ಇತ್ತೀಚಿನ ಸುದ್ದಿ
ವೇಣೂರು ಕ್ರೈಸ್ಟ್ ಕಿಂಗ್ ಚರ್ಚಿನಲ್ಲಿ ವಾರ್ಷಿಕ ಹಬ್ಬ ಆಚರಣೆ: ಬಲಿಪೂಜೆಗೆ ಗಾಯನ
28/11/2026, 20:14
ಬೆಳ್ತಂಗಡಿ(reporterkarnataka.com): ವೇಣೂರು ಕ್ರೈಸ್ಟ್ ಕಿಂಗ್ ಚರ್ಚಿನಲ್ಲಿ ವಾರ್ಷಿಕ ಹಬ್ಬವನ್ನು ಆಚರಿಸಲಾಯಿತು. ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ನಿರ್ದೇಶಕ ವಂ.ಫಾ.ಪಾವೊಸ್ತಿನ್ ಲುಕಾಸ್ ಲೋಬೊ ಅವರು ಬಲಿಪೂಜೆಯ ನೇತೃತ್ವ ವಹಿಸಿ ಪ್ರವಚನ ನೀಡಿ ಹಬ್ಬದ ಶುಭಾಶಯ ತಿಳಿಸಿದರು.
ಬೆಳ್ತಂಗಡಿ ವಲಯದ ವಲಯದ ಪ್ರಧಾನ ಧರ್ಮಗುರು(ವಿಕಾರ್ ವಾರ್) ಹಾಗೂ ಬೆಳ್ತಂಗಡಿ ಚರ್ಚಿನ ಧರ್ಮಗುರು ವಂ.ಪಾ.ವಾಲ್ಟರ್ ಡಿಮೆಲ್ಲೊ ಬಲಿಪೂಜೆಯಲ್ಲಿ ಭಾಗವಹಿಸಿದರು. ಕೊಯರ್ ಮುಖ್ಯಸ್ಥ ಅಲ್ವಿನ್ ಫೆರ್ನಾಂಡೀಸ್ ಅವರ ಗಾಯನ ತಂಡದಿಂದ ಬಲಿಪೂಜೆಯ ವೇಳೆ ಗಾಯನ ನೆರವೇರಿತು.
ವೇಣೂರು ಚರ್ಚಿನ ಧರ್ಮಗುರು ವಂ.ಫಾ.ಎಡ್ವಿನ್ ಸಂತೋಷ್ ಮೊನಿಸ್ ಕೃತಜ್ಞತೆ ಅರ್ಪಿಸಿದರು. ಉಪಾಧ್ಯಕ್ಷೆ ಸುನೀತಾ ರೇಗೊ, ಕಾರ್ಯದರ್ಶಿ ಹೆನ್ರಿ ಮೊರಾಸ್, ಆಯೋಗಗಳ ಸಂಯೋಜಕಿ ಲತಾ ಮಸ್ಕರೇನಸ್ ಉಪಸ್ಥಿತರಿದ್ದರು.












