1:52 AM Wednesday16 - September 2026
ಬ್ರೇಕಿಂಗ್ ನ್ಯೂಸ್
ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ*

ಇತ್ತೀಚಿನ ಸುದ್ದಿ

ಕೇಂದ್ರ ಮೈದಾನದ ಪಕ್ಕ ಕುಸ್ತಿ, ಕಬಡ್ಡಿಗೆ ಎರಡು ಮಿನಿ ಕ್ರೀಡಾಂಗಣ ಅಭಿವೃದ್ಧಿ: ಶಾಸಕ ವೇದವ್ಯಾಸ ಕಾಮತ್‌

18/02/2023, 13:24

ಮಂಗಳೂರು(reporterkarnataka.com): ನಗರದಲ್ಲಿ ಕ್ರೀಡಾ ಚಟುವಟಿಕೆಗಳು ಮತ್ತು ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮೈದಾನದ ಪಕ್ಕದಲ್ಲಿರುವ ಕ್ರೀಡೆಗೇ ಮೀಸಲಾದ ಜಾಗದಲ್ಲಿ ಕಬಡ್ಡಿ ಮತ್ತು ಕುಸ್ತಿಯ ಅಭ್ಯಾಸಕ್ಕಾಗಿ ಎರಡು ಹೊಸ ಕ್ರೀಡಾಂಗಣಗಳನ್ನು ನಿರ್ಮಿಸಲಾಗುವುದು ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ತಿಳಿಸಿದರು.

ಈ ಸಂಬಂಧ ಮಹಾನಗರ ಪಾಲಿಕೆ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಶಾಸಕರು ಮಾಧ್ಯಮಗಳಿಗೆ ವಿವರ ಮಾಹಿತಿ ನೀಡಿದರು.
ಕೇಂದ್ರ ಮೈದಾನದ ಪಕ್ಕದಲ್ಲಿರುವ ಕ್ರೀಡಾ ಮೈದಾನದಲ್ಲಿ ಈ ಹಿಂದೆ ತಾತ್ಕಾಲಿಕ ಅಂಗಡಿಗಳಿಗಾಗಿ ಹಾಕಲಾದ ಫೌಂಡೇಶನ್‌ ಜಾಗದಲ್ಲಿ ಕಬಡ್ಡಿ ಮತ್ತು ಕುಸ್ತಿ ಅಭ್ಯಾಸದ ಕ್ರೀಡಾಂಗಣಗಳನ್ನು ನಿರ್ಮಿಸಲಾಗುತ್ತದೆ. ಕ್ರೀಡೆಗೆ ಮೀಸಲಾದ ಜಾಗವನ್ನು ಕ್ರೀಡಾ ಚಟುವಟಿಕೆಗಳಿಗೇ ಬಳಸುವ ಸಲುವಾಗಿ ಸ್ಮಾರ್ಟ್ ಸಿಟಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಈ ಎರಡು ಕ್ರೀಡಾಂಗಣಗಳನ್ನು ನಿರ್ಮಿಸಲು ಯೋಜನೆ ತಯಾರಿಸಲಾಗಿದೆ. ಇದಕ್ಕಾಗಿ
ಸ್ಮಾರ್ಟ್‌ ಸಿಟಿ ಅಧಿಕಾರಿಗಳಾದ ಅರುಣ್ ಪ್ರಭಾ. ಮಾಜಿ ಮೇಯರ್‍‌ ದಿವಾಕರ್‍‌, ಹಾಗೂ ಕುಸ್ತಿ ಅಸೋಸಿಯೇಶನ್‌ ಗೌರವಾಧ್ಯಕ್ಷರಾದ ಸುರೇಶ್‌ಚಂದ್ರ ಶೆಟ್ಟಿ, ಅಮೆಚೂರ್‍‌ ಕಬಡ್ಡಿ ಅಸೋಸಿಯೇಶನ್‌ ಅಧ್ಯಕ್ಷರಾದ ಗಿರಿಧರ್‍‌ ಶೆಟ್ಟಿ, ಪ್ರಮುಖರಾದ ರತನ್ ಶೆಟ್ಟಿ, ಪುರುಷೋತ್ತಮ್‌ ಪೂಜಾರಿ ಮುಂತಾದವರ ಜತೆಗೆ ಹಾಗೂ ಮನಪಾ ಅಧಿಕಾರಿ ಗಳ ವಿಶೇಷ ಸಭೆ ನಡೆಸಿ ಈ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದರು.

ಈ ಹಿಂದೆ ಇದೇ ಜಾಗದಲ್ಲಿ ತಾತ್ಕಾಲಿಕ ಅಂಗಡಿಗಳ ನಿರ್ಮಾಣಕ್ಕೆಂದು ಸ್ಮಾರ್ಟ್‌ ಸಿಟಿ ವತಿಯಿಂದಲೇ ಅಡಿಪಾಯ ಹಾಕಲಾಗಿತ್ತು. ಆದರೆ ಕಾನೂನು ತೊಡಕುಗಳಿಂದ ಆ ಕೆಲಸ ಸ್ಥಗಿತಗೊಂಡಿದ್ದವು. ಇದೀಗ ತೊಡಕುಗಳನ್ನು ನಿವಾರಿಸಿ, ಆ ಜಾಗವನ್ನು ಕ್ರೀಡಾ ಚಟುವಟಿಕೆಗಳಿಗೇ ಮೀಸಲಿಡುವ ಉದ್ದೇಶದಿಂದ ಹಾಗೂ ಹಿಂದೆ ಮಾಡಿದ ಅಡಿಪಾಯದ ಕೆಲಸಗಳನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ಅಲ್ಲಿ ಸಣ್ಣದಾಗಿ ಕಬಡ್ಡಿ ಮತ್ತು ಕುಸ್ತಿಯ ಕ್ರೀಡಾಂಗಣ ರೂಪಿಸುವ ಬಗ್ಗೆ ಚಿಂತನೆ ನಡೆಸಿ ಅದಕ್ಕೆ ಅನುಮೋದನೆ ನೀಡಲಾಗಿದೆ.

ಸದ್ಯವೇ ಇದಕ್ಕೆ ಶಿಲಾನ್ಯಾಸ ನಡೆಯಲಿದ್ದು, ಸ್ಮಾರ್ಟ್ ಸಿಟಿ ಅನುದಾನವನ್ನು ಕ್ರೀಡೆಗೆ ಉಪಯೋಗ ಮಾಡಲಾಗುವುದು. ಇದರ ಜತೆಗೆ ಉರ್ವದಲ್ಲಿ ಇಂಟರ್‍‌ನ್ಯಾಷನಲ್‌ ಕಬಡ್ಡಿ ಕ್ರೀಡಾಂಗಣ ನಿರ್ಮಿಸಲಾಗುತ್ತದೆ ಎಂದು ಶಾಸಕ ಕಾಮತ್‌ ತಿಳಿಸಿದರು.

ದೈನಂದಿನ ಅಭ್ಯಾಸಕ್ಕಾಗಿ ಚಿಕ್ಕದೊಂದು ಕ್ರೀಡಾಂಗಣದ ಅಗತ್ಯವಿದೆ ಎಂಬುದನ್ನು ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ ನವರು ಗಮನಕ್ಕೆ ತಂದಿದ್ದಾರೆ. ಆ ಬಗ್ಗೆ ಚಿಂತನೆ ನಡೆಸಿ ಇದೀಗ ಹೊಸ ಕ್ರೀಡಾಂಗಣದ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದು ಕಾಮತ್‌ ಹೇಳಿದರು.

ಸ್ಮಾರ್ಟ್‌ ಸಿಟಿ ಅಧಿಕಾರಿಗಳಾದ ಅರುಣ ಪ್ರಭಾ, ಮಾಜಿ ಮೇಯರ್‍‌ ದಿವಾಕರ್‍‌, ಕುಸ್ತಿ ಅಸೋಸಿಯೇಶನ್‌ ಗೌರವಾಧ್ಯಕ್ಷರಾದ ದಿಲ್‌ರಾಜ್‌ ಆಳ್ವ, ಕುಸ್ತಿ ಅಸೋಶಿಯೇಶನ್‌ ಅಧ್ಯಕ್ಷರಾದ ಸುರೇಶ್ಚಂದ್ರ ಶೆಟ್ಟಿ, ಅಮೆಚ್ಯೂರ್‍‌ ಕಬಡ್ಡಿ ಅಸೋಸಿಯೇಶನ್‌ನ ಅಧ್ಯಕ್ಷ ಗಿರಿಧರ್‍‌ ಶೆಟ್ಟಿ, ಪ್ರಮುಖರಾದ ರತನ್ ಶೆಟ್ಟಿ, ಪುರುಷೋತ್ತಮ್‌ ಪೂಜಾರಿ, ಮೋನಪ್ಪ ಕುಳಾಯಿ, ಮನಪಾ ಅಧಿಕಾರಿ ಅಕ್ಷತ್‌, ರವೀಂದ್ರ, ಮನಪಾ ಸರ್ವೇಯರ್‍‌ ಮಹಾಲಿಂಗ, ಉದಯ್‌ ಶೆಟ್ಟಿ ಅವರು ಸಭೆಯಲ್ಲಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು