8:23 PM Monday24 - August 2026
ಬ್ರೇಕಿಂಗ್ ನ್ಯೂಸ್
ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು

ಇತ್ತೀಚಿನ ಸುದ್ದಿ

Sports | ಪ್ರಥಮ ಶ್ರೇಯಾಂಕಿತ ದಿಯಾ ಭೀಮಯ್ಯಗೆ ರಾಷ್ಟ್ರೀಯ ಮಟ್ಟದ ಜೂನಿಯರ್ ಬ್ಯಾಡ್ಮಿಂಟನ್ ಆಯ್ಕೆ

13/05/2026, 22:02

ಬೆಂಗಳೂರು(reporterkarnataka.com): ಬೆಂಗಳೂರಿನ ವಸಂತ ನಗರದ ಕರ್ನಾಟಕ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಮೇ ತಿಂಗಳು 3 ರಿಂದ 10ನೇ ತಾರೀಖಿನವರೆಗೆ ನಡೆಸಲಾದ ಯೋನೆಕ್ಸ್ ಸನ್ ರೈಸ್ ಆಲ್ ಇಂಡಿಯ ಜೂನಿಯರ್ (19 ವರ್ಷದೊಳಗಿನ)ರಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಮೆಂಟ್ 2026 ರಲ್ಲಿ ಜೂನಿಯರ್ ವಿಭಾಗದಲ್ಲಿ ಭಾರತದ ಪ್ರಥಮ ಶ್ರೇಯಾಂಕಿತ ಕೊಡಗಿನ ದಿಯಾ ಭೀಮಯ್ಯ ಬಾಲಕಿಯರ ಡಬಲ್ಸ್ ನಲ್ಲಿ ಹರಿಯಾಣದ ಬಾರುನಿ ಪರುಸ್ವಾಲ್ ಜೊತೆಗೂಡಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.

ಅಂತಿಮ ಪಂದ್ಯದಲ್ಲಿ ಅವರು ತಮಿಳು ನಾಡಿನ ಜೋಡಿ ಅನುಷ್ಕ ಜೆನ್ನಿಫರ್ ಎ ಎಸ್ ಮತ್ತು ದೀಶಿತ ಸಿಂಘ ಗೋಪಿನಾಥ ಸಿಂಗ್ ಅವರೆದುರು 21-10, 22-20 ಅಂಕಗಳಿಂದ ಜಯ ಗಳಿಸಿದರು.
ಈ ವಿಜಯ ಅವರಿಗೆ ಜಪಾನಿನ ಯಟ್ಸುಶಿರೊ ನಲ್ಲಿ 26ನೇ ಜೂನ್ ರಿಂದ 5ನೇ ಜುಲೈ ವರೆಗೆ ನಡೆಯಲಿರುವ ಬ್ಯಾಡ್ಮಿಂಟನ್ ಏಶಿಯ ಜೂನಿಯರ್ ಚಾಂಪಿಯನ್ 2026 ಟೂರ್ನಿಯಲ್ಲಿ ಭಾರತ ಜೂನಿಯರ್ ತಂಡವನ್ನು ಪ್ರತಿನಿಧಿಸುವ ನೇರ ಅವಕಾಶವನ್ನು ಒದಗಿಸಿದೆ.ಮಿಶ್ರ ಡಬ್ಬಲ್ಸ್ ನಲ್ಲಿ ಭಾರತದ ಜೂನಿಯರ್ ತಂಡಕ್ಕೆ ಆಯ್ಕೆ ಪಡೆಯಲು ನಡೆಯಲಿರುವ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶವನ್ನು ಸಹ ಪಡೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು