8:46 AM Wednesday26 - August 2026
ಬ್ರೇಕಿಂಗ್ ನ್ಯೂಸ್
ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ…

ಇತ್ತೀಚಿನ ಸುದ್ದಿ

ಕೆದೂರು ರೈಲ್ವೆ ಹಳಿ ಬಳಿ ತೋಡಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ: ಸಾವಿನ ಕಾರಣ ಇನ್ನೂ ನಿಗೂಢ

16/07/2022, 21:51

ಕುಂದಾಪುರ(reporterkarnataka.com): ಇಲ್ಲಿಗೆ ಸಮೀಪದ ಕೆದೂರು ಗ್ರಾಮದ  ರೈಲ್ವೆ ಹಳಿಯ ಪಶ್ಚಿಮ ಬದಿಯ ನೀರಿನ ತೋಡಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ.

ಮೃತರನ್ನು ನಿತ್ಯಾನಂದ ಶೇಟ್ ಎಂದು ಗುರುತಿಸಲಾಗಿದೆ. ಕೊಂಕಣ ರೈಲ್ವೆ ಸ್ಟೇಷನ್ ಕುಂದಾಪುರದಲ್ಲಿ ರೈಲ್ವೆ ಟ್ರ್ಯಾಕ್ ಮ್ಯಾನ್ ಆಗಿ  ಕೆಲಸ ಮಾಡಿಕೊಂಡಿರುವ ಪ್ರಶಾಂತ ನಾಯಕ್ ಎಂಬವರಿಗೆ ಮೃತದೇಹ ಪತ್ತೆಯಾಗಿರುವ ಬಗ್ಗೆ ಮಾಹಿತಿ ಬಂದಿತ್ತು. ಅದರಂತೆ ಸ್ಥಳಕ್ಕೆ ಹೋಗಿ ನೋಡಿದಾಗ ವ್ಯಕ್ತಿಯೊಬ್ಬರು ತಲೆಯ ಹಿಂಬದಿಗೆ ತೀವ್ರ ಗಾಯಗೊಂಡು ಮೃತಪಟ್ಟಿರುವುದು ಕಂಡುಬಂದಿದೆ. ವ್ಯಕ್ತಿಯು ರೈಲಿನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಬಿದ್ದು ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು