10:12 AM Sunday9 - August 2026
ಬ್ರೇಕಿಂಗ್ ನ್ಯೂಸ್
ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:…

ಇತ್ತೀಚಿನ ಸುದ್ದಿ

ದಿವಂಗತ ಶಾಸಕ ರಾಜ ವೆಂಕಟಪ್ಪ ನಾಯಕನವರ 67ನೇ ಜನ್ಮದಿನಾಚರಣೆ: ಕಟೌಟ್ ಗೆ ಹಾಲಿನ ಅಭಿಷೇಕ

24/11/2024, 16:21

ಶಿವು ರಾಠೋಡ್ ಯಾದಗಿರಿ

info.reporterkarnataka@gmail.com

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪೇಠಾಮ್ಮಾಪುರ ಗ್ರಾಮದಲ್ಲಿ ದಿವಂಗತ ಶಾಸಕ ರಾಜ ವೆಂಕಟಪ್ಪ ನಾಯಕ ಅವರ 67ನೇ ಜನ್ಮದಿನದ ಪ್ರಯುಕ್ತ ಪೇಠಾಮಪುರ ಗ್ರಾಮದಲ್ಲಿ ದಿವಂಗತ ಶಾಸಕರು ವೆಂಕಟಪ್ಪ ನಾಯಕನವರ ನಾಮಫಲಕ ಉದ್ಘಾಟನೆ ಹಾಗೂ ಬೃಹತ್ ಗಾತ್ರದ ಕಟೌಟ್ ನಿರ್ಮಾಣ ಮಾಡಿ ಹಾಲಿನ ಅಭಿಷೇಕ ಪುಷ್ಪಾಭಿಷೇಕ ಮಾಡಿ ಕೇಕ್ ಕತ್ತರಿಸಿ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪೇಠಾಮಪುರ ಗ್ರಾಮವು ದಿವಂಗತ ಶಾಸಕ ರಾಜ ವೆಂಕಟಪ್ಪರವರಿಗೆ ತವರು ಮನೆ ಇದ್ದ ಹಾಗಿತ್ತು. ಹಾಗಾಗಿ ಬಹಳ ವಿಜೃಂಭಣೆಯಿಂದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ದಿವಂಗತ ಶಾಸಕ ರಾಜ ವೆಂಕಟಪ್ಪ ನಾಯಕನವರ ಆತ್ಮೀಯರಾದ ಸಹೋದರ ಸ್ವರೂಪರಾದ ವಿಠಲ್ ಯಾದವ್ ಅವರ ಮಗನಾದ ಮಹೇಶ್ ವಿ. ಯಾದವ್ ಅವರ ಅಭಿಮಾನಿ ಬಳಗದ ವತಿಯಿಂದ ಸತತ ಮೂರು ದಿನಗಳ ಈ ಕಾರ್ಯಕ್ರಮಕ್ಕೆ ತಯಾರಿ ಮಾಡಲಾಗಿದೆ. ತಾಲೂಕಿನದ್ಯಂತ ದಿವಂಗತ ಶಾಸಕ ರಾಜ ವೆಂಕಟಪ್ಪ ನಾಯಕರವರ ಅಭಿಮಾನಿ ಬಳಗ ಹರಿದು ಬಂದಿತ್ತು. 37 ವರ್ಷಗಳಿಂದದಿವಂಗತ ಶಾಸಕ ರಾಜ ವೆಂಕಟಪ್ಪ ಅವರಿಗೆ ಸ್ನೇಹಿತರಾಗಿ ವಿಠಲ್ ಯಾದವ್ ಬೆನ್ನೆಲುಬಾಗಿ ಯಾವ ಸ್ಥಿತಿಯಲ್ಲೂ ಧೃತಿಗೆಡದೆ ಅವರೊಂದಿಗೆ ಸದಾ ಜೊತೆಗೆ ಇರುತ್ತಿದ್ದರು. ವಿಠಲ್ ಯಾದವ್ ಅಗಲಿದ್ದ ನಮ್ಮ ನಾಯಕನನ್ನ ನೆನೆದು ಭಾವುಕರಾಗಿ ರಾಜ ವೆಂಕಟಪ್ಪ ನಾಯಕನ ಅವರ ಒಡನಾಟದ ಬಗ್ಗೆ ಕುರಿತು ಸವಿಸ್ತಾರವಾಗಿ ವಿವರಣೆ ನೀಡಿದರು. ಅವರ ಅಗಲಿಕೆ ನಮ್ಮನ್ನು ಕೊರಗುತ್ತಿದೆ. ಆದರೂ ನಮ್ಮ ಜನ ಅವರ ಕುಟುಂಬವನ್ನು ಎತ್ತಿ ಹಿಡಿದಿದೆ. ಅವರ ಮಗನಾದ ಸುರಪುರು ಶಾಸಕ ರಾಜ ವೇಣುಗೋಪಾಲ್ ನಾಯಕ್ ಅವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿ ತಮ್ಮ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ರೀತಿ ಸದಾ ಅವರ ಕುಟುಂಬಕ್ಕೆ ಬೆನ್ನೆಲುಬಾಗಿ ತಮ್ಮ ಸೇವೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಬಾವುಕರಾಗಿ ನುಡಿದರು.
ಕಾರ್ಯಕ್ರಮದಲ್ಲಿ ವಿಠಲ್ ಯಾದವ್ , ಮಹೇಶ್ ವಿ. ಯಾದವ್, ಕೃಷ್ಣನ ಜಾದವ್, ಹುಣಸಗಿ ಗ್ಯಾರಂಟಿ ಅಧ್ಯಕ್ಷರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ದಿವಂಗತ ಶಾಸಕರು ರಾಜ ವೆಂಕಟಪ್ಪ ನಾಯಕ ಅಭಿಮಾನಿ ಬಳಗ ಮುಖಂಡರುಗಳು ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು