ಇತ್ತೀಚಿನ ಸುದ್ದಿ
Mangaluru | ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ, ಸಿಂಚನ 2026 ಅಂತರ ವಿಭಾಗೀಯ ಸಾಂಸ್ಕೃ ತಿಕ ಸಂಭ್ರಮ
01/11/2026, 21:32
ಚಿತ್ರ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರ್ ಮತ್ತು ಮ್ಯಾನೇ ಜ್ಮೆಂಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಸಿಂಚನ 2026 ಅಂತರ ವಿಭಾಗೀಯ ಸಾಂಸ್ಕೃ ತಿಕ ಸಂಭ್ರಮ ಕಾಲೇಜಿನ ಸೃಷ್ಟಿ ಸಭಾಂಗಣದಲ್ಲಿ ಜರುಗಿತು.


ಮುಖ್ಯ ಅತಿಥಿಯಾಗಿ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಚೆಂಡೆ ಬಾರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ನೆಲ ಜಲ ಮಾತೃಭಾಷೆಯನ್ನು ಅಭಿಮಾನದಿಂದ ಪೋಷಿಸಿಕೊಂಡು ಯಾವುದಾರೊಂದು ಕಲೆಯನ್ನು ಜೀವನದಲ್ಲಿ ಕರಗತಗೊಳಿಸಿ ಕೊಂಡಲ್ಲಿ ಅವರ ಬದುಕು ಸುಂದರವಾಗುತ್ತದೆ.


ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನ ಜೀವನಕ್ಕೆ ಎಂಬ ಮಾತನ್ನು ಸ್ಮರಿಸಿಕೊಳ್ಳುತ್ತಾ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತದೆ. ಕನ್ನಡ ಭಾಷೆಯ ಹಿರಿಮೆ ಸೌಂದರ್ಯಗಳನ್ನು ಉಳಿಸಿಕೊಳ್ಳೋಣ ಎಂದು ಕರೆ ನೀಡಿದರು.











ಇನ್ನೊರ್ವ ಅತಿಥಿ ಭಂಡಾರಿ ಫೌಂಡೇಶನ್ ಟ್ರಸ್ಟಿ ದೇವದಾಸ್ ಹೆಗಡೆ ಕನ್ನಡ ರಾಜ್ಯೋತ್ಸವದ ಕುರಿತು ಪ್ರಾಸ್ತವಿಕ ಮಾತುಗಳನ್ನಾಡಿದರು.
ಪ್ರಾಂಶುಪಾಲ ಡಾ.ಎಸ್. ಎಸ್. ಇಂಜಗನೇರಿ ಮಾತನಾಡಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು.
4ನೇ ತರಗತಿಯವರೆಗೆ ಕನ್ನಡದಲ್ಲಿ ಕಲಿಯೋದು ಸೂಕ್ತ ಎಂದರು.



ಭಂಡಾರಿ ಫೌಂಡೇಶನ್ ಟ್ರಸ್ಟಿ ಗಳಾದ ಜಗನ್ನಾಥ ಚೌಟ, ಕೃಷ್ಣ ಹೆಗಡೆ, ವಿದ್ಯಾರ್ಥಿ ಡೀನ್ ವಿದ್ಯಾರ್ಥಿ ಕಲ್ಯಾಣ ಮತ್ತು ಮೂಲ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಪ್ರಶಾಂತ್ ರಾವ್, ಕಲಾ ಮತ್ತು ಸಾಂಸ್ಕೃತಿಕ ಸಂಯೋಜಕ ನವೀನ್ ಪಿಲಾರ್ ಮತ್ತಿರರು ಉಪಸ್ಥಿತರಿದ್ದರು.












