2:34 AM Monday10 - August 2026
ಬ್ರೇಕಿಂಗ್ ನ್ಯೂಸ್
Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ…

ಇತ್ತೀಚಿನ ಸುದ್ದಿ

ಕೊಟ್ಟಾರಚೌಕಿಯ ಮಾಲಾಡಿ ರಸ್ತೆ ರಾಜಕಾಲುವೆ ತಡೆಗೋಡೆಗೆ 20 ಕೋಟಿ ವಿಶೇಷ ಪ್ಯಾಕೇಜ್: ಶಾಸಕ ಡಾ. ಭರತ್ ಶೆಟ್ಟಿ

31/12/2022, 23:51

ಮಂಗಳೂರು(reporterkarnataka.com); ಸಣ್ಣ ನೀರಾವರಿಯ 20 ಕೋಟಿ ರೂ. ವಿಶೇಷ ಪ್ಯಾಕೇಜಿನಲ್ಲಿ ಬಂಗ್ರಕೂಳೂರು 16ನೇ ವಾರ್ಡ್ ವ್ಯಾಪ್ತಿಯ ಕೊಟ್ಟಾರಚೌಕಿಯ ಮಾಲಾಡಿ ರಸ್ತೆ ರಾಜಕಾಲುವೆ ತಡೆಗೋಡೆಗೆ 1.30 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ. ಹೇಳಿದರು.

ಅವರು ಇಲ್ಲಿನ ರಾಜಕಾಲುವೆಗೆ ತಡೆಗೋಡೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯದ ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್‌ ಅವರು ಕೃತಕ ನೆರೆ ಭೀತಿ ನಿವಾರಿಸುವ ಸಲುವಾಗಿ , ಚರಂಡಿ, ಕಾಲುವೆ, ತಡೆಗೋಡೆ, ರಸ್ತೆ ಮತ್ತಿತರ ಕಾಮಗಾರಿಗಾಗಿ 23 ಕೋ.ರೂ ವಿಶೇಷ ಅನುದಾನ ನೀಡಿದ್ದು ಅಗತ್ಯವಿದ್ದೆಡೆ ಕಾಮಗಾರಿ ನಡೆಸಲಾಗುವುದು.

ಕಳೆದ ಹಲವು ವರ್ಷಗಳಿಂದ ಇಲ್ಲಿ ಮಳೆಯ ಸಂದರ್ಭ ನೆರೆ ಅವರಿಸುತ್ತಿದ್ದು ಜನರ ಬೇಡಿಕೆಯಿತ್ತು. ಇದೀಗ ತಡೆಗೋಡೆ ಜತೆಗೆ ಇಲ್ಲಿನ ತಗ್ಗಾದ ಕಾಲು ಸಂಕಗಳನ್ನು ತೆಗೆದು ಎತ್ತರಿಸಲಾಗುವುದು ಎಂದರು.
ಒಳಭಾಗದ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆ ಸೇರಿದಂತೆ ಅಂದಾಜು 1 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುವುದು.
ಸ್ಥಳೀಯ ಮನಪಾ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್, ಬಿಜೆಪಿ ಪ್ರಮುಖರಾದ ಉಮೇಶ ಮಲರಾಯಸಾನ, ಜಯಪ್ರಕಾಶ್ ಕುಲಾಲ್, ರಾಜೇಶ್, ಸುರೇಶ್‌ ಭಂಡಾರಿ,ಕಿರಣ್ ಕೋಟ್ಯಾನ್, ಗೋಪಾಲ್ ಶೆಟ್ಟಿ ಗಣೇಶ್ ಶೆಟ್ಟಿ, ಪಕ್ಷದ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು