11:18 PM Saturday17 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಪಾಕ್‌ಗೆ ಪೋಲಾಗುತ್ತಿದ್ದ ಸಿಂಧೂ ನದಿ ನೀರನ್ನು ಲಡಾಕ್‌ಗೆ ಬಳಸಿಕೊಂಡ ಮೋದಿ ಸರ್ಕಾರ: ಕೃಷಿ ಕ್ರಾಂತಿಗೆ ಸಾಕ್ಷಿಯಾಯ್ತು ಭಾರತ

22/08/2026, 18:07

ನವದೆಹಲಿ(reporterkarnataka.com): ಸಿಂಧೂ ಜಲ ಒಪ್ಪಂದವು (IWT) ಭಾರತಕ್ಕೆ ಎಷ್ಟು ಹಾನಿಕಾರಕವಾಗಿತ್ತು ಎಂಬುದಕ್ಕೆ ಈಗ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ ಸಾಕ್ಷಿ ಒದಗಿಸಿದೆ. ಸಿಂಧು ನದಿಯಲ್ಲಿ ಈವರೆಗೆ ವ್ಯರ್ಥವಾಗಿ ಪಾಕಿಸ್ತಾನದತ್ತ ಹರಿದುಹೋಗುತ್ತಿದ್ದ ಹಿಮನದಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಲಡಾಖ್ ಆಡಳಿತವು ತನ್ನ ಚಿತ್ರಣವನ್ನೇ ಬದಲಾಯಿಸಿಕೊಂಡಿದೆ. ಪಕ್ಷಭೇದ ಮರೆತು ಈ ಮಹತ್ಕಾರ್ಯವನ್ನು ಕೊಂಡಾಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಲಡಾಖ್ ಆಡಳಿತಕ್ಕೆ ಮುಕ್ತಕಂಠದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸಿಂಧೂ ಜಲ ಒಪ್ಪಂದದ ರದ್ದತಿ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಪಾಕಿಸ್ತಾನದಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಜಾಗತಿಕ ವೇದಿಕೆಗಳಲ್ಲಿ ಭಾರತದ ವಿರುದ್ಧ ಕೂಗಾಟ ನಡೆಸುತ್ತಿರುವ ಪಾಕಿಸ್ತಾನಕ್ಕೆ, ಈ ಒಪ್ಪಂದವು ಇಷ್ಟು ವರ್ಷಗಳ ಕಾಲ ಹೇಗೆ ಏಕಪಕ್ಷೀಯವಾಗಿ ಲಾಭ ತಂದುಕೊಡುತ್ತಿತ್ತು ಎಂಬುದನ್ನು ಭಾರತ ಈಗ ಜಗತ್ತಿಗೆ ತೋರಿಸಿಕೊಟ್ಟಿದೆ. ತನ್ನ ಸ್ವಂತ ಭೂಮಿ ಮತ್ತು ಜನರ ಹಿತಾಸಕ್ತಿಯನ್ನು ಬಲಿ ಕೊಟ್ಟು, ಶತ್ರು ರಾಷ್ಟ್ರಕ್ಕಾಗಿ ಭಾರತವು ಬರೋಬ್ಬರಿ 65 ವರ್ಷಗಳ ಕಾಲ ತನ್ನ ನೈಸರ್ಗಿಕ ಜಲಸಂಪನ್ಮೂಲವನ್ನು ಹರಿಯಲು ಬಿಟ್ಟಿತ್ತು. ಆದರೆ, ಕೇವಲ ಒಂದು ವರ್ಷದ ಅವಧಿಯಲ್ಲಿ ಲಡಾಖ್‌ನಲ್ಲಿ ಅದ್ಭುತ ಬದಲಾವಣೆ ಸೃಷ್ಟಿಯಾಗಿದ್ದು, ಸಿಂಧು ನದಿಗೆ ಹರಿದು ಪೋಲಾಗುತ್ತಿದ್ದ ನೀರಿನಿಂದಲೇ ಅಲ್ಲಿನ ರೈತರು ತಮ್ಮ ಜಮೀನುಗಳಿಗೆ ನೀರುಣಿಸುತ್ತಿದ್ದಾರೆ.

*ಹಿಮನದಿ ನೀರು ಸದ್ಬಳಕೆ: ಲಡಾಖ್‌ನ ಭಾಗ್ಯೋದಯ*
ಲಡಾಖ್‌ಗೆ ತಲುಪುತ್ತಿದ್ದ ಹಿಮನದಿಯ ನೀರಿನ ಪೈಕಿ ದಿನನಿತ್ಯ ಸುಮಾರು 9 ಕೋಟಿ ಲೀಟರ್‌ನಷ್ಟು ನೀರು ಸಿಂಧೂ ನದಿಯನ್ನು ಸೇರಿ ವ್ಯರ್ಥವಾಗಿ ಪಾಕಿಸ್ತಾನದತ್ತ ಹರಿದುಹೋಗುತ್ತಿತ್ತು. ಪಾಕಿಸ್ತಾನ ಎಂದಿಗೂ ಸಿಂಧು ನದಿಯ ನೀರನ್ನು ದಕ್ಷತೆಯಿಂದ ಬಳಸಿಕೊಳ್ಳದೆ ಪೋಲು ಮಾಡಿತ್ತು. ಆದರೆ, ಸಿಂಧು ಜಲ ಒಪ್ಪಂದ ಸ್ಥಗಿತಗೊಂಡ ಬಳಿಕ ಲಡಾಖ್ ಆಡಳಿತವು ದಿಟ್ಟ ಹೆಜ್ಜೆ ಇಟ್ಟು ಪರಿಸ್ಥಿತಿಯನ್ನು ಬದಲಾಯಿಸಿದೆ. ಪರಿಣಾಮವಾಗಿ, ಸಿಂಧು ನದಿಗೆ ಹರಿದು ವ್ಯರ್ಥವಾಗುತ್ತಿದ್ದ ಹಿಮನದಿಯ ನೀರು ಈಗ ದಿನಕ್ಕೆ ಕೇವಲ 50 ಲಕ್ಷ ಲೀಟರ್‌ಗೆ ಕುಸಿದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು