7:57 PM Saturday16 - May 2026
ಬ್ರೇಕಿಂಗ್ ನ್ಯೂಸ್
ಬಳ್ಳಾರಿ | ಆಗಸ್ಟ್ 2ರಂದು ‘ಸ್ಟೀಲ್ ಸಿಟಿ ರನ್ 2026’ 5ನೇ ಆವೃತ್ತಿ:… ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ… ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ… ದೇಶದ ಜನತೆಗೆ ಮೋದಿ ಮಿತವ್ಯಯದ ಕರೆ: ವಾಗ್ದಾಳಿ ನಡೆಸಿದ ರಾಹುಲ್‌ಗೆ ಬಿಜೆಪಿ ತಿರುಗೇಟು ಶೃಂಗೇರಿ ಕ್ಷೇತ್ರ ಮರು ಎಣಿಕೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ: ಮತ್ತೆ ರಾಜೇಗೌಡ…

ಇತ್ತೀಚಿನ ಸುದ್ದಿ

ಹಸಿರು ವಲಯ ಭೂಸ್ವಾಧೀನಕ್ಕೆ ವಿಳಂಬ: ಮಾಲಿನ್ಯ ತಡೆಗೆ ಎಂಆರ್ ಪಿಎಲ್ ಹಿಂದೇಟು; ಮೇ 18 ರಿಂದ ಅನಿರ್ಧಿಷ್ಟಾವಧಿ ಧರಣಿ

16/05/2026, 19:47

ಮಂಗಳೂರು(reporterkarnataka.com): ಹಸಿರು ವಲಯ ಭೂಸ್ವಾಧೀನಕ್ಕೆ ವಿಳಂಬವಾಗುತ್ತಿದ್ದು,ಮಾಲಿನ್ಯ ತಡೆಗೆ ಎಂಆರ್ ಪಿಎಲ್ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಮೇ 18ರಿಂದ ಜೋಕಟ್ಟೆ ಹೋರಾಟ ಸಮಿತಿಯಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯಲಿದೆ.
ಎಂಆರ್ ಪಿ ಎಲ್ ಮೂರನೇ ಹಂತದ ಪೆಟ್ ಕೋಕ್, ಸಲ್ಪರ್ ಘಟಕದಿಂದ ಜೋಕಟ್ಟೆ, ಕಳವಾರು, ಕೆಂಜಾರು ಗ್ರಾಮಗಳ ಜನವಸತಿ ಪ್ರದೇಶದಲ್ಲಿ ಉಂಟಾಗಿರುವ ಮಾರಕ ಕೈಗಾರಿಕಾ ಮಾಲಿನ್ಯ ತಡೆಯಲು ಸರಕಾರದ ಆದೇಶದಂತೆ ಕಂಪೆನಿಯು 27 ಎಕರೆ ಪ್ರದೇಶದಲ್ಲಿ ಹಸಿರು ವಲಯ ನಿರ್ಮಿಸಬೇಕಿದೆ.
ಈ ಕುರಿತು 2016 ಎಪ್ರಿಲ್ ನಲ್ಲಿ ರಾಜ್ಯ ಸರಕಾರ ಆಧ್ಯಾದೇಶ ಹೊರಡಿಸಿದೆ. ಹೆಚ್ಚು ಭಾದಿತ ಪ್ರದೇಶವನ್ನು ಗುರುತಿಸಿ ಒಟ್ಟು 27 ಎಕರೆ ಭೂಸ್ವಾಧೀನ ಗೊಳಿಸುವಂತೆ, ಭೂಮಿ, ಮನೆಕಳೆದು ಕೊಳ್ಳುವವರಿಗೆ ನಿಯಮದಂತೆ ಪುನರ್ವಸತಿ ಕಲ್ಪಿಸುವಂತೆ ತನ್ನ ಆದೇಶದಲ್ಲಿ ಸೂಚಿಸಿತ್ತು.
ಈ ಆದೇಶದಂತೆ ಜಮೀನು ಗುರುತಿಸುವ, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಪ್ಯಾಕೇಜ್ ತ್ರಿಪಕ್ಷೀಯ ಮಾತುಕತೆಗಳಲ್ಲಿ ಅಂತಿಮಗೊಂಡಿದೆ. ಆದರೆ, ಕಂಪೆನಿ ಹಾಗು ಜಿಲ್ಲಾಡಳಿತ ಭೂ ಸ್ವಾಧೀನ ಹಾಗು ಸಂತ್ರಸ್ತರಿಗೆ ಏಕಗಂಟಿನ ಪುನರ್ವಸತಿ ಪ್ಯಾಕೇಜ್ ಒದಗಿಸಲು ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದೆ. ಸಂತ್ರಸ್ತರೊಂದಿಗೆ ನೇರವಾಗಿ ಜಮೀನು ಖರೀದಿಸುವ, ಪುನರ್ವಸತಿ ಪ್ಯಾಕೇಜ್ ಒದಗಿಸುವ ಭರವಸೆ ನೀಡಿ, ಈಗ ಕೆಐಎಡಿಬಿ ಮೂಲಕ ಭೂಸ್ವಾಧೀನ ನಡೆಸಲು ಮುಂದಾಗಿದೆ. ಇದರಿಂದಾಗಿ ಭೂ ಸ್ವಾಧೀನ ವಿಳಂಬಗೊಳ್ಳುತ್ತಿದೆ. ತಾಂತ್ರಿಕ ಸಮಸ್ಯೆಗಳು ಎದುರಾಗುವ ಆತಂಕ ಸಂತ್ರಸ್ತರನ್ನು ಕಾಡುತ್ತಿದೆ.
ಜಿಲ್ಲಾಡಳಿತ ಹಾಗೂ ಕಂಪೆನಿಯ ಸಂವೇದನಾ‌ ರಹಿತ ಧೋರಣೆಯಿಂದಾಗಿ ಭೂ ಸ್ವಾಧೀನ ವಿಳಂಬಗೊಳ್ಳುವ, ನೆನಗುದಿಗೆ ಬೀಳುವ ಸಾಧ್ಯತೆಗಳು ಹೆಚ್ಚಿವೆ. ಇದರಿಂದಾಗಿ ಹಸಿರು ವಲಯ ನಿರ್ಮಾಣವೂ ಅಸಾಧ್ಯವಾಗುತ್ತಿದ್ದು, ಕೋಕ್ ಸಲ್ಪರ್ ಘಟಕದ ಮಾಲಿನ್ಯದಿಂದ ಗ್ರಾಮಸ್ಥರ ಸ್ಥಿತಿ ಅಸಹನೀಯಗೊಂಡಿದೆ. ಈ ಹಿನ್ನಲೆಯಲ್ಲಿ ಭೂ ಸ್ವಾಧೀ‌ನ ಹಾಗು ಹಸಿರು ವಲಯ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಆರಂಭಿಸಬೇಕು, ಯಾವುದೇ ಕಾರಣಕ್ಕು ಭೂಸ್ವಾಧೀನ ಪ್ರಕ್ರಿಯೆಯನ್ನು ಕೆಐಎಡಿಬಿ ವಹಿಸಬಾರದು. ಭರವಸೆ ನೀಡಿದಂತೆ ಜಿಲ್ಲಾಡಳಿತದ ಉಸ್ತುವಾರಿಯಲ್ಲಿ ನೇರವಾಗಿ ಭೂ ಸ್ವಾಧೀನ ನಡೆಸಬೇಕು. ಈ ಪ್ರಕ್ರಿಯೆ ತಕ್ಷಣ ಆರಂಭಿಸಬೇಕು, ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ ಇದರ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿ ನಡೆಯಲಿದೆ. ಕೋಕ್ ಸಲ್ಪರ್ ಘಟಕದ ಸಮೀಪ, ಜೋಕಟ್ಟೆ ಗ್ರಾಮ ಪಂಚಾಯತ್ ಕಚೇರಿ ಹಿಂಭಾಗ ಧರಣಿ ನಡೆಯಲಿದ್ದು, ಮೇ 18ರಂದು ಬೆಳಿಗ್ಗೆ 10.00 ಗಂಟೆಗೆ ಧರಣಿಗೆ ಚಾಲನೆ ನೀಡಲಾಗುವುದು, ಹಸಿರು ವಲಯ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರಿಯಲಿದೆ ಎಂದು ಸಮಿತಿಯ ಪ್ರಕಟನೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು