10:48 AM Thursday30 - April 2026
ಬ್ರೇಕಿಂಗ್ ನ್ಯೂಸ್
ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ… ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ… ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಏಪ್ರಿಲ್‌ ತಿಂಗಳ ಟಾಪರ್ ಆಗಿ ಪಂಚಮಿ ಪ್ರಕಾಶ್ ಹಾಗೂ ಭುವಿ ಸಜೀಪ ಆಯ್ಕೆ

30/04/2026, 10:47

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಏಫ್ರಿಲ್ ತಿಂಗಳ ಟಾಪರ್ ಆಗಿ ಪಂಚಮಿ ಪ್ರಕಾಶ್ ಹಾಗೂ ಭುವಿ ಸಜೀಪ ಆಯ್ಕೆಯಾಗಿದ್ದಾರೆ.
ಪಂಚಮಿ ಪ್ರಕಾಶ್ ಅಜೆಕಾರು, ಪ್ರಕಾಶ್ ಅಜೆಕಾರು ಹಾಗೂ ಧೃತಿ ಪ್ರಕಾಶ್ ಅವರ ಪುತ್ರಿ.
ಇವಳು ಪ್ರಸ್ತುತ ಗುರುಕೃಪಾ ಸೆಂಟ್ರಲ್ ಸ್ಕೂಲ್ ಬಲ್ಯೊಟ್ಟು ಹೊಸ್ಮಾರು ಇಲ್ಲಿ 6 ನೇ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಭರತನಾಟ್ಯ, ಸಂಗೀತ, ಯಕ್ಷನೃತ್ಯ, ಅಭಿನಯ ಗೀತೆ, western dance, ನಾಟಕ ಇವೆಲ್ಲ ಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಸಂಗೀತವನ್ನು ಯಶವಂತ್ ಎಂ.ಜಿ. ಅವರಲ್ಲಿ ಕಲಿಯುತ್ತಿದ್ದಾಳೆ. ಈಗಾಗಲೇ ಕಟೀಲು, ಕೊಲ್ಲೂರು, ಉಡುಪಿ, ಮಂಗಳೂರು, ಕಾರ್ಕಳ, ಮೂಡಬಿದ್ರಿ ಹೀಗೆ 55ಕ್ಕಿಂತಲೂ ಅಧಿಕ ವೇದಿಕೆ ಯಲ್ಲಿ ತನ್ನ ನೃತ್ಯ, ಹಾಡುಗರಿಕೆ, ಅಭಿನಯದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿ ಹಲವಾರು ವೇದಿಕೆಯಲ್ಲಿ ಪ್ರಶಂಸನಾ ಪತ್ರ ಸ್ಮರಣಿಕೆ ಗಳನ್ನು ಪಡೆದಿದ್ದಾಳೆ. ಮಂಗಳೂರಿನ ಪ್ರತಿಷ್ಠಿತ ವಾಹಿನಿಯಾದ ಅಭಿಮತ ವಾಹಿನಿಯಲ್ಲಿ ಅನೇಕ ಬಾರಿ ಕಾರ್ಯಕ್ರಮ ನೀಡಿದ್ದಾಳೆ. ರೇಡಿಯೋ ಸಾರಂಗ 107.8 ಇದರಲ್ಲೂ ಕಾರ್ಯಕ್ರಮ ನೀಡಿರುತ್ತಾಳೆ. ಮೂಡಬಿದ್ರೆ ಯ ಅಗರಿ ಎಂಟರ್ ಪ್ರೈಸಸ್ ಸಂಸ್ಥೆಯು ಇವಳ ಕಲೆಯನ್ನು ಗುರುತಿಸಿ ವಿಶೇಷ ಉಡುಗೊರೆ ಹಾಗೂ ಈಗಾಗಲೇ ಇವಳ ಪ್ರತಿಭೆಯನ್ನು ಗುರುತಿಸಿ


Lions international lions club central karkala ಇವರ ವತಿಯಿಂದ ಸನ್ಮಾನ ಮಾಡಿದ್ದಾರೆ. Axis max ವತಿಯಿಂದ ‘ಕಲಾರತ್ನ ಪುರಸ್ಕಾರ’, ಕಲಾವಿದರ ರಕ್ಷಣಾ ವೇದಿಕೆ ಬೆಂಗಳೂರು ಅವರಿಂದ” ಸುವರ್ಣ ಕರ್ನಾಟಕ ಬಾಲ ಕಲಾ ಪುರಸ್ಕಾರ”ಲಭಿಸಿದೆ.
ಉದಯ್ ಕುಮಾರ್ ಮತ್ತು ಪವಿತ್ರ ದಂಪತಿ ಪುತ್ರಿ ಭುವಿ ಸಜೀಪ. ಈಕೆ ಪ್ರಸ್ತುತ ಪಾಣೆಮಂಗಳೂರು ಎಸ್.ಎಲ್.ಎನ್. ಪಿ . ವಿದ್ಯಾಲಯದಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ತನ್ನ ಸಣ್ಣ ವಯಸ್ಸಿನಲ್ಲಿಯೇ ಕಲೆ , ಸಂಗೀತ ಮತ್ತು ಸಾಂಸ್ಕೃತಿಕ ಲೋಕದಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಈಕೆ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದ್ದಾಳೆ. ಮುಡಿಪು ಮಂದಾರ ಟ್ರಸ್ಟ್ ನ ಗುರುಗಳಾದ ಅರುಣ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಭುವಿ ಹಲವಾರು ವೇದಿಕೆಯಲ್ಲಿ ದೈವ ದೇವರುಗಳ ಸುಂದರ ಚಿತ್ರಗಳನ್ನು ಬಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಭರತನಾಟ್ಯವನ್ನು ವಿದುಷಿ ಸ್ವಾತಿ ಭಟ್ ಅವರಲ್ಲಿ ಕಲಿಯುತ್ತಿದ್ದಾರೆ ಹಾಗೂ ಸೀನಿಯರ್ ಪರೀಕ್ಷೆಯ ಪೂರ್ಣಗೊಳಿಸಿದ್ದಾರೆ. ಈಗಾಗಲೇ ವಿವಿಧ ವೇದಿಕೆಗಳಲ್ಲಿ 85ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿ ಜನಮನ ಗೆದ್ದಿದ್ದಾಳೆ. ಶಾಸ್ತ್ರೀಯ ಸಂಗೀತವನ್ನು ಗುರುಗಳಾದ ಶಶಿಕಲಾ ಪ್ರಭು ಇವರಲ್ಲಿ ಕಲಿಯುತ್ತಿದ್ದಾರೆ .ಭುವಿ ಚಿಣ್ಣರ ಬಣ್ಣ, ಮುಳಿಯ ಜ್ಯುವೆಲ್ಲರ್ಸ್, ಭಾರತ್ ಕೋ ಆಪರೇಟಿವ್ ಬ್ಯಾಂಕ್ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ. ವೆಸ್ಟರ್ನ್ ಡಾನ್ಸ್ ನ್ನು ಕಲಿಯುತ್ತಿದ್ದಾರೆ. ಆಸ್ಕಿಸ್ ಮ್ಯಾಸ್ಕ್ ಲೈಪ್ ಇನ್ಸೂರೆನ್ಸ್ ರವರ “ಕಲಾರತ್ನ” ಪ್ರಶಸ್ತಿ,”ಭರವಸೆಯ ಬೆಳಕು” ಪ್ರಶಸ್ತಿ ದೊರಕಿದೆ .

ಇತ್ತೀಚಿನ ಸುದ್ದಿ

ಜಾಹೀರಾತು