5:22 AM Friday9 - October 2026
ಬ್ರೇಕಿಂಗ್ ನ್ಯೂಸ್
ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ

ಇತ್ತೀಚಿನ ಸುದ್ದಿ

ಸಂತಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧೀಜಿ, ಶಾಸ್ತ್ರೀಜಿ ಜನ್ಮದಿನಾಚರಣೆ

02/10/2024, 23:02

ಸಂತೋಷ್ ಬೆಳಗಾವಿ

info.reporterkarnataka@gmail.com

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಸ್ವಾರ್ಥ ಭಾವನೆ ಬಿಟ್ಟು ಪ್ರಾಮಾಣಿಕವಾಗಿ ದೇಶದ ಹಿತಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿ ಸಮಾಜಕ್ಕೇ ಆದರ್ಶ ಮಹಾನ ವ್ಯಕ್ತಿಗಳಾಗಿದ್ದಾರೆಂದು ಪ್ರಾಚಾರ್ಯರಾದ ವಾಯ್ ಬಿ ಕಳ್ಳಿಗುದ್ದಿ ಹೇಳಿದರು. ಅವರು ಹಳ್ಳೂರ 02 ಗ್ರಾಮದ
ಸಂತಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿ ಅವರ 155ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120ನೇ ಜಯಂತಿ ಆಚರಣೆಯಲ್ಲಿ ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರು ಸತ್ಯಕ್ಕಾಗಿ ಹೋರಾಡಿದರು. ಲಾಲ ಬಹದ್ದೂರ ಶಾಸ್ತ್ರಿಜೀ ಅವರು ಜೈ ಜವಾನ ಜೈ ಕಿಸಾನ್ ಎಂದು ಮಂತ್ರ ಸಾರಿ ಅನ್ನದಾತರಿಗೆ ಜಯಸಿಗಲು ಸಹಾಯ ಮಾಡಿದ್ದಾರೆ. ಹಣಕ್ಕಾಗಿ, ಅಧಿಕಾರ ಆಸೆಗಾಗಿ ಶ್ರಮಪಡದೆ ಸಮಾಜ ಕಲ್ಯಾಣಕ್ಕಾಗಿ ನಿರಂತರ ಶ್ರಮಿಸಿದ್ದಾರೆ. ಕಾಲೇಜೀನ ಹೆಸರು ಪಂದ್ಯಾವಳಿಗಳಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಬೆಳೆದಿದೆ ನಾವು ಕೂಡಾ ಶಿಕ್ಷಣ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.450 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವುದರಿಂದ ಸಭೆ ಸಮಾರಂಭ ಮಾಡಲು ದೊಡ್ಡದಾದ ಕೊಠಡಿ ಅಥವಾ ಸಮುದಾಯ ಭವನ ನಿರ್ಮಾಣ ಮಾಡಲು ಗ್ರಾಮಸ್ಥರು ಸಹಕಾರ ನೀಡಬೇಕೆಂದು ಹೇಳಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭೀಮಶಿ ಮಗದುಮ ಮಾತನಾಡಿ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜೀ ಅವರು ದೇಶದ ಎರಡು ರತ್ನಗಳಿದ್ದಂತೆ ಜಗದ ಹೃದಯ ಗೆದ್ದು ಭಾರತೀಯರ ಮನಸಿನಲ್ಲಿ ಅಚ್ಚಳಿಯದೆ ಸದಾಕಾಲ ಶಾಶ್ವತ ವಾಗಿರುವ ಹೆಸರೇ ಇದೊಂದು ಶಕ್ತಿ ಅದಕ್ಕಾಗಿ ಗಾಂಧಿಜಿ ಅವರ ಮೌಲ್ಯಗಳನ್ನು ಅಳವಡಿಸಿಕೊಂಡು ಹೋಗಬೇಕೆಂದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಮಾತನಾಡಿ, ಮಹಾತ್ಮ ಗಾಂಧೀಜಿ ತನ್ನ ಸತ್ಯ ಅಹಿಂಸೆಯ ಸಿದ್ಧಾಂತದಿಂದಲೇ ಜಗವನ್ನು ಗೆದ್ದ ಚೇತನ ಮೂರ್ತಿ. ಅಕ್ಟೋಬರ್ 2 ಎಂಬುದು ಬಾಪು ಅವರ ಚಿಂತನೆ ಆದರ್ಶ ಜೀವನ ಮೌಲ್ಯಗಳನ್ನು ಸ್ಮರಿಸಿ ಅವರಂತೆ ನಡೆಯಲು ಪಣ ತೊಡುವ ದಿನವಾಗಿ ಸತ್ಯ ಶಾಂತಿ ಮತ್ತು ಅಹಿಂಸೆಯ ಮೌಲ್ಯಗಳನ್ನು ಯುವಕರೂ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಮಾತ್ರ ಜೀವನ ಉನ್ನತ ಮಟ್ಟಕ್ಕೆರಲು ಸಾಧ್ಯ ಎಂದು ಹೇಳಿದರು. ಅಧ್ಯಕ್ಷ ಬಸಪ್ಪ ಸಂತಿ ಪಿಕೆಪಿಎಸ್ ಅಧ್ಯಕ್ಷ ಸುರೇಶ ಕತ್ತಿ, ಗಿರಮಲ್ಲ ಸಂತಿ ಅವರು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜೀ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಈ ಸಮಯದಲ್ಲಿ ಉಪನ್ಯಾಸಕರಾದ ಎಸ್ ಐ ಪತ್ತಾರ. ಎಂ ಎಸ್ ಕುಂಬಾರ. ವಿ ವಿ ಬೆಕ್ಕೇರಿ. ಸರಸ್ವತಿ ರಬಕವಿ. ವಿಶ್ನು ಬಾಗಡಿ .ಅಶ್ವಿನಿ ಬಿರಾದಾರ.ಲಕ್ಷ್ಮಣ ತೇರದಾಳ ಸೇರಿದಂತೆ ವಿದ್ಯಾರ್ಥಿಗಳಿದ್ದರು. ಎಸ್ ಐ ಪತ್ತಾರ ಸ್ವಾಗತಿಸಿದರು.
ವಿ ವಿ ಬೆಕ್ಕೆರಿ ನಿರೂಪಿಸಿ. ವಿ ಜಿ ಬೈರನಟ್ಟಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು