10:20 AM Thursday17 - September 2026
ಬ್ರೇಕಿಂಗ್ ನ್ಯೂಸ್
ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ*

ಇತ್ತೀಚಿನ ಸುದ್ದಿ

ಬಂಟ್ವಾಳ ತಾಲೂಕಿನಾದ್ಯಂತ ಕಮ್ಯುನಿಸ್ಟ್ ಚಳುವಳಿಯ ಪರಂಪರೆ ಮತ್ತೆ ಮರುಕಳಿಸಲಿದೆ: ಕೆ.ಯಾದವ ಶೆಟ್ಟಿ

13/02/2023, 00:39

ಬಂಟ್ವಾಳ(reporterlarnataka.com):
ಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದಲ್ಲಿ ರೈತ ಕಾರ್ಮಿಕರ ಹೋರಾಟ ಬಂಟ್ವಾಳದಲ್ಲಿ ಪ್ರಭಾವಶಾಲಿಯಾಗಿದ್ದು ದುಡಿಯುವ ವರ್ಗದ ಆಶಾ ಕಿರಣವಾಗಿ ಮೂಡಿಬಂದಿತ್ತು. ಬಳಿಕ ಭೂ ಸುಧಾರಣೆ ಕಾನೂನಿನ ಜಾರಿಗಾಗಿ ನಡೆದ ಸಮರಶೀಲ ಹೋರಾಟ ಬಂಟ್ವಾಳದಲ್ಲಿ ತನ್ನದೇ ಛಾಪನ್ನು ಮೂಡಿಸಿತು. ವಿವಿಧ ವಿಭಾಗದ ಕಾರ್ಮಿಕರಿಗೆ ನ್ಯಾಯ ಒದಗಿಸುವಲ್ಲಿಯೂ ಕಮ್ಯುನಿಸ್ಟರ ಪಾತ್ರವಿದೆ. ಒಟ್ಟಿನಲ್ಲಿ ಸಮಾಜದ ಅಭಿವೃದ್ಧಿಯಲ್ಲಿ ಕೆಂಬಾವುಟದ ಪಾತ್ರವಿದ್ದು,ಅಂತಹ ಕಮ್ಯುನಿಸ್ಟ್ ಚಳುವಳಿಯ ಪರಂಪರೆಯನ್ನು ಮತ್ತೆ ಮರುಕಳಿಸುವಂತಾಗಲು ದುಡಿಯುವ ವರ್ಗದ ಚಟುವಟಿಕೆಗಳು ಬಂಟ್ವಾಳ ತಾಲೂಕಿನಾದ್ಯಂತ ವಿಸ್ತಾರವಾಗಿ ಬೆಳೆಯಬೇಕು. ಅಂತಹ ಚಟುವಟಿಕೆಗಳಿಗೆ ಕೇಂದ್ರ ಸ್ಥಳವಾಗಿ ಸಿಪಿಎಂ ಕಚೇರಿ ಕಾರ್ಯ ನಿರ್ವಹಿಸಬೇಕು ಎಂದು ಸಿಪಿಎಂ ದ. ಕ.ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಆಶಯ ವ್ಯಕ್ತಪಡಿಸಿದರು.
ಅವರು ಬಿ.ಸಿ. ರೋಡ್ ನಲ್ಲಿ ನೂತನ ಸಿಪಿಎಂ ಬಂಟ್ವಾಳ ತಾಲೂಕು ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ. ಬಾಲಕೃಷ್ಣ ಶೆಟ್ಟಿ ಹಾಗೂ ಸುಕುಮಾರ್ ಅವರು ಮಾತನಾಡಿ, ಜನಸಾಮಾನ್ಯರ ಬದುಕಿನ ಬಗ್ಗೆ ಸದಾ ಚಿಂತಿಸಿ ಜನಪರ ಹೋರಾಟಗಳನ್ನು ಸಂಘಟಿಸಿ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಲು ದೇಶದ ಸೌಹಾರ್ದತಾ ಪರಂಪರೆಯನ್ನು ಉಳಿಸಲು ಶ್ರಮಿಸುತ್ತಿರುವ ಸಿಪಿಎಂ ಪಕ್ಷ ಮಾತ್ರವೇ ದೇಶಕ್ಕೆ ಭವಿಷ್ಯ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ. ಕೃಷ್ಣಪ್ಪ ಕೊಂಚಾಡಿ ಅವರು ಮಾತನಾಡುತ್ತಾ, ಸಮಸ್ತ ಮಾನವ ಕುಲದ ಏಳಿಗೆಗಾಗಿ ಶ್ರಮಿಸುವ ಕಮ್ಯುನಿಸ್ಟ್ ಸಿದ್ಧಾಂತದಿಂದ ಮಾತ್ರವೇ ಶೋಷಿತ ಸಮುದಾಯದ ದೀನ ದಲಿತರ ಉದ್ದಾರ ಮಾಡಲು ಸಾಧ್ಯ.ದೇಶದ ಆಳುವ ವರ್ಗ ಕೋಮುವಾದ ಕಾರ್ಪೊರೇಟ್ ಮಿಶ್ರಣದಿಂದ ದೇಶದ ಸಂಪತ್ತನ್ನು ದೋಚುತ್ತಿದೆ.ಅಂತಹ ವಂಚಕರಿಂದ ದೇಶವನ್ನು ಉಳಿಸಬೇಕಾದರೆ ಕಮ್ಯುನಿಸ್ಟ್ ಚಳುವಳಿಯನ್ನು ವಿಸ್ತಾರವಾಗಿ ಬೆಳೆಸುವುದು ಒಂದೇ ದಾರಿ ಎಂದು ಪ್ರತಿಪಾದಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಎಂಪಿ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಕಾರ್ಮಿಕ ವರ್ಗದ ಧ್ವನಿಯಾದ ಸಿಪಿಎಂ ಬಂಟ್ವಾಳದಲ್ಲಿ ನಡೆಸಿದ ಹೋರಾಟಗಳನ್ನು ಮೆಲುಕು ಹಾಕುತ್ತಾ ಭವಿಷ್ಯದ ದಿನಗಳಲ್ಲಿ ಚಳುವಳಿ ಮುನ್ನಡೆಸಲು ಇರುವ ವಿಪುಲ ಅವಕಾಶಗಳ ಬಗ್ಗೆ ವಿವರಿಸಿದರು.


ವೇದಿಕೆಯಲ್ಲಿ ಸಿಪಿಎಂ ಹಿರಿಯ ನಾಯಕರಾದ ಬಿ ವಾಸು ಗಟ್ಟಿ, ಸಂಜೀವ ಬಂಗೇರ, ಮೋನಪ್ಪ ಸಪಲ್ಯ,ನಾರಾಯಣ ಬಡಕಬೈಲ್ ಉಪಸ್ಥಿತರಿದ್ದರು. ಜಿಲ್ಲೆಯ ಕಾರ್ಮಿಕ ಮುಖಂಡರಾದ ಬಿ ಎಂ ಭಟ್ ರವರು ಶುಭಕೋರಿ ಮಾತನಾಡಿದರು.
ಸಮಾರಂಭದಲ್ಲಿ ಸಿಪಿಎಂ ಹಿರಿಯ ನಾಯಕರಾದ ಸುಂದರ ಶೆಟ್ಟಿ ಮೂಡಬಿದ್ರಿ, ಸಿಪಿಎಂ ಬಂಟ್ವಾಳ ತಾಲೂಕು ನಾಯಕರಾದ ಉದಯ ಕುಮಾರ್,ಜನಾರ್ಧನ, ಲೋಲಾಕ್ಷಿ,ಚಂದ್ರ ಪೂಜಾರಿ, ಯುವಜನ ನಾಯಕರಾದ ಅಮೀರ್,ಅಮನ್ ,ಕಾರ್ಮಿಕ ನಾಯಕರಾದ ವಿಮಲ, ನಾರಾಯಣ ಮುಂತಾದವರು ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು