11:05 PM Monday17 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಕುತ್ತಾರಿನಲ್ಲಿ ಕೊರಗಜ್ಜ ವೃತ್ತಕ್ಕೆ ಸ್ಥಳೀಯರ ವಿರೋಧವಿಲ್ಲ: ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ

09/05/2026, 21:11

ಮಂಗಳೂರು(reporterkarnataka.com): ಕುತ್ತಾರಿನಲ್ಲಿ ಕೊರಗಜ್ಜ ವೃತ್ತಕ್ಕೆ ಸ್ಥಳೀಯರ ಯಾವುದೇ ವಿರೋಧವಿಲ್ಲ. ಹೊರಗಿನಿಂದ ಬಂದ ಒಂದಿಬ್ಬರು ಇದಕ್ಕೆ ವಿರೋಧ ವ್ಯಕ್ತ ಪಡಿಸಿದರೆ ಅದನ್ನು ಪ್ರಮುಖವಾಗಿ ತೆಗೆದುಕೊಳ್ಳಬಾರದು ಎಂದು ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ಅವರು ಇಂದು ನಗರದ ಸರ್ಕಿಟ್‌ಹೌಸ್‌ನಲ್ಲಿ ಮಾಧ್ಯಮದವರು ಕುತ್ತಾರಿನಲ್ಲಿ ಕೊರಗಜ್ಜ ವೃತ್ತಕ್ಕೆ ವಿರೋಧ ಪಡಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಬರುವಂತಹ ವಿಷಯಗಳಿಗೆಲ್ಲ ಹೆಚ್ಚು ಗಮನ ಹರಿಸಲಾಗುವುದಿಲ್ಲ. ದಾರಿ ತಪ್ಪಿದವರನ್ನು ಊರಿನವರು ಸರಿಪಡಿಸುತ್ತಾರೆ. ಸದ್ಯದಲ್ಲಿಯೇ ಕೊರಗಜ್ಜ ವೃತ್ತ ಉದ್ಘಾಟನೆಗೊಳ್ಳಲಿದೆ ಎಂದು ಸ್ಪೀಕರ್ ಹೇಳಿದರು.
ಮದನಿ ನಗರದಲ್ಲಿ ಎಲ್ಲಾ ಜಾತಿ-ಮತ, ವರ್ಗದವರು ವಾಸಿರುತ್ತಿದ್ದು, ಎಲ್ಲರೂ ಒಗ್ಗಟ್ಟಿನಿಂದ ಇದ್ದಾರೆ. ಹೊರಗಿನಿಂದ ಬಂದ ಒಬ್ಬ-ಇಬ್ಬರ ಮಾತಿಗೆ ಪ್ರಾಮುಖ್ಯತೆ ನೀಡಬಾರದು ಎಂದು ಖಾದರ್ ನುಡಿದರು.

*ಮಳೆಗಾಲದ ಮೊದಲು ಗುಂಡಿ ಮುಚ್ಚಲು ಸೂಚನೆ:*
ಮಳೆಗಾಲ ಪ್ರಾರಂಭವಾಗುತ್ತಿದ್ದು, ಪಿಡಬ್ಲ್ಯೂಡಿ ರಸ್ತೆಗಳು, ತಾಲೂಕು ರಸ್ತೆಗಳು, ಜಿಲ್ಲಾ ರಸ್ತೆ ಹಾಗೂ ರಾಜ್ಯ-ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಗಿರುವ ಹೊಂಡ-ಗುಂಡಿಗಳನ್ನು ಮುಚ್ಚಬೇಕು. ಮಳೆ ಪ್ರಾರಂಭವಾದ ಮೇಲೆ ಮೂರು ತಿಂಗಳು ಏನನ್ನೂ ಮಾಡಲಾಗುವುದಿಲ್ಲ. ಅದೂ ಅಲ್ಲದೇ ಆಗ ಡಾಂಬಾರು ಸಿಗುವುದಿಲ್ಲ ಎನ್ನುತ್ತಾರೆ. ಈಗ ಸಿಗುತ್ತದೆಯಲ್ಲ ಎಲ್ಲವನ್ನು ಮುಚ್ಚಬೇಕು. ಮಳೆಯಲ್ಲಿ ಯಾವುದೇ ರೀತಿಯಲ್ಲಿ ಹೆಚ್ಚು-ಕಮ್ಮಿ ಆದಲ್ಲಿ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ. ಅಧಿಕಾರಿಗಳು ಬೇಗನೇ ಕೃಯಾಶೀಲರಾಗಬೇಕು ಎಂದು ಸ್ಪೀಕರ್ ಸೂಚಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು