7:51 PM Saturday16 - May 2026
ಬ್ರೇಕಿಂಗ್ ನ್ಯೂಸ್
ಬಳ್ಳಾರಿ | ಆಗಸ್ಟ್ 2ರಂದು ‘ಸ್ಟೀಲ್ ಸಿಟಿ ರನ್ 2026’ 5ನೇ ಆವೃತ್ತಿ:… ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ… ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ… ದೇಶದ ಜನತೆಗೆ ಮೋದಿ ಮಿತವ್ಯಯದ ಕರೆ: ವಾಗ್ದಾಳಿ ನಡೆಸಿದ ರಾಹುಲ್‌ಗೆ ಬಿಜೆಪಿ ತಿರುಗೇಟು ಶೃಂಗೇರಿ ಕ್ಷೇತ್ರ ಮರು ಎಣಿಕೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ: ಮತ್ತೆ ರಾಜೇಗೌಡ…

ಇತ್ತೀಚಿನ ಸುದ್ದಿ

ಬಳ್ಳಾರಿ | ಆಗಸ್ಟ್ 2ರಂದು ‘ಸ್ಟೀಲ್ ಸಿಟಿ ರನ್ 2026’ 5ನೇ ಆವೃತ್ತಿ: ಪೋಸ್ಟರ್ ಬಿಡುಗಡೆ

16/05/2026, 19:50

ಗಣೇಶ್ ಇನಾಂದಾರ್ ಬಳ್ಳಾರಿ

info.reporterkarnataka@gmail.com
ಬಳ್ಳಾರಿ ಸೈಕ್ಲಿಸ್ಟ್ ಮತ್ತು ರನ್ನರ್ಸ್ ಫೌಂಡೇಶನ್ ವತಿಯಿಂದ ಆಯೋಜಿಸಲಾಗುತ್ತಿರುವ “ಸ್ಟೀಲ್ ಸಿಟಿ ರನ್ 2026”ರ ಐತಿಹಾಸಿಕ 5 ನೇ ಆವೃತ್ತಿ ಇದೇ ಆಗಸ್ಟ್ 2ರಂದು ಬಳ್ಳಾರಿಯಲ್ಲಿ ನಡೆಯಲಿದೆ ಎಂದು ಬಳ್ಳಾರಿ ಸೈಕ್ಲಿಸ್ಟ್ ಮತ್ತು ರನ್ನರ್ಸ್ ಫೌಂಡೇಶನ್ ಅಧ್ಯಕ್ಷ
ಡಾ‌. ತಿಪ್ಪಾರೆಡ್ಡಿ ಹೇಳಿದರು.
ಶನಿವಾರ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಬಳ್ಳಾರಿ ಸೈಕಲಿಸ್ಟ್ಸ್ ಅಂಡ್ ರನ್ನರ್ಸ್ ಫೌಂಡೇಶನ್ ವತಿಯಿಂದ ಆಯೋಜಿಸಲಾಗುತ್ತಿರುವ
ಈ ಕಾರ್ಯಕ್ರಮ ಕಳೆದ ಕೆಲವು ವರ್ಷಗಳಿಂದ ಬಳ್ಳಾರಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಫಿಟ್ನೆಸ್ ಮತ್ತು ಓಟದ ಸ್ಪರ್ಧೆಯಾಗಿ ಗುರುತಿಸಿಕೊಂಡಿದೆ.
2022ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಸುಮಾರು 1,100ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ್ದರೆ, ಎರಡನೇ ಆವೃತ್ತಿಯಲ್ಲಿ 2,500ಕ್ಕೂ ಹೆಚ್ಚು ಮತ್ತು ಮೂರನೇ ಹಾಗೂ ನಾಲ್ಕನೇ ಆವೃತ್ತಿಗಳಲ್ಲಿ 4,200ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದರು.
ಈ ವರ್ಷದ ವಿಶೇಷವಾಗಿ ತರಬೇತಿ ಪಡೆದ ವೃತ್ತಿಪರ ಹಾಗೂ ಗಂಭೀರ ಓಟಗಾರರಿಗಾಗಿ ಮೊದಲ ಬಾರಿಗೆ 16 ಕಿಲೋಮಿಟರ್ ಟೈಮ್‌ಡ್ ರನ್ ಪರಿಚಯಿಸಲಾಗುತ್ತಿದೆ . ಜೊತೆಗೆ 10 ಕಿಲೋಮಿಟರ್, ಮತ್ತು 5 ಕಿಲೋಮಿಟರ್ ಟೈಮ್‌ಡ್ ರನ್‌ಗಳೊಂದಿಗೆ ಕುಟುಂಬ ಸಮೇತ ಭಾಗವಹಿಸಲು ಅನುಕೂಲವಾಗುವಂತೆ 3 ಕಿಲೋಮಿಟರ್ ಮಜಾ ರನ್ ಕೂಡ ಆಯೋಜಿಸಲಾಗಿದೆ ಎಂದು ಹೇಳಿದರು.
ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಿಗೆ ಒಟ್ಟು ರೂಪಾಯಿ 7 ಲಕ್ಷಕ್ಕೂ ಅಧಿಕ ಬಹುಮಾನಗಳನ್ನು ವಯೋಮಿತಿ ಹಾಗೂ ಲಿಂಗ ಆಧಾರಿತ ವಿಭಾಗಗಳಲ್ಲಿ ನೀಡಲಾಗುತ್ತದೆ ಎಂದು ಹೇಳಿದರು. ಜೊತೆಗೆ ಇವೆಂಟ್ ಟೀ-ಶರ್ಟ್, ಬಿಬ್ ಸಂಖ್ಯೆ, ಉಪಾಹಾರ, ಕುರುಕಲು ತಿಂಡಿ, ನೀರಿನ ವ್ಯವಸ್ಥೆ, ಮಾರ್ಗ ಸಹಾಯ ಮತ್ತು ಉಚಿತ ಛಾಯಾಚಿತ್ರಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ರವಿಶಂಕರ್ , ಡಾ. ಸಿ. ಕೆ. ಸುಂದರ್ , ನರೇಂದ್ರ ಗಾಂಧಿ , ಸೋಮನಾಥ್ , ವಿಕಾಸ್ ಜೈನ , ಪ್ರಶಾಂತ್ ಷಡ , ವಿನೋದ್ ಜೈನ , ಶಶಿ ಕುಮಾರ್ , ಕೆ. ನಾಗರಾಜ್ , ಸುಂದೀಪ್ ಶರ್ಮ ಸೇರಿದಂತೆ ಸ್ಟೀಲ್ ಸಿಟಿ ರನ್ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ “ಸ್ಟೀಲ್ ಸಿಟಿ ರನ್,2026”ರ ಪೊಸ್ಟರ್ ಬಿಡುಗಡೆ ಮಾಡಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು