8:35 PM Sunday1 - November 2026
ಬ್ರೇಕಿಂಗ್ ನ್ಯೂಸ್
ಸರ್ಕಾರಿ ಕಚೇರಿ, ಖಾಸಗಿ ಕಂಪನಿಗಳಲ್ಲಿ ಕನ್ನಡ ಬಾವುಟ ಕಡ್ಡಾಯ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ ಆಗುಂಬೆ ಬಳಿ ಭೀಕರ ಕಾರು ಅಪಘಾತ: ವೈದ್ಯ ವಿದ್ಯಾರ್ಥಿ ದುರ್ಮರಣ; 4 ಮಂದಿಗೆ… ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ‘ಇಂಡಿಯಾ’ ಮೈತ್ರಿಕೂಟ ಪಟ್ಟು |… ಬಿಜೆಪಿ ಮರುಸೇರ್ಪಡೆಗೆ ಯತ್ನಾಳ್‌ ಕಠಿಣ ಷರತ್ತು: ವಿಜಯೇಂದ್ರ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ… ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಎಸ್‌ಐಟಿ ನೂತನ ಮುಖ್ಯಸ್ಥರಾಗಿ ಚೇತನ್… ಭೂತಾನ್‌ನಲ್ಲಿ ಹಿಮನದಿ ಸರೋವರ ಸ್ಫೋಟ: ಅಸ್ಸಾಂ, ಬಂಗಾಳದಲ್ಲಿ ಪ್ರವಾಹದ ಎಚ್ಚರಿಕೆ ರಾಜ್ಯಾದ್ಯಂತ ನೀರಿನ ಘಟಕಗಳ ಮೇಲೆ ಅಧಿಕಾರಿಗಳ ದಾಳಿ: 24 ಘಟಕಗಳಿಗೆ ನೋಟಿಸ್; ಮುಳಬಾಗಿಲಿನಲ್ಲಿ… ಅತ್ಯಾಚಾರ ಎಸಗಿದ ಯುವಕರನ್ನು ಅಪಹರಿಸಿ ಹಣದ ಬೇಡಿಕೆಯಿಟ್ಟ ಸಂತ್ರಸ್ತೆ: 10 ಮಂದಿ ಆರೋಪಿಗಳ… ಮಾಜಿ ಸಚಿವ, ಹಿರಿಯ ರಾಜಕಾರಣಿ ಶಿವಾನಂದ ಕೌಜಲಗಿ ನಿಧನ 4 ಎಂಎಲ್‌ಸಿ ಕ್ಷೇತ್ರ ಗೆದ್ದ ಮಾತ್ರಕ್ಕೆ ಬಿಜೆಪಿ ಬಿಗೋದು ಬೇಡ: ಕಲಬುರಗಿಯಲ್ಲಿ ಆರೋಗ್ಯ…

ಇತ್ತೀಚಿನ ಸುದ್ದಿ

ಸರ್ಕಾರಿ ಕಚೇರಿ, ಖಾಸಗಿ ಕಂಪನಿಗಳಲ್ಲಿ ಕನ್ನಡ ಬಾವುಟ ಕಡ್ಡಾಯ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ

01/11/2026, 20:24

ಬೆಂಗಳೂರು(reporterkarnataka.com):ಸರ್ಕಾರಿ ಕಚೇರಿಗಳ ಮೇಲೆ ಬಾವುಟವನ್ನ ಹರಿಸುವುದು ಕಡ್ಡಾಯ ಮಾಡಲಾಗುವುದು. ಖಾಸಗಿ ಕಂಪನಿಗಳಲ್ಲೂ ಕನ್ನಡದ ಬಾವುಟವನ್ನು ಹಾರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿಧಾನಸೌಧದ ಮೇಲೆಯೂ ಈ ಧ್ವಜ ಹಾರಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​​ ಹೇಳಿದರು.
ಕಂಠೀರವ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರು, ಧ್ವಜಾರೋಹಣ ನೆರವೇರಿಸಿ ಬಳಿಕ ರಾಜ್ಯವನ್ನುದ್ದೇಶಿಸಿ ಮಾತನಾಡಿದರು.
ಈ‌ ಭಾಷೆಗೆ ಯಾವುದೇ ಗಡಿ ಇಲ್ಲ. ಬ್ರಿಟೀಷರಿಗೆ ನಮ್ಮ‌ಮಾತೃಭಾಷೆ ಯಾವುದು ನಮೂದು‌ ಮಾಡಿ ಅಂತಾ ಬಿಟ್ಟು ಹೋದ‌ ಇತಿಹಾಸ ಇದೆ. ಎಲ್ಲಾ ಸರ್ಕಾರಿ‌ ಕಚೇರಿಗಳ ಮೇಲೆ ,‌ ಖಾಸಗಿ ಕಚೇರಿಗಳ ಮೇಲೆ ಕನ್ನಡ ಬಾವುಟ ಹಾರಿಸಲು ಆದೇಶ ಹೊರಡಿಸಲು ಸಿದ್ಧತೆ ಮಾಡ್ಕೊಂಡಿದೇವೆ. ನಿನ್ನೆ ಮೊನ್ನೆ ಕೂಡ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದ್ದೇನೆ. ಈ ಅಧಿವೇಶನದಲ್ಲಿ ಕೆಲವು ವಿಚಾರಗಳನ್ನ ಮಂಡನೆ ಮಾಡುತ್ತೇವೆ. ನಮ್ಮ ಧ್ವಜವನ್ನು ನಾವು ಎಲ್ಲಾ ಕಡೆ ಬಳಸಲು ಬದ್ಧರಾಗಿರಬೇಕು. ಬೇರೆ ಯಾವ ರಾಜ್ಯದಲ್ಲೂ ಹೀಗೆ ಧ್ವಜ ಬಳಕೆ ಇಲ್ಲ. ಸಾರ್ವಜನಿಕ ಚರ್ಚೆ, ಶಾಸಕರ ಚರ್ಚೆಗೆ ಅವಕಾಶ ಮಾಡಿಕೊಡುತ್ತೇವೆ. ಜೊತೆಗೆ ಕೇಂದ್ರಕ್ಕೆ ನಿರ್ಣಯ ಕಳಿಸಿಕೊಡ್ತೇವೆ ಎಂದರು.

*ಧ್ವಜದಲ್ಲಿ ಹೊಸ ಬಣ್ಣ ಮತ್ತು ರಾಜ್ಯ ಲಾಂಛನ*
ಕನ್ನಡ ನಾಡಿನ ಸಾಂಪ್ರದಾಯಿಕ ಹಳದಿ ಮತ್ತು ಕೆಂಪು ಬಣ್ಣದ ಧ್ವಜದಲ್ಲಿ ಮತ್ತೊಂದು ಬಣ್ಣವನ್ನು ಹಾಗೂ ಮಧ್ಯ ಭಾಗದಲ್ಲಿ ಕರ್ನಾಟಕದ ರಾಜ್ಯ ಲಾಂಛನವನ್ನು ಅಳವಡಿಸಲು ನಿರ್ಧರಿಸಲಾಗಿದೆ. ಧ್ವಜ 71-72 ರ ಚೌಕಟ್ಟಿನಲ್ಲಿ ವಿವಿಧ ರೀತಿಯಲ್ಲಿ ಸಂಭ್ರಮಿಸಲು ಮತ್ತು ಆಚರಿಸಲು ಸೂಕ್ತ ಮಾರ್ಗದರ್ಶನಗಳೊಂದಿಗೆ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಿ ನಂತರ ಅನುಮತಿಗಾಗಿ ಕೇಂದ್ರಕ್ಕೆ ಕಳಿಸಿಕೊಡಲಾಗುವುದು ಎಂದು ತಿಳಿಸಿದರು.
ಭುವನೇಶ್ವರಿ ತಾಯಿ ಕನ್ನಡವನ್ನು ಕಾಪಾಡುವ ದೇವತೆ. ನಾವಿಂದು ತಾಯಿಗೆ ಪೂಜೆ ಸಲ್ಲಿಸಿದ್ದೇವೆ. ಕನ್ನಡ ಭಾಷೆಗೆ ಯಾವುದೇ ಗಡಿಗಳಿಲ್ಲ. ಬ್ರಿಟಿಷರ ಆಡಳಿತ ಕಾಲದಲ್ಲೂ ಮಕ್ಕಳಿಗೆ ಮಾತೃಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಇತಿಹಾಸವಿತ್ತು. ಸಾಂಸ್ಕೃತಿಕವಾಗಿ ಈ ಭಾಷೆಗೆ ಸುದೀರ್ಘ ಇತಿಹಾಸವಿದೆ. ಇಂತಹ ಧ್ವಜ ಮಾದರಿ ಬೇರೆ ಯಾವುದೇ ರಾಜ್ಯದಲ್ಲೂ ಇಲ್ಲ. ನಮ್ಮ ಉಸಿರು, ನಮ್ಮ ಭಾಷೆ, ನೆಲ ಹಾಗೂ ಧ್ವಜವನ್ನು ರಕ್ಷಿಸಲು ನಾವು ಸದಾ ಬದ್ಧರಾಗಿದ್ದೇವೆ. ದೇಶ-ವಿದೇಶಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುತ್ತಿರುವ ಎಲ್ಲಾ ಕನ್ನಡಿಗರಿಗೂ ಹೆಮ್ಮೆಯಿಂದ ಧನ್ಯವಾದಗಳನ್ನು ಅರ್ಪಿಸುವುದಾಗಿ’ ಅವರು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು