ಇತ್ತೀಚಿನ ಸುದ್ದಿ
ಪ್ಲಾಸ್ಟಿಕ್ ನೋಟುಗಳ ಬಳಕೆ 2027ರಿಂದಲೇ ಆರಂಭ: ಹಾಗಾದರೆ ಹಳೆ 10, 20 ಮುಖಬೆಲೆ ನೋಟುಗಳು ಚಾಲ್ತಿಯಲ್ಲಿರುತ್ತವೆಯೇ?
02/11/2026, 13:22
ನವದೆಹಲಿ(reporterkarnataka.com): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೊಸ ಮಾದರಿಯ ₹10 ಮತ್ತು ₹20 ಮುಖಬೆಲೆಯ ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು ಪ್ರಾಯೋಗಿಕವಾಗಿ ಮುಂದಿನ ಏ.1ರಿಂದ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ.
ಪ್ರಸ್ತುತ ಚಲಾವಣೆಯಲ್ಲಿರುವ ₹10 ಮತ್ತು ₹20 ಕಾಗದದ ನೋಟುಗಳ ಗಾತ್ರ ಮತ್ತು ಅಳತೆಯನ್ನೇ ಈ ಹೊಸ ಪ್ಲಾಸ್ಟಿಕ್ ನೋಟುಗಳಿಗೂ ಮುಂದುವರಿಸಲಾಗುತ್ತದೆ. ಇದನ್ನು ನೋಡಿಕೊಂಡು ಮುಂದೆ ಇತರ ಮೌಲ್ಯದ ನೋಟುಗಳನ್ನು ಈಗಿನ ನೋಟುಗಳ ಮಾದರಿಯಲ್ಲೇ ಜಾರಿ ಮಾಡಲಾಗುತ್ತದೆ. ಇದರಿಂದಾಗಿ ಬ್ಯಾಂಕುಗಳು ತಮ್ಮ ಎಟಿಎಂ (ಎಟಿಎಂ) ಯಂತ್ರಗಳನ್ನು ಮರುವಿನ್ಯಾಸಗೊಳಿಸುವ ಹೆಚ್ಚುವರಿ ವೆಚ್ಚ ತಪ್ಪುತ್ತದೆ.
*ಹಳೇ ನೋಟು ಬ್ಯಾನ್ ಇಲ್ಲ*
ಇದು ಕೇವಲ ಪ್ರಾಯೋಗಿಕ ಪರೀಕ್ಷೆಯಾಗಿದ್ದು, ಹೊಸ ಪಾಲಿಮರ್ ನೋಟುಗಳ ಜೊತೆಗೆ ಸದ್ಯ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಕಾಗದದ ನೋಟುಗಳು ಕೂಡ ಎಂದಿನಂತೆ ಚಲಾವಣೆಯಲ್ಲಿರುತ್ತವೆ.
*200 ಕೋಟಿ ನೋಟುಗಳ ಮುದ್ರಣ:*
ಈ ಯೋಜನೆಯಡಿ ರಿಸರ್ವ್ ಬ್ಯಾಂಕ್ ₹10 ಮುಖಬೆಲೆಯ 100 ಕೋಟಿ ನೋಟುಗಳು ಹಾಗೂ ₹20 ಮುಖಬೆಲೆಯ 100 ಕೋಟಿ ನೋಟುಗಳು ಸೇರಿದಂತೆ ಒಟ್ಟು 200 ಕೋಟಿ ಪಾಲಿಮರ್ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
*ಪಾಲಿಮರ್ ನೋಟುಗಳ ಉಪಯೋಗವೇನು?*
ಇವು ಪ್ಲಾಸ್ಟಿಕ್ ಮಿಶ್ರಿತ ವಸ್ತುವಿನಿಂದ ತಯಾರಾಗುವುದರಿಂದ ನೀರು ನಿರೋಧಕವಾಗಿದ್ದು, ಸುಲಭವಾಗಿ ಹರಿದು ಹೋಗುವುದಿಲ್ಲ. ಸಾಮಾನ್ಯ ಕಾಗದದ ನೋಟುಗಳಿಗಿಂತ ಇವು 3 ರಿಂದ 4 ಪಟ್ಟು ಹೆಚ್ಚು ಕಾಲ ಬಾಳಿಕೆ ಬರುತ್ತವೆ ಮತ್ತು ಇವುಗಳನ್ನು ನಕಲು ಮಾಡುವುದು ತುಂಬಾ ಕಷ್ಟ.













