3:28 PM Wednesday22 - July 2026
ಬ್ರೇಕಿಂಗ್ ನ್ಯೂಸ್
ಮುಖ್ಯಮಂತ್ರಿಗಳ ಕಾರ್ಯದರ್ಶಿ ಆಗಿ ಕುಶಾಲನಗರದ ಎಸ್. ಎಸ್. ನಕುಲ್ ನೇಮಕ ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಗ್ರಾಮಸ್ಥರ ಧರ್ಮದೇಟು; ಪೊಲೀಸ್ ವಶಕ್ಕೆ ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ ತೀರ್ಥಹಳ್ಳಿ | ಗುಂಡುಗದ್ದೆ ಬಳಿ ಆಟವಾಡುತ್ತಾ ರಸ್ತೆಗೆ ಬಂದ ಮಗು: ಕಾರು ಡಿಕ್ಕಿಯಾಗಿ… ಧಾರವಾಡ ಟು ಬೆಂಗಳೂರು: ಲಾರಿಯಲ್ಲಿ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಗೋವುಗಳ ಮಾಂಸ ವಶ Mangaluru | ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಭೇಟಿ:… ದಾರಿ ತಪ್ಪಿ ನಾಪೋಕ್ಲು ಪಟ್ಟಣ ಪ್ರವೇಶಿಸಿದ ಜಿಂಕೆ: ವಾಹನಗಳ ಅರ್ಭಟ, ಬೀದಿ ನಾಯಿಗಳ… ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ನಿರ್ಧಾರ ಕೈಬಿಡದಿದ್ದರೆ ಧರಣಿ: ವಿವಿಧ ಸಂಘಟನೆಗಳ ಆಕ್ರೋಶ ಮುತ್ತೈದೆ ಸಾವು ಕಂಡ ಮಹಾತಾಯಿ: ಹುಟ್ಟೂರಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಚೆನ್ನಮ್ಮ…

ಇತ್ತೀಚಿನ ಸುದ್ದಿ

ಮಂಗಳೂರು ಇಸ್ಕಾನ್‌ನಲ್ಲಿ ಆ.15, 16ರಂದು ಜನ್ಮಾಷ್ಟಮಿ ಸಂಭ್ರಮ: ಆಳ್ವಾಸ್ ನ 300 ಮಂದಿ ಕಲಾವಿದರಿಂದ ಶ್ರೀಕೃಷ್ಣ ವೈಭನ

13/08/2025, 22:47

ಮಂಗಳೂರು(reporterkarnataka.com): ನಗರದ ಕೋಡಿಯಲ್‌ಬೈಲ್‌ನಲ್ಲಿರುವ ಶ್ರೀ ಕೃಷ್ಣ ಬಲರಾಮ ಮಂದಿರ, ಇಸ್ಕಾನ್‌ನಲ್ಲಿ ಆ.15 ಮತ್ತು 16ರಂದು ಶ್ರೀಕೃಷ್ಣ ಜನ್ಮಾಷ್ಟಮಿ ನಡೆಯಲಿದೆ ಎಂದು ಇಸ್ಕಾನ್‌ನ ಅಧ್ಯಕ್ಷ ಗುಣಾಕರ ರಾಮದಾಸ ಹೇಳಿದರು.
ಅವರು ಇಂದು ನಗರದ ಶ್ರೀ ಕೃಷ್ಣ ಬಲರಾಮ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಆ.15 ರಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಬೆಣ್ಣ, ಉಯ್ಯಾಲೆ ಸೇವೆಗಳು, ಧಾರ್ಮಿಕ ಕಾರ್ಯಕ್ರಮಗಳು, ಮಹಾಭಿಷೇಕ, ಭಜನೆ, ಆಧ್ಯಾತ್ಮಿಕ ಪ್ರಮಚನಗಳು ನಡೆಯಲಿವೆ ಎಂದರು.
ಆ.16ರಂದು ಮಧ್ಯಾಹ್ನದ ಬಳಿಕ ಶಾರದಾ ವಿದ್ಯಾಲಯ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಹಬ್ಬದ ಫುಡ್ ಸ್ಟಾಲ್, ಭಕ್ತಿಗೀತೆ, ರಸಮಂಜರಿ ನಡೆಯಲಿದ್ದು, ಸಂಜೆ 6 ಗಂಟೆಯಿಂದ ಆಳ್ವಾಸ್ ವಿದ್ಯಾಸಂಸ್ಥೆಯಿಂದ 300 ಜನ ಕಲಾವಿದರನ್ನು ಒಳಗೊಂಡಂತೆ ಶ್ರೀಕೃಷ್ಣ ವೈಭನ ಕಾರ್ಯಕ್ರಮ 2 ಗಂಟೆಗಳ ಕಾಲ ನಡೆಯಲಿದೆ. ಅಂದು ಮೈದಾನದಲ್ಲಿ ಅತಿ ಎತ್ತರದ ಕೃಷ್ಣನ ಆಕೃತಿಯನ್ನು ಪ್ರದರ್ಶಿಸಲಾಗುವುದು ಎಂದ ಅವರು ಅಂದು ರಾತ್ರಿ 10 ಗಂಟೆಗೆ ಮಹಾರುದ್ರ ಅಭಿಷೇಕ, ರಾತ್ರಿ 12 ಗಂಟೆಗೆ ಮಹಾಮಂಗಳಾರತಿ ಸೇವೆ ನಡೆಯಲಿದೆ ಎಂದು ಹೇಳಿದರು.
ಇಸ್ಕಾನ್‌ನ ಉಪಾಧ್ಯಕ್ಷ ಸನಂದನ ದಾಸ, ಸಂಚಾಲಕರುಗಳಾದ ಸುಂದರ ಗೌರ ದಾಸ, ಬಿ.ಜಿ. ಮನು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು