6:44 PM Saturday9 - May 2026
ಬ್ರೇಕಿಂಗ್ ನ್ಯೂಸ್
ನಂಜನಗೂಡು ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿ: ಚಿಕ್ಕರಂಗನಾಯಕ ಚಾಲನೆ ಚಿಕ್ಕಮಗಳೂರು | ಕಾಡಿನೊಳಗೂ ಕಳ್ಳರ ಕೈಚಳಕ: ಮುತ್ತೋಡಿ ಅರಣ್ಯ ವಲಯದಲ್ಲಿದ್ದ ಕ್ಯಾಮೆರಾ ಹೊತ್ತೊಯ್ದ… ಚಾಲಕನಿಗೆ ಹಠಾತ್ ಕಾಣಿಸಿಕೊಂಡ ಎದೆನೋವು: ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಮಗುಚಿದ ಖಾಸಗಿ… ಮೂಡಿಗೆರೆ: ಬಾಳೂರು ಪೊಲೀಸರ 12 ತಾಸುಗಳ ಕಾರ್ಯಾಚರಣೆ ಬಳಿಕ ಪತ್ತೆಯಾದ ಒಂದೂವರೆ ವರ್ಷದ… Shivamogga | ತೀರ್ಥಹಳ್ಳಿ: ವಾಹನದಲ್ಲಿ ಅಕ್ರಮ ಗೋ ಸಾಗಾಟ; ಮೂವರು ವಶಕ್ಕೆ ರಕ್ತ ಸಂಬಂಧವನ್ನೇ ಮರೆತು ಹಸೆಮಣೆಗೆ ಏರಿದ ಅಕ್ಕ ತಮ್ಮ..! ದುಬಾರೆ | ಅರಣ್ಯ ಸಚಿವರಿಗೆ ಘೇರಾವ್ ಯತ್ನ: ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ ಪಶ್ಚಿಮ ಬಂಗಾಳದಲ್ಲಿ ನೂತನ ಸರಕಾರ ರಚನೆ: ಚುನಾವಣಾ ಆಯೋಗ ಅಧಿಸೂಚನೆ ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳು… ಪಶ್ಚಿಮ ಬಂಗಾಳ: ರಾಜೀನಾಮೆ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಣೆ

ಇತ್ತೀಚಿನ ಸುದ್ದಿ

ವಿಜಯ್ ಪ್ರಮಾಣ ವಚನಕ್ಕೆ ಬ್ರೇಕ್!: ತಮಿಳುನಾಡು ಪಾಲಿಟಿಕ್ಸ್​​ನಲ್ಲಿ ಬಿಗ್ ಟ್ವಿಸ್ಟ್​​; ಶಾಸಕರ ರೆಸಾರ್ಟ್​​ಗೆ ಶಿಫ್ಟ್

09/05/2026, 18:43

ಚೆನ್ನೈ(reporterkarnataka.com): ಹೊಸ ಪಕ್ಷ ಕಟ್ಟಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ ಜೋಸೆಫ್​ ವಿಜಯ್​​ಗೆ ಇದೀಗ ಸರ್ಕಾರ ರಚನೆಯೇ ಕಷ್ಟ ಕಷ್ಟ ವಾಗ್ತಿದೆ. ಕಾಂಗ್ರೆಸ್​​ನ ಬೆಂಬಲದಿಂದ ವಿಜಯ್ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧರಾಗಿದ್ದರು. ತಮಿಳುನಾಡಿನ ರಾಜ್ಯಪಾಲರು ವಿಜಯ್ ನೀಡಿದ ಬಹುಮತದ ಲೆಕ್ಕಾಚಾರದಿಂದ ತೃಪ್ತರಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ರಾಜಕೀಯದಲ್ಲಿ ಹೊಸ ಟ್ವಿಸ್ಟ್​ ಎನ್ನುವಂತೆ ಶಾಸಕರನ್ನ ರೆಸಾರ್ಟ್​​ಗೆ ಶಿಫ್ಟ್ ಮಾಡಲಾಗಿದ್ದು, ದಳಪತಿಗೆ ಇದೀಗ ದೊಡ್ಡ ಟೆನ್ಷನ್ ಆಗಿದೆ.

ವಿಜಯ್​​ ಸರ್ಕಾರ ರಚನೆ ಸರ್ಕಸ್​

ನಟ-ರಾಜಕಾರಣಿ ವಿಜಯ್ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರೊಂದಿಗಿನ ಸಭೆಯಲ್ಲಿ ತಮಿಳುನಾಡಿನಲ್ಲಿ ಮುಂದಿನ ಸರ್ಕಾರ ರಚಿಸುವ ಹಕ್ಕು ಮಂಡಿಸಿದ್ರು. ಆದ್ರೆ, ಸರ್ಕಾರ ರಚಿಸಲು ಟಿವಿಕೆ ಇನ್ನೂ ಹೆಚ್ಚಿನ ಸಂಖ್ಯೆ ಅವಶ್ಯಕತೆ ಇದೆ ಎಂದು ರಾಜ್ಯಪಾಲರು ಹೇಳ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಲೇ ಕಾಂಗ್ರೆಸ್ ಬೆಂಬಲ ನೀಡಿದ್ದು, ಇತರರು ಸಹ ಟಿವಿಕೆ ಸೇರುವ ನಿರೀಕ್ಷೆ ಇದೆ.

ನಂಬರ್​​​ ಮೇಲೆ ನಿಂತಿದೆ ‘ದಳಪತಿ’ ಆಟ

234 ಸದಸ್ಯ ಬಲದ ವಿಧಾನಸಭೆಯಲ್ಲಿ 108 ಸ್ಥಾನಗಳೊಂದಿಗೆ ಟಿವಿಕೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು, ಬಹುಮತಕ್ಕೆ 118 ಸ್ಥಾನಗಳ ಕೊರತೆ ಎದುರಿಸಿತು. 5 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಈಗ ವಿಜಯ್ ಅವರನ್ನು ಬೆಂಬಲಿಸಲು ನಿರ್ಧರಿಸಿದೆ, ಇದರಿಂದಾಗಿ ಸ್ಥಾನಗಳ ಸಂಖ್ಯೆ 113 ಕ್ಕೆ ತಲುಪಿದೆ. ಡಿಎಂಕೆಯ ಇತರ ಪ್ರಮುಖ ಮಿತ್ರಪಕ್ಷಗಳಾದ ಸಿಪಿಐ (ಎರಡು ಸ್ಥಾನಗಳು), ಸಿಪಿಎಂ (ಎರಡು ಸ್ಥಾನಗಳು) ಮತ್ತು ವಿಸಿಕೆ (ಎರಡು ಸ್ಥಾನಗಳು) ಬೆಂಬಲ ನೀಡುವ ನಿರೀಕ್ಷೆಯಿದೆ ಎಂದು ಟಿವಿಕೆ ಮೂಲಗಳು ಹೇಳ್ತಿವೆ.

ಡಿಎಂಕೆ ಕೇವಲ 59 ಸ್ಥಾನಗಳನ್ನು ಗೆದ್ದರೆ, ಎಂಕೆ ಸ್ಟಾಲಿನ್ ಕೂಡ ತಮ್ಮ ಭದ್ರಕೋಟೆಯಾಗಿದ್ದ ಕೊಳತ್ತೂರ್ ಅನ್ನು ಕಳೆದುಕೊಂಡರು. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) 47 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಇದೀಗ ಹೊಸ ಗೇಮ್ ಪ್ಲಾನ್​ ಮಾಡಿದೆ ಎಂದು ವರದಿ ಆಗಿದೆ.

ಡಿಎಂಕೆ-ಎಐಎಡಿಎಂಕೆ ಸೀಕ್ರೆಟ್ ಮೀಟಿಂಗ್​

ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಒಟ್ಟಾಗಿ ಸರ್ಕಾರ ರಚಿಸಲು ಮಾತುಕತೆ ಆರಂಭಿಸಿವೆ ಎಂದು ವರದಿಯಾಗಿದೆ. ಎರಡೂ ಪಕ್ಷಗಳ ಪ್ರಮುಖ ಕಾರ್ಯನಿರ್ವಾಹಕರು ಈ ಮಾತುಕತೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಎಐಎಡಿಎಂಕೆ ಶಾಸಕರು ರೆಸಾರ್ಟ್​​ಗೆ ಶಿಫ್ಟ್​

ಟಿವಿಕೆ ಪಕ್ಷ ಎಐಎಡಿಎಂಕೆ ಶಾಸಕರನ್ನ ಸೆಳೆಯುವ ಭೀತಿಯಿಂದ ತಮಿಳುನಾಡಲ್ಲಿ ರೆಸಾರ್ಟ್ ಪಾಲಿಟಿಕ್ಸ್ ಶುರುವಾಗಿದೆ. ಎಐಎಡಿಎಂಕೆ ಶಾಸಕರನ್ನ ಪುದುಚೇರಿಯ ರೆಸಾರ್ಟ್‌ಗೆ ಸ್ಥಳಾಂತರಿಸಿ, ಅಲ್ಲಿ ಎರಡು ದಿನಗಳ ಕಾಲ ಉಳಿದುಕೊಳ್ಳಲು ಸೂಚಿಸಲಾಗಿದೆ.

ಇತ್ತ ವಿಜಯ್​ ಕಾನೂನು ತಜ್ಞರ ಸಲಹೆ ಮೇರೆಗೆ ಸರ್ಕಾರ ರಚಿಸಲು ರಣತಂತ್ರ ರೂಪಿಸಿದ್ದಾರೆ. ಅಡೆಚಣೆಗಳನ್ನ ಮೀರಿ ದಳಪತಿ ಸರ್ಕಾರ ರಚಿಸ್ತಾರಾ ಕಾದು ನೋಡಬೇಕಿದೆ.

ತಮಿಳುನಾಡಿನ ಪ್ರಬಲ ಶಕ್ತಿ ಟಿವಿಕೆ

ದಶಕಗಳಿಂದ ಎರಡು ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ನಡೆಯುತ್ತಿರುವ ತಮಿಳು ರಾಜಕೀಯ ಯುದ್ಧದಲ್ಲಿ, ವಿಜಯ್ ಈಗ ಟಿವಿಕೆ ರೂಪದಲ್ಲಿ ಮೂರನೇ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಬೆಂಬಲದೊಂದಿಗೆ ಅವರ ಉದಯವು ತಮಿಳುನಾಡಿನ ಭವಿಷ್ಯವನ್ನು ಹೇಗೆ ಬದಲಾಯಿಸುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು