ಇತ್ತೀಚಿನ ಸುದ್ದಿ
ವಿಜಯನಗರ | ಹೊಸಪೇಟೆ ಬಳಿ ರೈಲು ಡಿಕ್ಕಿಯಾಗಿ 8 ಎಮ್ಮೆಗಳು ಸ್ಥಳದಲ್ಲಿಯೇ ಸಾವು
25/09/2026, 14:23
ಹೊಸಪೇಟೆ(reporterkarnataka.com): ರೈಲಿಗೆ ಎಮ್ಮೆಗಳು ಡಿಕ್ಕಿಯಾಗಿ 8 ಎಮ್ಮೆಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಎಮ್ಮೆಗಳು ರೈಲ್ವೆ ಹಳಿ ದಾಟುವಾಗ ರೈಲು ಗಾಡಿ ಡಿಕ್ಕಿ ಹೊಡೆದಿದೆ. ಮರಿಯಮ್ಮನಹಳ್ಳಿ ನಿವಾಸಿ ಕಾಳಪ್ಪ ಎನ್ನುವರಿಗೆ ಸೇರಿದ ಎಮ್ಮೆಗಳು ಎಂದು ತಿಳಿದು ಬಂದಿದೆ. ರೈಲು ಗುದ್ದಿದ ರಭಸಕ್ಕೆ ಎಮ್ಮೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಈ ಘಟನೆಯಿಂದ ಮಾಲೀಕರಿಗೆ ಬಾರಿ ನಷ್ಟ ಉಂಟಾಗಿದೆ. ಸ್ಥಳಕ್ಕೆ ರೈಲ್ವೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













