3:00 PM Thursday18 - June 2026
ಬ್ರೇಕಿಂಗ್ ನ್ಯೂಸ್
ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

Air India Express | ಮಂಗಳೂರಿನಿಂದ ಹೈದರಾಬಾದ್, ಚೆನ್ನೈಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್: ಏ. 2 ಮತ್ತು 5ರಿಂದ ಹಾರಾಟ ಶುರು

27/03/2025, 19:25

ಮಂಗಳೂರು(reporterkarnataka.com): ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೈದರಾಬಾದ್ (ಬುಧವಾರ) ಮತ್ತು ಚೆನ್ನೈಗೆ (ಶನಿವಾರ) ವಿಮಾನ ಯಾನ ಆರಂಭಿಸಲಿದೆ. ಏಪ್ರಿಲ್ 2 ಮತ್ತು ಏಪ್ರಿಲ್ 5 ರಿಂದ ಹಾರಾಟ ಶುರುವಾಗುತ್ತದೆ.
IX 2915 ವಿಮಾನ ಮಂಗಳೂರಿನಿಂದ ಬೆಳಗ್ಗೆ 6.10ಕ್ಕೆ ಹೊರಟು 8 ಗಂಟೆಗೆ ಹೈದರಾಬಾದ್ ತಲುಪಲಿದೆ. IX 2913 ವಿಮಾನವು ಹೈದರಾಬಾದ್‌ನಿಂದ ಸಂಜೆ 5.25 ಕ್ಕೆ ಹೊರಟು 7.15 ಕ್ಕೆ ಮಂಗಳೂರು ತಲುಪಲಿದೆ.
ಹಾಗೆಯೇ, IX 2917 ವಿಮಾನವು ಮಂಗಳೂರಿನಿಂದ ಮಧ್ಯಾಹ್ನ 2 ಗಂಟೆಗೆ ಹೊರಟು 3.40 ಕ್ಕೆ ಚೆನ್ನೈ ತಲುಪಲಿದೆ. ಹಿಂದಿರುಗುವ ವಿಮಾನ, IX 2918 ಚೆನ್ನೈನಿಂದ ಸಂಜೆ 4.20 ಕ್ಕೆ ಹೊರಟು 6 ಗಂಟೆಗೆ ಮಂಗಳೂರನ್ನು ತಲುಪುತ್ತದೆ.
ವಿಮಾನಯಾನ ಸಂಸ್ಥೆಯು ಈ ಎರಡೂ ಮಾರ್ಗಗಳಲ್ಲಿ 186 ಆಸನಗಳ ಬೋಯಿಂಗ್ 737-800 NG ವಿಮಾನವನ್ನು ನಿಯೋಜಿಸಲಿದೆ. ಪ್ರಸ್ತುತ, ಇಂಡಿಗೋ ಈ ಎರಡು ರಾಜಧಾನಿ ಮಾರ್ಗಗಳಿಗೆ 78 ಆಸನಗಳ ATR ವಿಮಾನಗಳ ಸಂಚಾರ ನಡೆಸುತ್ತಿದೆ. ಇಂಡಿಗೋ ಹೈದರಾಬಾದ್‌ಗೆ ಪ್ರತಿದಿನ ಎರಡು ಮತ್ತು ಮೂರು ವಾರಕ್ಕೊಮ್ಮೆ ಮತ್ತು ಚೆನ್ನೈಗೆ ಎರಡು ದೈನಂದಿನ ವಿಮಾನಗಳ ಯಾನ ನಡೆಸುತ್ತಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈ ಎರಡೂ ಹೊಸ ಮಾರ್ಗಗಳಿಗೆ ಬುಕಿಂಗ್ ಅನ್ನು ತೆರೆದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು