8:08 AM Sunday27 - September 2026
ಬ್ರೇಕಿಂಗ್ ನ್ಯೂಸ್
ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಸಿದ್ದರಾಮಯ್ಯ!: ಬೆಳ್ಳಿತೆರೆಗೆ ಭರ್ಜರಿ ಎಂಟ್ರಿ ಕೊಟ್ಟ ಮಾಜಿ ಸಿಎಂ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ವಿಜಯನಗರ | ಹೊಸಪೇಟೆ ಬಳಿ ರೈಲು ಡಿಕ್ಕಿಯಾಗಿ 8 ಎಮ್ಮೆಗಳು ಸ್ಥಳದಲ್ಲಿಯೇ ಸಾವು *ಕಾಡಾನೆ ನಿಯಂತ್ರಣ ಚಟುವಟಿಕೆಗೆ ವಾಹನಗಳ ಕೊಡುಗೆ: ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಕೇಂದ್ರ ಹಣಕಾಸು… ಬಂಗಾಳ ಕೊಲ್ಲಿಯಲ್ಲಿ ವಾಯಭಾರ ಕುಸಿತ: ಮಂಗಳೂರು ಸೇರಿದಂತೆ ಕರಾವಳಿ, ಮಲೆನಾಡಿನಲ್ಲಿ ಮಳೆ ಅ.11ರಿಂದ ಕೆಆರ್‌ಎಸ್‌ನಲ್ಲಿ ಸಂಪ್ರದಾಯಬದ್ಧ ಕಾವೇರಿ ಆರತಿ: ಮುಖ್ಯಮಂತ್ರಿ ಉದ್ಘಾಟನೆ *ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ*

ಇತ್ತೀಚಿನ ಸುದ್ದಿ

ಬೆಂಗಳೂರಿಗಿಂತ ಮಡಿಕೇರಿ, ಗದಗದ ವಾಯು ಗುಣಮಟ್ಟವೇ ಬೆಸ್ಟ್; ರಾಜಧಾನಿಯ ಎಕ್ಯೂಐ ಹೇಗಿದೆ?

18/05/2026, 00:42

ಬೆಂಗಳೂರು(reporterkarnataka.com): ರಾಜ್ಯದಲ್ಲಿ ಮಳೆಯ ನಡುವೆಯೇ ವಾಯು ಗುಣಮಟ್ಟದಲ್ಲಿ ಬದಲಾವಣೆ ಕಂಡಿದ್ದು, ಬೆಂಗಳೂರಿನಲ್ಲಿ 75 AQI ನೊಂದಿಗೆ ಸಾಧಾರಣ ಗಾಳಿ ದಾಖಲಾಗಿದೆ. ಆದರೆ ಮಡಿಕೇರಿ ಮತ್ತು ಗದಗ ಅತ್ಯಂತ ಸ್ವಚ್ಛ ನಗರಗಳಾಗಿ ಹೊರಹೊಮ್ಮಿದ್ದು, ಬೆಂಗಳೂರಿನ ಜಯನಗರದಲ್ಲಿ ಮಾಲಿನ್ಯ ಹೆಚ್ಚಾಗಿದೆ.
ಉಸಿರಾಟದ ತೊಂದರೆ ಇರುವವರು ಮಾಸ್ಕ್ ಧರಿಸಲು ಸೂಚಿಸಲಾಗಿದೆ.
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟದ ನಡುವೆಯೇ ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AQI) ಗಮನಾರ್ಹ ಬದಲಾವಣೆಗಳು ಕಂಡುಬಂದಿವೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಬಿಡುಗಡೆ ಮಾಡಿರುವ ಇಂದಿನ ವರದಿಯ ಪ್ರಕಾರ, ಸಿಲಿಕಾನ್ ಸಿಟಿ ಬೆಂಗಳೂರಿನ ಒಟ್ಟಾರೆ ವಾಯು ಗುಣಮಟ್ಟವು ಸಾಧಾರಣ ವಲಯದಲ್ಲಿದೆ. ಆದರೆ ಮಡಿಕೇರಿ ಮತ್ತು ಗದಗದ ವಾಯು ಗುಣಮಟ್ಟ ಉತ್ತಮವಾಗಿದೆ.
ಮಡಿಕೇರಿ ಮತ್ತು ಗದಗದ ಗಾಳಿ ಅತ್ಯಂತ ಆರೋಗ್ಯಕರ ಹಾಗೂ ಸ್ವಚ್ಛವಾಗಿದ್ದು, ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟವು ಇಂದು 75 AQI ದಾಖಲಾಗಿದೆ
ಕರ್ನಾಟಕದ ಕೆಲವು ಜಿಲ್ಲೆಗಳು ದೇಶದಲ್ಲೇ ಅತ್ಯಂತ ಸ್ವಚ್ಛ ಮತ್ತು ಕಡಿಮೆ ಮಾಲಿನ್ಯ ಹೊಂದಿದ ನಗರಗಳಾಗಿ ಹೊರಹೊಮ್ಮಿವೆ. ಇವುಗಳ ಪೈಕಿ ಕೊಡಗು ಮತ್ತು ಗದಗ ಜಿಲ್ಲೆಗಳು ಕೇವಲ 11 ಮತ್ತು 12 AQI ದಾಖಲಿಸುವ ಮೂಲಕ ಅತ್ಯಂತ ಆರೋಗ್ಯಕರ ಹಾಗೂ ಸ್ವಚ್ಛ ಗಾಳಿಯನ್ನು ಹೊಂದಿವೆ.

*ಬೆಂಗಳೂರಿನ ಎಕ್ಯೂಐ ಹೇಗಿದೆ?*
ಇಂದು ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 75 AQI ದಾಖಲಾಗಿದೆ. ನಗರದ ಪ್ರಮುಖ ಗಾಳಿ ಮಾಲಿನ್ಯಕಾರಕಗಳಾದ PM2.5 ಮತ್ತು PM10 ಕ್ರಮವಾಗಿ 44 µg/m³ ಮತ್ತು 54 µg/m³ ಮಟ್ಟದಲ್ಲಿದ್ದು, ನಿಯಂತ್ರಣದಲ್ಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು