2:31 AM Sunday24 - November 2024
ಬ್ರೇಕಿಂಗ್ ನ್ಯೂಸ್
ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ…

ಇತ್ತೀಚಿನ ಸುದ್ದಿ

ಕೋಲಾರ ಕ್ಷೇತ್ರಕ್ಕೆ 376 ಕೋಟಿ ಅನುದಾನ; ಅಭಿವೃದ್ಧಿಗೆ ನಮ್ಮ ಸರ್ಕಾರ ಸಿದ್ದವಿದೆ: ಉಸ್ತುವಾರಿ ಸಚಿವ ಬಿ. ಎಸ್. ಸುರೇಶ್

22/09/2024, 22:39

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ರಾಜ್ಯದಲ್ಲಿನ ಸರಕಾರದಿಂದ ಕಳೆದ ಒಂದು ವರ್ಷದಲ್ಲೇ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ 376 ಕೋಟಿ ಅನುದಾನ ಒದಗಿಸಲಾಗಿದೆ. ಅಭಿವೃದ್ಧಿಯ ದೃಷ್ಟಿಯಿಂದ ಇನ್ನೂ ಅಗತ್ಯವಿರುವಷ್ಟು ಅನುದಾನ ಕೊಡಲು ಸರ್ಕಾರವು ಸಿದ್ಧವಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಸುರೇಶ್ ಹೇಳಿದರು.

ಕೋಲಾರ ತಾಲೂಕಿನ ನರಸಾಪುರ ಗ್ರಾಮದಲ್ಲಿ ನಾಲ್ಕು ಪಥದ ರಸ್ತೆಗೆ 7 ಕೋಟಿ, ರಾಷ್ಟ್ರೀಯ ಹೆದ್ದಾರಿಯಿಂದ ಖಾಜಿಕಲ್ಲಹಳ್ಳಿ ಮಾರ್ಗದ ರಸ್ತೆಗೆ 5 ಕೋಟಿ ಹಾಗೂ ನರಸಾಪುರ ಸೊಸೈಟಿಯ ನೂತನ ಕಟ್ಟಡಕ್ಕೆ 1.5 ಕೋಟಿ ಸೇರಿದಂತೆ ಒಟ್ಟು 13.5 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಯಲ್ಲಿ ಭಾಗವಹಿಸಿ ಅವರು
ಮಾತನಾಡಿದರು.
ಇಡೀ ರಾಜ್ಯದಲ್ಲಿ ನಮ್ಮ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಸರಮಾಲೆಯೇ ನಡೆಯುತ್ತಿದೆ. ವಿಪಕ್ಷಗಳು ಪಕ್ಷಗಳು ಆಡಳಿತ ಪಕ್ಷದ ಮೇಲೆ ಹಣ ಖಾಲಿಯಾಗಿದೆ ಎಂದು ಗೂಬೆ ಕೂರಿಸಲು ಹೊರಟಿದ್ದಾರೆ ಜನಕ್ಕೆ ಅಭಿವೃದ್ಧಿ ಕಣ್ಣಮುಂದೆಯೇ ಇದೆ ಎಂದರು.
ಹಿಂದಿನ ಸರಕಾರದಲ್ಲಿ 40% ಕಮಿಷನ್ ನಿಂದ ಅಭಿವೃದ್ಧಿ ಶೂನ್ಯವಾಗಿತ್ತು, ನಮ್ಮ ಸರಕಾರವು ಜನರ ದುಡ್ಡನ್ನೇ ಜನರಿಗೆ ಕೊಡುತ್ತಿದ್ದೇವೆ ಕಳೆದ ಸರ್ಕಾರದಲ್ಲಿ ಅವರಿಗೆ ತಿನ್ನಲು ಸಾಕಾಗಲಿಲ್ಲ ಅದಕ್ಕೆ ಅಭಿವೃದ್ಧಿ ಶೂನ್ಯವಾಗಿತ್ತು ನಾವು ರಾಜಕಾರಣವನ್ನು ಹೊಟ್ಟೆಪಾಡಿಗೆ, ವ್ಯಾಪಾರಕ್ಕೆ ಮಾಡಲು ಬಂದಿಲ್ಲ ಜನರ ಸೇವೆ ಮಾಡಲು ಬಂದಿದ್ದು ಅಭಿವೃದ್ಧಿಯೇ ನಮ್ಮ ಗುರಿ ಮತ್ತು ಉದ್ದೇಶವಾಗಿದೆ ಎಂದು ಅವರು ನುಡಿದರು.
ರಾಜ್ಯದಲ್ಲಿ ಸರ್ಕಾರವು ನುಡಿದಂತೆ ನಡೆದಿದೆ. ಬಡವರಿಗೆ ಸಾಮಾನ್ಯ ಜನರ ಏಳಿಗೆಗಾಗಿ ಐದು ಗ್ಯಾರಂಟಿಗಳನ್ನು ಕೊಡುತ್ತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷದವರು ಹೇಳಿದ ಸುಳ್ಳಿನ ಸರಪಳಿಯನ್ನು ತುಂಡರಿಸಿದ್ದೇವೆ. ಜನ 136 ಸ್ಥಾನ ಕೊಟ್ಟು ಆಶೀರ್ವಾದ ಮಾಡಿದ್ದಾರೆ. ಸರ್ಕಾರವು ಬಿದ್ದು ಹೋಗುತ್ತದೆ ಎಂದು ವಿಪಕ್ಷಗಳು ಸುಳ್ಳು ಹೇಳುತ್ತಿವೆ. ಜನಕ್ಕೆ ಅಭಿವೃದ್ಧಿಯಾರು ಮಾಡಿದ್ದಾರೆ ಎಂಬುದು ಗೊತ್ತಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, ಅಭಿವೃದ್ಧಿಯನ್ನು ಜನರಿಗೆ ಅನುಕೂಲವಾಗುವಂತೆ ಮಾಡಿದ್ದೇವೆ. ಜನರೇ ಕೆಲಸ ಸರಿಯಾಗಿ ನಡೆಯುತ್ತಿದೆಯೇ ಇಲ್ಲವೇ ಎಂಬುದರ ಗುಣಮಟ್ಟದ ಪರೀಕ್ಷೆಯನ್ನು ಗಮನಿಸಬೇಕು. ಕಳಪೆ ಕೆಲಸವಾದರೆ ದೂರು ನೀಡಬೇಕು ಮಾಧ್ಯಮದವರ ಗಮನಕ್ಕೆ ತರಬೇಕು ಎಂದರು.
ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ತಾರತಮ್ಯ ಮತ್ತು ರಾಜಕೀಯ ಮಾಡಬಾರದು. ಜನರಿಂದ ಆಯ್ಕೆಯಾದ ನಮ್ಮ ಸರಕಾರವು ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡತ್ತಿದ್ದು ಇನ್ನೂ ಕೆಲವು ಕಡೆಗಳಲ್ಲಿ ಟೆಂಡರ್ ನಡೆದಿದ್ದು ಉಳಿದ ರಸ್ತೆಗಳನ್ನು ಹಂತ-ಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು ಸಚಿವರಿಗೆ ಮನವಿ ಮಾಡಿ ನರಸಾಪುರ ಕೈಗಾರಿಕಾ ಪ್ರದೇಶವಾಗಿದ್ದು ಇಲ್ಲಿ ಹೊಸದಾಗಿ ಪೋಲಿಸ್ ಹೊರ ಠಾಣೆಯನ್ನು ಪ್ರಾರಂಭಿಸಬೇಕು. ಸೊಸೈಟಿ ನೂತನ ಕಟ್ಟಡಕ್ಕೆ ನಬಾರ್ಡ್ ವತಿಯಿಂದ 70 ಲಕ್ಷ ನೀಡಿದ್ದು ಉಳಿದ ಹಣವನ್ನು ಸಚಿವರು, ಶಾಸಕರು ಎಂಎಲ್ಸಿಗಳ ಮೂಲಕ ಅನುದಾನ ಬಿಡುಗಡೆ ಮಾಡಲು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಜಿಲ್ಲಾಧಿಕಾರಿ ಅಕ್ರಂ ಪಾಷ, ಎಸ್ಪಿ ಬಿ.ನಿಖಿಲ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ. ಶಿವಕುಮಾರ್, ನರಸಾಪುರ ಗ್ರಾಪಂ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷೆ ಪದ್ಮಮ್ಮ, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಕೋಚಿಮುಲ್ ನಿರ್ದೇಶಕ ಷಂಷೀರ್, ಪಿಎಲ್ಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಮಂಜುನಾಥ್, ಎಂಟಿಬಿ ಶ್ರೀನಿವಾಸ್, ಶ್ರೀರಾಮಪ್ಪ, ಜಾಲಿ ಬಾಬು ಜನಪನಹಳ್ಳಿ ನವೀನ್ ಕುಮಾರ್, ಮುಂತಾದವರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು