9:09 PM Sunday9 - August 2026
ಬ್ರೇಕಿಂಗ್ ನ್ಯೂಸ್
ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:…

ಇತ್ತೀಚಿನ ಸುದ್ದಿ

ಶನಿವಾರಸಂತೆ: ವಿಜಯ ದಿವಸ್ ಆಚರಣೆ; ಬೈಕ್ ಮತ್ತು ವಾಹನ ಜಾಥಾ

20/12/2021, 11:38

ಮಡಿಕೇರಿ(reporterkarnataka.com): ಕೊಡಗು ಜಿಲ್ಲೆ ಹಿಂದು ಜಾಗರಣ ವೇದಿಕೆ ಹಾಗೂ ಸೋಮವಾರಪೇಟೆ ತಾಲೂಕು ಯುವ ವಾಹಿನಿ ನೇತೃತ್ವದಲ್ಲಿ ಶನಿವಾರ ಸಂತೆಯಲ್ಲಿ ವಿಜಯ ದಿವಸ (ಬಾಂಗ್ಲಾ ವಿಮೋಚನಾ ದಿನ) ಪ್ರಯುಕ್ತ ಬೈಕ್ ಮತ್ತು ವಾಹನ ಜಾಥಾ ನಡೆಸಲಾಯಿತು.

 ಶನಿವಾರ ಸಂತೆಯ ಗೋಪಾಲಪುರದಿಂದ ಬೈಕ್ ಜಾಥಾ ಹೊರಟು ಬೆಂಗಳೂರು ಮಾರ್ಗವಾಗಿ ಕೊಡ್ಲಿಪೇಟೆ ಮೂಲಕ  ಶನಿವಾರಸಂತೆಯ ಕೆ. ಆರ್. ಸಿ. ಸರ್ಕಲ್ ತಲುಪಿತು. ನಂತರ ಕೆ ಆರ್ ಸಿ ಸರ್ಕಲ್ ನಲ್ಲಿ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು.   ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸೈನಿಕ ಸಂಘದ ಅಧ್ಯಕ್ಷ ಮಹೇಶ್ ವಹಿಸಿದ್ದರು . 1971ರ ಯುದ್ಧ ದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಯೋದರದ ಕಾಜುರು ಗ್ರಾಮದ ಎಂ .ಸ್ ಪೊನ್ನಪ್ಪ , ಎಂ.ಎಸ್ ಕಾಳಪ್ಪ , ಅಪ್ಪಾಜಿ .ಶನಿವಾರಸಂತೆಯ ಕಳಲೇ ಗ್ರಾಮದ ಕೆ. ವಿ ಮಂಜುನಾಥ್ ಮತ್ತು ಪುಟ್ಟ ಸ್ವಾಮಿ  ಇವರನ್ನು ಸನ್ಮಾನಿಸಲಾಯಿತು.   ಸೇವಾ ಭಾರತಿ ಜಿಲ್ಲಾ ಅಧ್ಯಕ್ಷರಾದ ಟಿ. ಸಿ. ಚಂದ್ರನ್ ಕಾರ್ಯಕ್ರಮದ ಬೌದ್ಧಿಕ್  ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಸುಭಾಸ್ ತಿಮ್ಮಯ್ಯ, ಸಹ ಸಂಪರ್ಕ ಪ್ರಮುಖ್ ಎಂ. ಬಿ. ಉಮೇಶ್,  ತಾಲೂಕು ಅಧ್ಯಕ್ಷ ಸುನಿಲ್, ಉಪಾಧ್ಯಕ್ಷರಾದ ಸಂದೀಪ್, ಪ್ರಧಾನ ಕಾರ್ಯದರ್ಶಿ ಬೊಜೇಗೌಡ, ಕಾರ್ಯದರ್ಶಿ ಲೋಕೇಶ್, ಹಿಂದು ಯುವ ವಾಹಿನಿ ಜಿಲ್ಲಾ ಪ್ರಮುಖ್ ಚೇತನ್, ವಲಯ  ಪ್ರಮುಖರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು