9:30 PM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಏಕರೂಪ ನಾಗರಿಕ ಸಂಹಿತೆಯಿಂದ ಮಹಿಳಾ ಸಬಲೀಕರಣಕ್ಕೆ ಹೊಸ ವ್ಯಾಖ್ಯಾನ: ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅರುಣ್ ಶ್ಯಾಮ್

02/07/2023, 10:58

ಮಂಗಳೂರು(reporterkarnataka.com): ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿಗೆ ಬಂದರೆ ಮಹಿಳಾ ಸಬಲೀಕರಣಕ್ಕೂ ಹೊಸ ವ್ಯಾಖ್ಯಾನ ಬಂದು ಮಹಿಳಾ ಸಶಕ್ತಿಕರಣಕ್ಕೆ ಇದು ದಾರಿಯಾಗುತ್ತದೆ ಎಂದು
ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್, ಹೈಕೋರ್ಟ್ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಹೇಳಿದರು.
ಅವರು ಅಧಿವ್ಯಕ್ತ ಪರಿಷತ್, ಮಂಗಳೂರು ಹಾಗೂ ಚಿಂತನ ಗಂಗಾ ಜಂಟಿಯಾಗಿ ಆಯೋಜಿಸಿದ ಏಕರೂಪ ನಾಗರಿಕ ಸಂಹಿತೆ – ಸಾಮಾಜಿಕ ನ್ಯಾಯ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ ವಿಚಾರ ಮಂಡಿಸಿದರು.
ಪೊಸ್ಕೊ ಕಾಯ್ದೆ, ಅತ್ಯಾಚಾರ ಪ್ರಕರಣ, ಸಂತ್ರಸ್ತೆಗೆ ಪರಿಹಾರ ಸಹಿತ ಕೆಲವು ವಿಷಯಗಳಲ್ಲಿ ವೈಯಕ್ತಿಕ ಕಾನೂನು ಮತ್ತು ರಾಷ್ಟ್ರದ ಕಾನೂನುಗಳಲ್ಲಿ ಯಾವುದನ್ನು ಆಧರಿಸಿ ತೀರ್ಪು ನೀಡುವ ಬಗ್ಗೆ ನ್ಯಾಯಾಲಯಗಳಲ್ಲಿ ಗೊಂದಲ ಏರ್ಪಡುತ್ತಿದೆ. ಇದರಿಂದ ಸಂತ್ತಸ್ರೆಗೆ ಸಿಗಬೇಕಾದ ನ್ಯಾಯದಲ್ಲಿ ತೊಡಕು ಉಂಟಾಗುವ ಸಾಧ್ಯತೆ ಇದೆ. ಯುಸಿಸಿ ಜಾರಿಗೆ ಬಂದರೆ ಮಹಿಳಾ ಸಬಲೀಕರಣಕ್ಕೂ ಹೊಸ ವ್ಯಾಖ್ಯಾನ ಬಂದು ಮಹಿಳಾ ಸಶಕ್ತಿಕರಣಕ್ಕೆ ಇದು ದಾರಿಯಾಗುತ್ತದೆ ಎಂದು ಅವರು ತಿಳಿಸಿದರು.


ಸಾಮಾಜಿಕ ನ್ಯಾಯ, ಲಿಂಗ ತಾರತಮ್ಯ, ನೈಜ ಜಾತ್ಯತೀತತೆ, ಸಹಬಾಳ್ವೆ, ಮಹಿಳಾ ಸಬಲೀಕರಣ ಮತ್ತು ಅಭಿವೃದ್ಧಿ ವಿಚಾರದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರುವುದರಿಂದ ಪರಿಣಾಮಕಾರಿ ಬದಲಾವಣೆ ಆಗಲಿದೆ ಎಂದು ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ನುಡಿದರು.
ಈಗಿರುವ ವಿವಿಧ ಕಾನೂನುಗಳಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯದಾನಕ್ಕೆ ಅಡಚಣೆ ಉಂಟಾಗಿ ಪ್ರಕರಣಗಳ ಇತ್ಯರ್ಥ ಜಟಿಲವಾಗುತ್ತದೆ. ಆದ್ದರಿಂದ ನ್ಯಾಯಾಲಯಗಳೇ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಸರಕಾರಗಳಿಗೆ ಸೂಚಿಸಿವೆ ಎಂದು ಅರುಣ್ ಶ್ಯಾಮ್ ತಿಳಿಸಿದರು.
ಈಗ ಇರುವ ಮೀಸಲಾತಿ ಅಥವಾ ಭವಿಷ್ಯದಲ್ಲಿ ಜಾರಿಗೆ ಬರಬಹುದಾದ ಯಾವ ಮೀಸಲಾತಿಗೂ ಯುಸಿಸಿಯಿಂದ ಯಾವ ತೊಂದರೆಯೂ ಇಲ್ಲ. ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಹಂತದಲ್ಲಿಯೇ ಇದರ ಪರವಾಗಿ ಧ್ವನಿ ಎತ್ತಿದ್ದರು. ಆದರೆ ಕೆಲವರ ವಿರೋಧದಿಂದ ಇದು ಆವತ್ತು ಜಾರಿಗೆ ಬರಲು ಆಗಿರಲಿಲ್ಲ ಎಂದು ತಿಳಿಸಿದರು.
ಪ್ರಸ್ತುತ ದೇಶದ ಲಾ ಕಮೀಷನ್ ಜನರ ಅಭಿಪ್ರಾಯ ಸಂಗ್ರಹಿಸಿ ರೂಪುರೇಷೆ ಸಿದ್ಧಪಡಿಸಿದ ಬಳಿಕ ಕೇಂದ್ರ ಸರಕಾರ ಕರಡು ಮಸೂದೆ ರಚಿಸಿ ಸಂಸತ್ತಿನಲ್ಲಿ ಮಂಡಿಸಲಿದೆ ಎಂದು ಅರುಣ್ ಶ್ಯಾಮ್ ತಿಳಿಸಿದರು.
ನಾಗರಿಕರು ವಿವಿಧ ಪ್ರಶ್ನೆಗಳನ್ನು ಕೇಳಿದರು.
ಅರುಣ್ ಶ್ಯಾಮ್ ಅವರಿಗೆ ದೇವರ ಮೂರ್ತಿಯನ್ನು ನೀಡಿ ಗೌರವಿಸಲಾಯಿತು.
ಚಿಂತನ ಗಂಗಾ ಸಂಘಟನೆಯ ಡಾ. ರಾಘವೇಂದ್ರ ಹೊಳ್ಳ ಸ್ವಾಗತಿಸಿ ಪ್ರಸ್ತಾಪಿಸಿದರು. ಅಧಿವ್ಯಕ್ತ ಪರಿಷತ್ ನ ಈಶ್ವರ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಅರುಣ್ ಜಿ .ಶೇಟ್ ಪ್ರಾರ್ಥಿಸಿದರು. ಕಿರಣ್ ವಂದಿಸಿದರು. ಪೂಜಾ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು