ್ಕೆ ಹೋದವರು ಮತ್ತೆ ಮನೆಗೆ ವಾಪಸ್ ಬರಲೇ ಇಲ್ಲ
26/11/2026, 15:19
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕಾಡಾನೆಯ ಭೀಕರ ದಾಳಿಗೆ ತೋಟ ಮಾಲೀಕ ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ತಾರೀಕಟ್ಟೆ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕೇಶವಯ್ಯ, (50) ಮೃತ ದುರ್ದೈವಿ. ಇಂದು ಬೆಳಗ್ಗೆ ಎಂದಿನಂತೆ ತೋಟದೊಳಗೆ ಸಂಚರಿಸುತ್ತಿದ್ದಾಗ ಎದುರು ಬಂದ ಕಾಡಾನೆ ಕೇಶವಯ್ಯ ಅವರ ಮೇಲೆ ದಾಳಿ ಮಾಡಿದೆ. ದಾಳಿಯ ರಭಸಕ್ಕೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು, ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಗ್ರಾಮದಲ್ಲಿ ಶೋಕದ ವಾತಾವರಣ ಮನೆಮಾಡಿದೆ.
ಕಾಡಾನೆಗಳ ಹಾವಳಿಯಿಂದ ಕೊಡಗಿನ ಜನರು ಪ್ರತಿದಿನ ಭಯದಲ್ಲೇ ಬದುಕಬೇಕಾಗಿದೆ. ತೋಟಕ್ಕೆ ಹೋಗುವುದೇ ಈಗ ಜೀವಕ್ಕೆ ಅಪಾಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು, ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.












