7:37 AM Saturday17 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಪಾಲ್ದನೆ ಸಂತ ತೆರೆಸಾ ಚರ್ಚ್ ನ ಐಸಿವೈಎಂ ಸದಸ್ಯರಿಂದ ಪಾವ್ಸಾಂತ್ ಉಡ್ಕಣಾಂ ಕಾರ್ಯಕ್ರಮ

13/08/2026, 12:25

ಮಂಗಳೂರು(reporterkarnataka.com): ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಐಸಿವೈಎಂ ಘಟಕದ ಸದಸ್ಯರಿಂದ ಪಾವ್ಸಾಂತ್ ಉಡ್ಕಣಾಂ (ಮಳೆಯಲ್ಲಿ ಆಟ) ಎಂಬ ವಾರ್ಡ್ ಮಟ್ಟದ ಆಟೋಟ ಸ್ಪರ್ಧೆಗಳನ್ನು ಚರ್ಚ್ ನ ತೆರೆದ ಮೈದಾನದಲ್ಲಿ ಆಯೋಜಿಸಲಾಗಿತ್ತು.
ಪಂದ್ಯಾಟದ ಮೊದಲು ಚರ್ಚ್ ನ ಸಹಾಯಕ ಧರ್ಮ ಗುರು ವಂದನೀಯ ಫಾ. ಜೋಸೆಫ್ ಕುವೆಲ್ಲೊ ಪ್ರಾರ್ಥಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಂದನೀಯ ಫಾ. ರೋಶ್ವಿನ್ ಲೋಪೆಜ್ ಮಾತನಾಡಿ ಯುವ ಶಕ್ತಿಯ ಸದುಪಯೋಗ ಅಗತ್ಯ. ಇಂತಹ ಕ್ರೀಡೆಗಳಿಂದ ವಾರ್ಡುಗಳ ಸದಸ್ಯರ ಪ್ರತಿಭೆಗಳು ಹೊರ ಹೊಮ್ಮುತ್ತವೆ. ಸಂಘಟನೆ, ಏಕತೆ, ಒಗ್ಗಟ್ಟು ಹಾಗೂ ಸೇವಾ ಮನೋಭಾವನೆಗೆ ವೇದಿಕೆ ಕಲ್ಪಿಸಿದಂತಾಗುತ್ತದೆ ಎಂದರು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ವಿಜೇತ ವಾರ್ಡುಗಳ ಸದಸ್ಯರ ತಂಡಗಳಿಗೆ ಟ್ರೋಫಿಯನ್ನು ವಿತರಿಸಿ ಐ ಸಿ ವೈ ಎಂ ಸದಸ್ಯರ ಕಾರ್ಯ ವೈಖರಿಯನ್ನು ಕೊಂಡಾಡಿ ಮುಂದೆಯೂ ಚರ್ಚ್ ನ ಏಳಿಗೆಗಾಗಿ ಶ್ರಮಿಸ ಬೇಕೆಂದರು.
ಸ್ಪರ್ಧೆಯಲ್ಲಿ ಸೆಲಿನ್ ಡಿ ಸೋಜಾ ನೇತೃತ್ವದ ಸಂತ ಸೆಬಾಸ್ಟಿಯನ್ ತಂಡ ಪ್ರಥಮ, ಶೀಲಾ ಡಿ ಸೋಜಾ ನೇತೃತ್ವದ ತಂಡ ದ್ವಿತೀಯ ಹಾಗೂ ರೋಷನ್ ಮೊಂತೇರೊ ನೇತೃತ್ವದ ತಂಡ ತೃತೀಯ ಬಹುಮಾನ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ಚರ್ಚ್ ನ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ,ಕಾರ್ಯದರ್ಶಿ ಹಾಗೂ ಐ ಸಿ ವೈ ಎಂ ಘಟಕದ ಸಚೇತಕ ರೋಷನ್ ಮೊಂತೇರೊ , ಐ ಸಿ ವೈ ಎಂ ಘಟಕದ ಅಧ್ಯಕ್ಷ ಡ್ಯಾರನ್ ಅರಾನ್ಹಾ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು