1:26 AM Sunday13 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

ದೈವ ಅನುಕರಣೆ ಪ್ರಕರಣ | ಹೊಸದಾಗಿ ಕ್ಷಮಾಪಣೆ ಕೇಳಲು ಸಿದ್ಧ: ಬಾಲಿವುಡ್ ನಟ ರಣವೀರ್ ಸಿಂಗ್

10/04/2026, 21:06

ಬೆಂಗಳೂರು(reporterkarnataka.com): ಚಾವುಂಡಿ ದೈವ ಅನುಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಣವೀರ್ ಸಿಂಗ್ ಅವರು ಕೇಸ್ ಎದುರಿಸುತ್ತಿದ್ದಾರೆ. ಈ ಪ್ರಕರಣ ಕರ್ನಾಟಕ ಹೈಕೋರ್ಟ್​​​ನಲ್ಲಿದೆ. ಇಂದು (ಏಪ್ರಿಲ್ 10) ನಡೆದ ವಿಚಾರಣೆಯಲ್ಲಿ ರಣವೀರ್ ಸಿಂಗ್ ಪರವಾಗಿ ವಕೀಲರು ಹೊಸ ಹೇಳಿಕೆ ನೀಡಿದ್ದಾರೆ. ಹೊಸದಾಗಿ ಕ್ಷಮೆ ಕೇಳಲು ಸಿದ್ಧ ಎಂದಿರುವ ರಣವೀರ್, ದೇವಾಲಯಕ್ಕೂ ಭೇಟಿ ನೀಡುವುದಾಗಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಚಾವುಂಡಿ ದೈವ ಅನುಕರಿಸಿದ ಪ್ರಕರಣದಲ್ಲಿ ಪರಿಷ್ಕೃತ ಕ್ಷಮೆಯಾಚನಾ ಅಫಿಡವಿಟ್​ ಸಲ್ಲಿಸಲು ನಾನು ಸಿದ್ಧ. ಈ ಹಿಂದಿನ ಕ್ಷಮೆಯಾಚನೆ ಪ್ರಾಮಾಣಿಕವಾಗಿಲ್ಲ ಎಂಬ ಕಳವಳವನ್ನು ಇದು ದೂರ ಮಾಡುತ್ತದೆ’ ಎಂದು ರಣವೀರ್ ಸಿಂಗ್ ಪರವಾಗಿ ಸಜನ್ ಪೂವಯ್ಯ ಕೋರ್ಟ್​​ಗೆ ತಿಳಿಸಿದ್ದಾಗಿ ಬಾರ್ ಆ್ಯಂಡ್ ಬೇಂಚ್ ವರದಿ ಮಾಡಿದೆ. ನಾನು ಕ್ಷಮೆಯಾಚನೆಯ ಅಫಿಡವಿಟ್ ಸಲ್ಲಿಸಿದ್ದೇನೆ ಮತ್ತು ಆ ಅಫಿಡವಿಟ್‌ನಲ್ಲಿ ದೇವಸ್ಥಾನಕ್ಕೂ ಭೇಟಿ ನೀಡುತ್ತೇನೆ ಎಂದು ತಿಳಿಸಿದ್ದೇನೆ. ದೈವಾರಾಧಕರನ್ನು ನೋಯಿಸಿದ್ದೇನೆ ಎಂದು ಮಿಮಿಕ್ರಿ ಮಾಡಿದಾಗ ನನಗೆ ತಿಳಿದಿರಲಿಲ್ಲ. ನಾನು ಮುಂಬೈನ ಸಿಂಧಿ ಕುಟುಂಬದಲ್ಲಿ ಬೆಳೆದವನು. ನನಗೆ ಈ ಸೂಕ್ಷ್ಮತೆಗಳ ಬಗ್ಗೆ ತಿಳಿದಿರಲಿಲ್ಲ’ ಎಂದು ರಣವೀರ್ ಸಿಂಗ್ ಕೋರ್ಟ್​​ಗೇ ಈ ಮೊದಲು ವಕೀಲರ ಮೂಲಕ ತಿಳಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು