9:00 AM Monday10 - August 2026
ಬ್ರೇಕಿಂಗ್ ನ್ಯೂಸ್
ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:…

ಇತ್ತೀಚಿನ ಸುದ್ದಿ

ಹೈ ಪ್ರೊಫೈಲ್ ಸೆಕ್ಸ್ ಹಗರಣ: ಬೆಂಗಳೂರಿನ ಯುವತಿ ಸಹಿತ 11 ಮಂದಿ ಅರೆಸ್ಟ್: ರಾಜಕಾರಣಿಗಳು ಭಾಗಿ?

25/07/2022, 19:49

ಬೆಂಗಳೂರು(reporterkarnataka.com):

ಛತ್ತೀಸಗಢದ ರಾಯ್ಪುರದ ಸ್ಟಾರ್​ ಹೋಟೆಲ್​ ನಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳ ಯುವತಿಯರನ್ನು ಇಟ್ಟುಕೊಂಡು ನಡೆಸುತ್ತಿದ್ದ ಭಾರೀ ದಂಧೆ ಬೆಳಕಿಗೆ ಬಂದಿದೆ.

ಅಪರಾಧ ನಿಗ್ರಹ ಮತ್ತು ಸೈಬರ್​ ಘಟಕದ ಸಿಬ್ಬಂದಿ ಹೈ ಪ್ರೊಫೈಲ್​ ವೇಶ್ಯಾವಾಟಿಕೆ ನಡೆಸುತ್ತಿರುವುದನ್ನು ಬಯಲಿಗೆ ಎಳೆದಿದ್ದಾರೆ.

ಈ ಘಟನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬೆಂಗಳೂರಿನ ಯುವತಿ ಸೇರಿದಂತೆ 11 ಮಂದಿ ಯುವತಿಯರು ಹಾಗೂ ಒಬ್ಬ ಕಿಂಗ್​ಪಿನ್​ನನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಯುವತಿ ಹೊರತುಪಡಿಸಿ ನೇಪಾಳ, ಮುಂಬೈ, ದೆಹಲಿ, ಗುಜರಾತ್​ ಮೂಲದವರು ಎಂದು ತಿಳಿದು ಬಂದಿದೆ.

ಇನ್ನು ಇವರ ಸ್ಮಾರ್ಟ್​ಫೋನ್​ಗಳನ್ನು ತನಿಖೆಗೆ ಒಳಪಡಿಸಿದಾಗ ಬೆಂಗಳೂರಿನ ಯುವತಿ ಸೇರಿದಂತೆ ಬಹುತೇಕ ಯುವತಿಯರ ಫೋನ್​ನಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳ ಹೆಸರು ಸೇವ್​ ಆಗಿದ್ದು, ಅವರಿಗೆ ಈ ಯುವತಿಯರು ಕರೆ ಮಾಡಿರುವುದು ತಿಳಿದು ಬಂದಿದೆ. ಆದರೆ ಸದ್ಯ ತನಿಖೆಯ ಹಂತದಲ್ಲಿರುವ ಕಾರಣ, ಯಾರ ಹೆಸರನ್ನೂ ಪೊಲೀಸರು ಬಹಿರಂಗಪಡಿಸಲಿಲ್ಲ.

ಹೋಟೆಲ್​​ನಲ್ಲಿ ಸೆಕ್ಸ್​ ದಂಧೆ ನಡೆಯುತ್ತಿದ್ದ ಬಗ್ಗೆ ರಾಯ್ಪುರ್​​ ಪೊಲೀಸ್​ ಅಪರಾಧ ನಿಗ್ರಹ ಮತ್ತು ಸೈಬರ್ ಘಟಕಕ್ಕೆ ದೂರು ನೀಡಲಾಗಿತ್ತು. ಇದಕ್ಕೋಸ್ಕರ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಎಸ್​​​ಎಸ್​ಪಿ ಅಭಿಷೇಕ್​​ ಮಹೇಶ್ವರಿ ಅವರ ಸೂಚನೆಯಂತೆ ಹೋಟೆಲ್​ಗೆ ವಿಶೇಷ ತಂಡ ಲಗ್ಗೆಹಾಕಿತ್ತು. ಈ ವೇಳೆ, ದಂಧೆ ನಡೆಯುತ್ತಿರುವುದು ಕಂಡು ಬಂದಿದೆ. ಕಾರ್ಯಪ್ರವೃತ್ತರಾದ ಪೊಲೀಸರು ಅಪರಾಧಿಗಳ ಬಂಧನ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು