8:37 PM Monday10 - August 2026
ಬ್ರೇಕಿಂಗ್ ನ್ಯೂಸ್
Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ…

ಇತ್ತೀಚಿನ ಸುದ್ದಿ

ಸುತ್ತೂರು ಜಾತ್ರೆ: ಅದ್ದೂರಿಯಾಗಿ ನಡೆದ ಸಾಮೂಹಿಕ ವಿವಾಹ; ದಾಂಪತ್ಯ ಜೀವನಕ್ಕೆ ಕಾಲಿಟ್ಟ 120 ಜೋಡಿಗಳು

07/02/2024, 17:55

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಹತ್ತೂರ ಜಾತ್ರೆಗೆ ಸುತ್ತೂರ ಜಾತ್ರೆ ಮೇಲು ಎಂಬಂತೆ ಇಂದು ನಡೆದ ಎರಡನೇ ದಿನದ ಸುತ್ತೂರು ಜಾತ್ರೆಯಲ್ಲಿ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ಸುಮಾರು 120 ಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.
ಸುತ್ತೂರು ಶ್ರೀ ಕ್ಷೇತ್ರದ ಪರಮಪೂಜ್ಯಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ಹಾಗೂ ವಿವಿಧ ಮಠಾಧೀಶರ ದಿವ್ಯಸಾನಿಧ್ಯದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ 120 ಜೋಡಿಗಳು ಸತಿಪತಿಗಳಾದರು.
ಕರ್ನಾಟಕ ಹಾಗೂ ತಮಿಳುನಾಡು ಸೇರಿದಂತೆ ವಿವಿಧಡೆಯಿಂದ ಬಂದ 120 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದರು.
120 ಜೋಡಿಗಳ ಪೈಕಿ ನಾಲ್ಕು ವೀರಶೈವ ಲಿಂಗಾಯತ, 61 ಪರಿಶಿಷ್ಟ ಜಾತಿ, 26 ಪರಿಶಿಷ್ಟ ಪಂಗಡ, 18 ಹಿಂದುಳಿದ ವರ್ಗ 11 ಅಂತರ್ಜಾತಿ ಜೋಡಿಗಳು ವಿವಾಹದಲ್ಲಿ ಪಾಲ್ಗೊಂಡಿದ್ದರು.
ಅದರಲ್ಲಿ ತಮಿಳುನಾಡಿನ 23 ಜೋಡಿಗಳು, ನಾಲ್ಕು ಜೋಡಿ ವಿಶೇಷ ಚೇತನರು, ಮತ್ತು ಒಂದು ಮರು ಮದುವೆಯ ಜೋಡಿಗಳು ಎಲ್ಲರ ಗಮನ ಸೆಳೆದವು.
ವೇದಿಕೆ ಮೇಲಿನ ಎಲ್ಲಾ ವರರಿಗೆ ಶ್ರೀಗಳು ಸೇರಿದಂತೆ ಹಲವು ಗಣ್ಯರು, ಮಾಂಗಲ್ಯ ಮತ್ತು ಕಾಲುಂಗುರ ವಿತರಣೆ ಮಾಡಿದರು. ನಂತರ ಗಟ್ಟಿಮೇಳ ಹಾಗೂ ಮಂತ್ರ ಘೋಷಗಳೊಂದಿಗೆ ಮಾಂಗಲ್ಯ ಧಾರಣೆ ನಡೆಯಿತು.
ಈ ಸಂದರ್ಭ ಶ್ರೀಗಳು ಸೇರಿದಂತೆ ವೇದಿಕೆ ಮೇಲಿನ ಗಣ್ಯರು ಎಲ್ಲಾ ವಧು ವರರಿಗೆ ಮಂತ್ರಾಕ್ಷತೆ ಹಾಕುವ ಮೂಲಕ ಶುಭ ಹಾರೈಸಿದರು.
ನೂತನ ಸತಿಪತಿಗಳಾಗಿ ಸಹಬಾಳ್ವೆ ಹಾಗೂ ಉತ್ತಮ ಜೀವನ ರೂಪಿಸಿಕೊಳ್ಳುವುದಾಗಿ ಪ್ರತಿಜ್ಞಾವಿಧಿ ಸಲ್ಲಿಸಿದರು.
ಇದಕ್ಕೂ ಮುನ್ನ 120 ಜೋಡಿಗಳನ್ನು ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ ಗದ್ದುಗೆಯಿಂದ ಹಲವು ಜಾನಪದ ಕಲಾತಂಡಗಳೊಂದಿಗೆ ಮದುವೆ ಮಂಟಪದ ವೇದಿಕೆಗೆ ಕರೆತರಲಾಯಿತು.


ವಧು ವರರಿಗೆ ಶ್ರೀಮಠದ ವತಿಯಿಂದ ತಾಳಿ ಬಟ್ಟೆ ಸೀರೆ ರವಿಕೆ ಗಳನ್ನು ಉಚಿತವಾಗಿ ನೀಡಲಾಗಿತ್ತು. ವಿವಾಹ ಮಹೋತ್ಸವಕ್ಕೆ ಬಂದಿದ್ದ ವಧು-ವರರು ಮತ್ತು ಅವರ ಜೊತೆ ಬಂದಿದ್ದ ಸಂಬಂಧಿಕರಿಗೆ ಊಟ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಅಕ್ಕ ಯುಎಸ್ ಎ ಅಧ್ಯಕ್ಷರಾದ ಅಕ್ಕ ಅಮರ್ ನಾಥ್ ಗೌಡ, ಹಾಗೂ ಮತ್ತಿತರ ಗಣ್ಯರು ಮಾತನಾಡಿ ಶ್ರೀ ಕ್ಷೇತ್ರದಲ್ಲಿ ನಡೆಯುವ ಜಾತ್ರೆ ಯು ವೈಶಿಷ್ಟ್ಯತೆ ಹಾಗೂ ಶ್ರೀಗಳವರ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಾಮೂಹಿಕ ವಿವಾಹದ ವೈಶಿಷ್ಟತೆಯ ಬಗ್ಗೆ ತಿಳಿಸಿದರು.
ಕಾಗಿನೆಲೆ ಶ್ರೀ ಕನಕ ಗುರು ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಹಲವು ಹರಗುರು ಚರಮೂರ್ತಿಗಳು ಸೇರಿದಂತೆ ಉದ್ಯಮಿ, ಮೂಲ್ ಚಂದ್ ನಹರ್, ಯುಎಸ್ಎ ಮೆರಿಲ್ಯಾಂಡ್ ವೀರಪ್ಪನ್, ತಿರುವನಂತಪುರ ಶಾಂತಗಿರಿ ಆಶ್ರಮ ದ ಪ್ರಧಾನ ಕಾರ್ಯದರ್ಶಿಗಳಾದ ಸ್ವಾಮಿ ಗುರು ರತ್ನಂ ಜ್ಞಾನಪಸ್ವಿ ಚುಂಚನಹಳ್ಳಿ ಮಠಾಧ್ಯಕ್ಷರಾದ ಶ್ರೀ ಚನ್ನಬಸವ ಸ್ವಾಮೀಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು