10:24 PM Thursday26 - November 2026
ಬ್ರೇಕಿಂಗ್ ನ್ಯೂಸ್
ಪಶ್ಚಿಮ ಬಂಗಾಳಕ್ಕೆ ಇನ್ನು ಮುಂದೆ ಹೊಸ ಹೆಸರು!: ಮರು ನಾಮಕರಣಕ್ಕೆ ಅದೊಂದೇ ಕಾರಣ! ಮೇಕೆದಾಟು ಯೋಜನೆ : ಪರಿಸರ ಪರಿಣಾಮಗಳ ಅಧ್ಯಯನಕ್ಕೆ ಕೇಂದ್ರ ವನ್ಯಜೀವಿ ಮಂಡಳಿ ಒಪ್ಪಿಗೆ ಮೂಡಿಗೆರೆ | ಮುತ್ತಿಗೆಪುರ ಗ್ರಾಮದ ವಿಂಧನ್ ಮನೆ ಮೇಲೆ ಗುಂಡಿನ ದಾಳಿ: ಕೂದಲೆಳೆಯ… ಆಫ್ರಿಕಾದ ಕಾಂಗೋದಲ್ಲಿ 95 ಕನ್ನಡಿಗರ ಬಂಧನ: ಶಿವಮೊಗ್ಗ, ದಾವಣಗೆರೆಯ ಹಕ್ಕಿಪಿಕ್ಕಿ ಸಮುದಾಯ ಏಜೆಂಟರ… ಚಿಕ್ಕಮಗಳೂರು | ಬಸವ ಮಂಟಪ ಪುಸ್ತಕದ ವಿವಾದ: ಬಾಳೆಹೊನ್ನೂರಿನ ರಂಭಾಪುರಿ ಪೀಠ ಖಂಡನೆ ಕರ್ನಾಟಕದಲ್ಲಿ ಬೈಕ್‌ ಟ್ಯಾಕ್ಸಿ ಸೇವೆಗೆ ಗ್ರೀನ್ ಸಿಗ್ನಲ್: ರಾಜ್ಯ ಸರ್ಕಾರದ ಮೇಲ್ಮನವಿ‌ ವಜಾಗೊಳಿಸಿದ… ಕಾವೇರಿ ನದಿ ನೀರು ಹಂಚಿಕೆ | ಕರ್ನಾಟಕಕ್ಕೆ ಬಿಗ್ ರಿಲೀಫ್: ತಮಿಳನಾಡು 2… ತಲಕಾವೇರಿ ಅನ್ನದಾನ ಮಹಾಯಜ್ಞ ಸಂಪನ್ನ: ಕೊಡಗು ಏಕೀಕರಣ ರಂಗದ ವತಿಯಿಂದ ಒಂದು ತಿಂಗಳ… ಸಿನಿಮಾ ನಟರನ್ನು ನೋಡಿ ಸಿಗರೇಟ್ ಸೇದಬೇಡಿ, ಐಸಿಯು ಸೇರುವ ಪರಿಸ್ಥಿತಿ ಬರಬಹುದು: ಆರೋಗ್ಯ… ಉತ್ತರಾಖಂಡ | ಸುಮಾರು 100 ಮೀಟರ್‌ ಆಳದ ಕಂದಕಕ್ಕೆ ಉರುಳಿದ ಬಸ್: 8…

ಇತ್ತೀಚಿನ ಸುದ್ದಿ

Udupi | ಕಾಪುವಿನ ಅಮ್ಮನಿಗೆ ಅಕ್ಷರ ನಮನ ಸಲ್ಲಿಸಿದ ಬಿಗ್‌ಬಾಸ್ ಖ್ಯಾತಿಯ ನಟಿ ಅನುಷಾ ರೈ

26/11/2026, 22:23

ಕಾಪು(reporterkarnataka.com): ಬಿಗ್‌ಬಾಸ್ ಖ್ಯಾತಿಯ, ‘ಕರ್ನಾಟಕ ಕ್ರಶ್’ ಎಂದೇ ಜನಪ್ರಿಯತೆ ಪಡೆದಿರುವ ನಟಿ ಅನುಷಾ ರೈ ಅವರು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ, ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರುಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ದೇವಿಯ ಅನುಗ್ರಹ ಪ್ರಸಾದ ಸ್ವೀಕರಿಸಿದ ಅವರು, ದೇವಸ್ಥಾನದ ವತಿಯಿಂದ ಆಯೋಜಿಸಲಾಗಿರುವ ‘ಕಾಪುವಿನ ಅಮ್ಮನಿಗೊಂದು ಅಕ್ಷರ ನಮನ’ ಎಂಬ ವಿಶಿಷ್ಟ ಧಾರ್ಮಿಕ ಅಭಿಯಾನದಲ್ಲಿ ಭಾಗವಹಿಸಿದರು. ನವದುರ್ಗಾ ಲೇಖನವನ್ನು ಭಕ್ತಿಭಾವದಿಂದ ಬರೆದು ಕಾಪುವಿನ ಅಮ್ಮನಿಗೆ ಅಕ್ಷರ ನಮನವನ್ನು ಸಲ್ಲಿಸಿದರು, ಮುಂದಿನ ಒಂದು ತಿಂಗಳ ಒಳಗಾಗಿ ಪುಸ್ತಕವನ್ನು ಬರೆದು ಶಾಶ್ವತ ಸೇವೆಯೊಂದಿಗೆ ಕ್ಷೇತ್ರಕ್ಕೆ ಸಮರ್ಪಿಸುತ್ತೇನೆ ಎಂದರು.
ಬಿಗ್‌ಬಾಸ್ ಕಾರ್ಯಕ್ರಮದ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಅನುಷಾ ರೈ ಅವರು, ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿ ದೇವಿಯ ದರುಶನದೊಂದಿಗೆ ನವದುರ್ಗಾ ಲೇಖನ ಯಜ್ಞದಲ್ಲಿಯೂ ಪಾಲ್ಗೊಂಡಿರುವುದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು