9:37 PM Saturday17 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಮಳೆ ಎಫೆಕ್ಟ್ | ಮಂಜಿನ ನಗರಿ ಮಡಿಕೇರಿಯಲ್ಲಿ ಅತ್ಯಂತ ಶುದ್ಧ ಗಾಳಿ ದಾಖಲು

21/08/2026, 16:08

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಮಳೆಯ ವಾತಾವರಣದಿಂದಾಗಿ ಇಂದು ಮಂಜಿನ ನಗರಿ ಮಡಿಕೇರಿಯಲ್ಲಿ ಅತ್ಯಂತ ಶುದ್ಧಗಾಳಿ ದಾಖಲಾಗಿದೆ.
ಮಡಿಕೇರಿಯೊಂದಿಗೆ ಚಿಕ್ಕಬಳ್ಳಾಪುರದಲ್ಲಿ AQI (ವಾಯು ಗುಣಮಟ್ಟ ಸೂಚ್ಯಂಕ) 20ಕ್ಕಿಂತಲೂ ಕಡಿಮೆಯಿದ್ದು, ಅತ್ಯಂತ ಶುದ್ಧ ಗಾಳಿ ಬೀಸುತ್ತಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಗಾಳಿಯ ಮಾಲಿನ್ಯ ಕಡಿಮೆಯಾಗಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದಿನ ವಾಯು ಗುಣಮಟ್ಟ ಸೂಚ್ಯಂಕ (AQI) ಸಹಜ ಹಾಗೂ ‘ಮಧ್ಯಮ’ (Moderate) ಮಟ್ಟದಲ್ಲಿ ದಾಖಲಾಗಿದೆ. ಮುಂಗಾರು ಮಳೆಯ ವಾತಾವರಣ ಇರುವ ಕಾರಣದಿಂದಾಗಿ ಧೂಳಿನ ಪ್ರಮಾಣ ಕಡಿಮೆಯಾಗಿದ್ದು, ರಾಜ್ಯದ ಬಹುತೇಕ ಭಾಗಗಳಲ್ಲಿ ಗಾಳಿಯ ಗುಣಮಟ್ಟ ಸುಧಾರಿಸಿದೆ.
ಬೆಂಗಳೂರಿನಲ್ಲಿ ಸರಾಸರಿ AQI 62 ರಿಂದ 65ರ ನಡುವೆ ದಾಖಲಾಗಿದ್ದು, ಇದು ‘ಮಧ್ಯಮ’ ಶ್ರೇಣಿಗೆ ಒಳಪಡುತ್ತದೆ. ನಗರದ ಬಿಟಿಎಂ ಲೇಔಟ್, ಬಸವನಗುಡಿ, ಹಾಗೂ ಬಾನಸವಾಡಿ ಭಾಗಗಳಲ್ಲಿ AQI 58 ರಿಂದ 69 ರಷ್ಟು ವರದಿಯಾಗಿದೆ. ಗಾಳಿಯಲ್ಲಿ ಮುಖ್ಯವಾಗಿ PM₂.₅ ಮತ್ತು PM₁₀ ಕಣಗಳ ಪ್ರಮಾಣ ಕಂಡುಬಂದಿದ್ದು, ಪ್ರಮುಖ ವಾಹನ ದಟ್ಟಣೆ ಇರುವ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಸ್ವಚ್ಛ ವಾತಾವರಣವಿದೆ.
ಬೆಳಗಾವಿಯಲ್ಲಿಯೂ ವಾಯು ಗುಣಮಟ್ಟ ಉತ್ತಮ ಮಟ್ಟದಲ್ಲಿದೆ ಬಳ್ಳಾರಿ, ಬೀದರ್, ಭಾಗಲಕೋಟೆ: ಈ ಶೈಕ್ಷಣಿಕ ಹಾಗೂ ಕೈಗಾರಿಕಾ ನಗರಗಳಲ್ಲಿ AQI 50 ರಿಂದ 80 ರಷ್ಟಿದ್ದು ‘ಮಧ್ಯಮ’ ಸ್ಥಿತಿಯಲ್ಲಿದೆ.
ಸಾಮಾನ್ಯವಾಗಿ AQI 0-50 ಇದ್ದರೆ ‘ಉತ್ತಮ’ ಹಾಗೂ 51-100 ಇದ್ದರೆ ‘ಮಧ್ಯಮ’ ಎಂದು ಪರಿಗಣಿಸಲಾಗುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು