ಇತ್ತೀಚಿನ ಸುದ್ದಿ
Flyover | ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ: ಮಾಣಿ ಬಳಿ ಕಾರಿಗೆ ಒರೆಸಿದ ಟ್ಯಾಂಕರ್: ಅರ್ಧ ತಾಸಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್
25/02/2025, 23:46
ಜಯಾನಂದ ಪೆರಾಜೆ ಬಂಟ್ವಾಳ
info.reporterkarnataka@.com
ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ
ಮಾಣಿ ಜಂಕ್ಷನ್ ನ ಅಳಿರ ಎಂಬಲ್ಲಿ ಓವರ್ ಟೇಕ್ ಮಾಡುವ ಭರದಲ್ಲಿ ಟ್ಯಾಂಕರೊಂದು ಕಾರಿಗೆ ಒರೆಸಿದ್ದರಿಂದ ಇಬ್ಬರೂ ಚಾಲಕರು ಗಾಡಿ ನಿಲ್ಲಿಸಿ ಮಾತಿನ ಚಕಮಕಿ ನಡೆಸಿದ ಪರಿಣಾಮ ಅರ್ಧ ತಾಸಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತು.
ಈ ಸಂದರ್ಭದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು ಆತಂಕದ ವಾತಾವರಣ ಸೃಷ್ಟಿಯಾಯಿತು. ಅರ್ಧ ಗಂಟೆಗೂ ಅಧಿಕ ಸಮಯ ವಾಹನಗಳು ನಿಂತು ಸಂಚಾರಕ್ಕೆ ಅಡಚಣೆ ಉಂಟಾಯಿತು.
ಬಳಿಕ ಬಿಜೆಪಿ ಮುಖಂಡ ಮಾಣಿ ಗಣೇಶ ರೈ ನೇತೃತ್ವದಲ್ಲಿ ಯುವಕರ ತಂಡ ಆಗಮಿಸಿ ವಾಹನ ತರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.
ಮಾಣಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಫ್ಲೈ ಓವರ್ ನ ಕೆಲಸ ನಡೆಯುತ್ತಿದ್ದು ಏಕ ಮುಖ ಸಂಚಾರವಿದೆ. ಅದರಲ್ಲಿ ಸಂಚರಿಸುವುದು ತ್ರಾಸ ದಾಯಕವಾಗಿದೆ.














