7:36 PM Wednesday27 - May 2026
ಬ್ರೇಕಿಂಗ್ ನ್ಯೂಸ್
Bangalore | ಐಪಿಎಲ್ ಬೆಟ್ಟಿಂಗ್ ವಿರುದ್ಧ ಸಿಸಿಬಿ ಭರ್ಜರಿ ಕಾರ್ಯಾಚರಣೆ: 23 ಜನ… ಕಾಂಗ್ರೆಸ್‌ ಹೈಡ್ರಾಮಾಕ್ಕೆ ವಿಜಯೇಂದ್ರ ವ್ಯಂಗ್ಯ: ಸಿದ್ದರಾಮಯ್ಯ ಬಿಟ್ಟು ಯಾರೇ ಸಿಎಂ ಆದ್ರೂ ಅದು… ಬೆಂಗಳೂರಿಗೆ ಮಹಾಮಾರಿ ಎಬೋಲಾ ಎಂಟ್ರಿ?: ಉಗಾಂಡದ ಮಹಿಳೆ ಐಸೋಲೇಷನ್‌ನಲ್ಲಿ..! ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ 30ರಂದು ಮಂಗಳೂರಿಗೆ: ಧರ್ಮಸ್ಥಳದಲ್ಲಿ ವಾಸ್ತವ್ಯ ಗಂಡನ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದ ಗರ್ಭಿಣಿ ಪತ್ನಿ! ಕಿಡ್ನಿ, ಹಾರ್ಟ್ ಮತ್ತು… ಕಾಫಿ ತೋಟದಲ್ಲಿ ಕಾಡಾನೆಗಳ ‘ರೌದ್ರ ನರ್ತನ: ಅರಣ್ಯ ಸಿಬ್ಬಂದಿಯನ್ನೇ ಬೆನ್ನಟ್ಟಿದ ಗಜಪಡೆ ಮೇಕೆದಾಟು ವಿವಾದ: ತಮಿಳುನಾಡು ಸಿಎಂ ವಿಜಯ್ ತುರ್ತು ಸಭೆ, ಕಾನೂನು ಹೋರಾಟ ಚುರುಕುಗೊಳಿಸಲು… ಕೊಲ್ಲೂರು ಆಕ್ಸಿಡೆಂಟ್ | ಮೃತ ಮಹಿಳೆಯ ಮೈ ಮೇಲಿನ ಚಿನ್ನಾಭರಣ ಕದ್ದ ಕೇಸಿಗೆ… ಚಿಕ್ಕಮಗಳೂರು: ಕೈ ಕೈ ಮಿಲಾಯಿಸುವ ಮಟ್ಟಿಗೆ ತಲುಪಿದ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ… ಮಂಗಳೂರು ವಿಮಾನ ದುರಂತ | ಕಾಕ್‌ಪಿಟ್‌ನಲ್ಲಿ ಹಾರಾಟದ ವೇಳೆ 1 ಗಂಟೆ 40…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಮೇ ತಿಂಗಳ ಟಾಪರ್ ಆಗಿ ರಿದ್ವಿನ್ ಡಿ. ಅರ್ವ ಹಾಗೂ ಅಮೋಘ್ ಭಟ್ ಆಯ್ಕೆ

27/05/2026, 19:30

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮೇ ತಿಂಗಳ ಟಾಪರ್ ಆಗಿ ರಿದ್ವಿನ್ ಡಿ. ಅರ್ವ ಹಾಗೂ ಅಮೋಘ್ ಭಟ್ ಆಯ್ಕೆಯಾಗಿದ್ದಾರೆ.
ರಿದ್ವಿನ್ ಡಿ ಆರ್ವ 2020ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಜನಿಸಿದ್ದಾನೆ. ತಂದೆ ದಿವಾಕರ ಎಂ. ಎಂ. ಫಾರೆಸ್ಟರ್ ಆಗಿ ವೇಣೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಸ್ಮಿತಾ ಎಂ.ಎನ್ . ಅವರು ವೇಣೂರಿನ ಬ್ರೈಟ್ ಹಾರಿಜಾನ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಇವರ ಕುಟುಂಬವು ವೇಣೂರಿನಲ್ಲಿ ನೆಲೆಸಿದೆ.
ರಿದ್ವಿನ್ ಡಿ ಆರ್ವ, ರಾಜ್ ಅಕಾಡೆಮಿ ಸಿಬಿಎಸ್ಇ ಶಾಲೆಯಲ್ಲಿ ಯುಕೆಜಿ ಕಲಿತು. ಇದೀಗ ಒಂದನೇ ತರಗತಿಗೆ ಬ್ರೈಟ್ ಹಾರಿಸನ್ ಇಂಟರ್ನ್ಯಾಷನಲ್ ಸ್ಕೂಲ್ ಸೇರಲಿದ್ದಾನೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಇವನ ಸಾಂಸ್ಕೃತಿಕ ಚಟುವಟಿಕೆಯು ಕೃಷ್ಣವೇಷ ಸ್ಪರ್ಧೆಯಿಂದ ಪ್ರಾರಂಭವಾಗಿ ಕಥೆ ಹೇಳುವುದು, ಹಾಡು, ಚಿತ್ರಕಲೆ ,ನೃತ್ಯಗಳ ಮೂಲಕ ಪುಟಾಣಿ ಕಲಾವಿದನಾಗಿ ಬೆಳೆಯುತ್ತಿದ್ದಾನೆ.
ತನ್ನ ಎರಡುವರೆ ವರ್ಷದಲ್ಲಿ ನಮ್ಮ ಟಿವಿ ಮತ್ತು ಆಲ್ ಕೌಸರ್ ಮೀಡಿಯಾ ಇವರ ಸಹಯೋಗದಲ್ಲಿ ಹಿದಾಯತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಮುದ್ದು ಕಂದ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾನೆ ಮತ್ತು ಅರ್ಥ ಹೋಂಡಾ ಮಂಗಳೂರು ಇವರು ನಡೆಸಿದ ಚಿಲ್ಡ್ರನ್ ಡಾನ್ಸ್ ಕಾಂಪಿಟೇಶನ್ ನಲ್ಲಿ ಭಾಗವಹಿಸಿ ತೀರ್ಪುಗಾರರಿಂದ ಪ್ರಶಂಸೆಗೆ ಒಳಗಾಗಿರುತ್ತಾನೆ. ತನ್ನ ಮೂರುವರೆ ವರ್ಷಕ್ಕೆ ನರ್ಸರಿ ಗೆ ಸೇರಿ ರಾಜ ಅಕಾಡೆಮಿ ಸಿಬಿಎಸ್ಇ ಶಾಲೆಯಲ್ಲಿ ನಡೆದ ಕೃಷ್ಣ ವೇಷ ಸ್ಪರ್ಧೆ, ಕೈಕಂಬ, ಬಜ್ಪೆ , ಕಿನ್ನಿ ಕಂಬಳ, ಗಂಜಿಮಠ ಹೀಗೆ ಹಲವು ಕಡೆ ನಡೆದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ನಗದು ಪುರಸ್ಕಾರ, ಫಲಕ ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದಿರುತ್ತಾನೆ. ಪ್ರಸಾದ್ ಬುಕ್ ಡಿಸ್ಟ್ರಿಬ್ಯೂಟರ್ಸ್ ನಡೆಸಿದ ಕಲರಿಂಗ್ ಕಾಂಪಿಟೇಶನ್ ನಲ್ಲಿ ತೃತೀಯ ಸ್ಥಾನ ಪಡೆದಿರುತ್ತಾನೆ. ತನ್ನ ಶಾಲೆಯಲ್ಲಿ ನಡೆಸಿದ ಫ್ಯಾಷನ್ ಶೋನಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾನೆ. ಕುಕ್ಕಿಂಗ್ ವಿಥೌಟ್ ಫೈಯರ್ ಪ್ರಥಮ, ಕಥೆ ಹೇಳುವುದರಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ.


ಹೀಗೆ ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸದಾ ಮುಂದಿರುತ್ತಾನೆ.
ಆರ್ ಒ ಇಂಟರ್ನ್ಯಾಷನಲ್ ವಾಮಂಜೂರು ಇವರು ನಡೆಸಿದ ಜೂನಿಯರ್ ಸಾಂತಾ 2024 ರಲ್ಲಿ ಭಾಗವಹಿಸಿರುತ್ತಾನೆ. ಪೆರ್ಮುದೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಿದ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾನೆ ಮತ್ತು ಸ್ವಿಗ್ಗಿ ಇನ್ಸ್ಟಾರ್ಮೆಂಟ್ ಚಾಲೆಂಜ್ ನಲ್ಲಿಯೂ ಭಾಗವಹಿಸಿರುತ್ತಾನೆ.
ಕಿನ್ನಿಗೊಳಿಯಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಹಬ್ಬದಲ್ಲಿ ಭಾಗವಹಿಸಿ ಕಥೆ ಹೇಳುವುದರ ಮೂಲಕ ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿರುತ್ತಾನೆ. ಮತ್ತು ಸರಸ್ವತಿ ಸದನ ಕಟೀಲು ಇಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಹಬ್ಬದಲ್ಲಿಯೂ ಕೂಡ ಭಾಗವಹಿಸಿ ನೃತ್ಯ ಪ್ರದರ್ಶನ ನೀಡಿದ್ದಾನೆ. ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಮೂಡಬಿದಿರೆ ಘಟಕ ಅಂದು ಇಂದು ಮುಂದು ಚಿಂತನೆ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾನಪದ ಗೀತೆಯನ್ನು ಹಾಡುವುದರ ಮೂಲಕ ಎಲ್ಲರನ್ನು ಮಂತ್ರಮುಗ್ಧಗೊಳಿಸಿರುತ್ತಾನೆ
2024-25 ಮತ್ತು ಲಿಟಲ್ ಹ್ಯಾಂಡ್ಸ್ ಒಲಂಪಿಯಾಡ್ ನಲ್ಲಿ ಜಿಲ್ಲಾಮಟ್ಟದಿಂದ ಗೆದ್ದು ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಅಲ್ಲಿಯೂ ಪದಕವನ್ನು ಪಡೆದಿರುತ್ತಾನೆ ಮತ್ತು 2052-26 ನೇ ಸಾಲಿನ ಎವರೆಸ್ಟ್ ಇಂಟರ್ನ್ಯಾಷನಲ್ ಕಿಂಡರ್ ಬಿ ಸೀನಿಯರ್ ಕಿಂಡರ್ ಲಿಟರೇಚರ್ ನಲ್ಲಿ ನ್ಯಾಷನಲ್ ಲೆವೆಲ್ ಗೆ ಆಯ್ಕೆಯಾಗಿದ್ದನು ಮತ್ತು ರಾಜ್ಯಮಟ್ಟದ ಬಾಲ ರತ್ನ ಪ್ರಶಸ್ತಿ ಲಭಿಸಿರುತ್ತದೆ.ಈ ಪುಟಾಣಿಯು ಸಾಂಸ್ಕೃತಿಕವಾಗಿ ಅಷ್ಟೇ ಅಲ್ಲದೆ ಕಲಿಕೆಯಲ್ಲಿಯೂ ಮುಂದಿದ್ದು 2024 – 25 ನೇಯ ಸಾಲಿನ ಎಲ್ ಕೆ ಜಿ ವಾರ್ಷಿಕ ಪರೀಕ್ಷೆಯಲ್ಲಿ ಮತ್ತು 2025-26 ಯುಕೆಜಿ ವಾರ್ಷಿಕ ಪರೀಕ್ಷೆ ಗಳಲ್ಲಿ ದ್ವಿತೀಯ ಸ್ಥಾನ ಪಡೆದು ನಗದು ಪುರಸ್ಕಾರ ಪಡೆದುಕೊಂಡಿದ್ದಾನೆ. ಪದ್ಮಶ್ರೀ ಭಟ್ ಸಾರಥ್ಯದ ವಾಯ್ಸ್ ಆಫ್ ಆರಾಧನ ತಂಡದ ಸಕ್ರಿಯ ಸದಸ್ಯನಾಗಿದ್ದು 2025 ಏಪ್ರಿಲ್ , ಆಗಸ್ಟ್, ನವೆಂಬರ್ ಮತ್ತು 2026 ಫೆಬ್ರವರಿ, ಏಪ್ರಿಲ್ ತಿಂಗಳುಗಳ ವಿಜೇತನಾಗಿದ್ದಾನೆ. ಲಯನ್ಸ್ ಕ್ಲಬ್ ಕಾರ್ಕಳ ಸೆಂಟ್ರಲ್ ಪದಗ್ರಹಣ ಸಮಾರಂಭದಲ್ಲಿ ಸಂಸ್ಕೃತ ಕಾರ್ಯಕ್ರಮ ನೀಡಿ ಪ್ರಶಸ್ತಿ ವಿಜೇತನಾಗಿರುತ್ತಾನೆ. ಹಾಗೆಯೇ ತುಳುನಾಡು ವಾರ್ತೆಯ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿಯೂ ಕೂಡ ಭಾಗವಹಿಸಿರುತ್ತಾನೆ, ಶಾಲೆಯಲ್ಲಿ ನಡೆದ ಕಾರ್ಟೂನ್ ಕ್ಯಾರೆಕ್ಟರ್ ಪ್ಲೇನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ. ಪ್ರತಿದಿನ ಶುಭನುಡಿ ಮತ್ತು ಕಥೆ ,ಕವನ, ಭಾಷಣ ಹೇಳುತ್ತಿರುತ್ತಾನೆ.
ಸಂಭ್ರಮ ಭಟ್ ಹಾಗೂ ಕಾರ್ತಿಕ್ ಭಟ್ ಅವರ ಮಗನಾದ ಅಮೋಘ್ ಭಟ್ ಕೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಕಿನ್ನಿಗೋಳಿಯ ಗೋಪಾಲಕೃಷ್ಣ ನಗರದಲ್ಲಿ ನೆಲೆಸಿದ್ದು, ಶ್ರೀ ದುರ್ಗಾಪರಮೇಶ್ವರಿ ಆಂಗ್ಲ ಮಾಧ್ಯಮ ಶಾಲೆ ಕಟೀಲಿನಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಸಂಗೀತ, ಚೆಂಡೆ, ಚಿತ್ರಕಲೆ, ಯಕ್ಷಗಾನದಲ್ಲಿ ಆಸಕ್ತಿ ಹೊಂದಿ ಅಭ್ಯಾಸದ ಹಾದಿಯಲ್ಲಿದ್ದಾನೆ. ಕಟೀಲಿನಲ್ಲಿ ನಡೆಯುವ ಕೃಷ್ಣ ಜನ್ಮಾಷ್ಟಮಿಯ ಸ್ಪರ್ಧೆಯಲ್ಲಿ 8 ತಿಂಗಳ ಮಗುವಿದ್ದಾಗ ವೇದಿಕೆ ಏರಿದ್ದಾನೆ. ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಬಾರಿ ಬಹುಮಾನ ಪಡೆದಿದ್ದಾನೆ. ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕಟೀಲಿನಲ್ಲಿ ನಡೆಯುವ ಹುಲಿ ಕುಣಿತದಲ್ಲಿ ಹುಲಿಯ ವೇಷ ಹಾಕಿ ಕುಣಿದಿದ್ದಾನೆ. ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ ನಡೆಯುವ ಸಂಸ್ಕಾರ ಶಿಬಿರದಲ್ಲಿ ಭಾಗವಹಿಸಿ ಹಲವಾರು ಉತ್ತಮ ವಿಷಯಗಳನ್ನು ಕಲಿಯುತ್ತಾ, ಸಂಸ್ಕಾರಗಳನ್ನು ಅರಿಯುತ್ತಾ, ಹಲವಾರು ಸ್ತೋತ್ರಗಳನ್ನು ಕಲಿತುಕೊಂಡಿದ್ದಾನೆ. ಪ್ರಶಸ್ತಿ ಪತ್ರಗಳನ್ನು ಪಡೆದಿದ್ದಾನೆ. ಶಾಲೆಯಲ್ಲಿ ನಡೆಸಿದ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಮಾತುಗಾರಿಕೆಯಲ್ಲಿ ,ಜಾನಪದ ಗೀತೆಯಲ್ಲಿಯೂ ಬಹುಮಾನ ಪಡೆದುಕೊಂಡಿದ್ದಾನೆ. ಕಥಾಬಿಂದು ಪ್ರಕಾಶನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರವನ್ನು ಪಡೆದಿದ್ದಾನೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಂಸಾಳೆ ನೃತ್ಯ ಮಾಡಿದ್ದಾನೆ. ದೇಶ ಭಕ್ತಿಗೀತೆ, ಜಾನಪದ ಗೀತೆ, ಭಕ್ತಿಗೀತೆಯನ್ನು ಹಾಡುವುದರ ಜೊತೆಗೆ ಉಗಾಭೋಗಗಳು ಮತ್ತು ಭಗವದ್ಗೀತೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು ಅಭ್ಯಾಸಿಸುತ್ತಿದ್ದಾನೆ. 2025ನೇ ಸಾಲಿನ ಪ್ರತಿಭಾ ಕಾರಂಜಿಯಲ್ಲಿ ಭಕ್ತಿಗೀತೆಯನ್ನು ಹಾಡಿ ದ್ವಿತೀಯ ಬಹುಮಾನ ಪಡೆದಿದ್ದಾನೆ. ವಾಯ್ಸ್ ಆಫ್ ಆರಾಧನಾ ತಂಡದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾನೆ. ಅಗರಿ ಎಂಟರ್ಪ್ರೈಸಸ್ ನಿಂದ ಬಹುಮಾನವನ್ನು ಪಡೆದಿದ್ದಾನೆ. ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಚಾರ್ಲಿ ಚಾಪ್ಲಿನ್ ನಟನೆ ಮಾಡಿ ಜನರನ್ನು ರಂಜಿಸಿದ್ದಾನೆ. ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಕಾರ್ಯಕ್ರಮ ನೀಡಿ ಪ್ರಶಸ್ತಿ ಪತ್ರ ಪಡೆದಿದ್ದಾನೆ. ಆಭರಣ ಜ್ಯುವೆಲ್ಲರಿಯವರು ಆಯೋಜಿಸಿದ್ದ ಮಕ್ಕಳ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ಮ್ಯ್ಯಾಜಿಕ್ ಮಾಡಿ ಜನರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. V4 ನ್ಯೂಸ್ ಚಾನಲ್ ನಲ್ಲಿ ನಡೆದ ಮಕ್ಕಳ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾನೆ. ಅಭಿಮತ ಚಾನಲ್ ನಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ನಡೆಸಿದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇಶಭಕ್ತಿ ಗೀತೆಯನ್ನು ಹಾಡಿದ್ದಾನೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವರ ಸನ್ನಿಧಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿಗೀತೆಯನ್ನು ಹಾಡಿ ಮೆಚ್ಚುಗೆ ಪಡೆದಿದ್ದಾನೆ.
ಕರ್ನಾಟಕ ಬ್ಯಾಂಕ್ ಗೆ ಸಂಬಂಧಿಸಿದಂತೆ ಲೀ ಎಂಟರ್ಟೈನ್ಮೆಂಟ್ ಜಾಹಿರಾತು ಸಂಸ್ಥೆಯಲ್ಲಿ ಹಿರಿಯ ಕಲಾವಿದರಾದ ಟೆನ್ನಿಸ್ ಕೃಷ್ಣ ಅವರಬಜೊತೆಗೆ ಜಾಹಿರಾತಿನಲ್ಲಿ ನಟಿಸಿರುತ್ತಾರೆ. ರೇಡಿಯೋ ಸಾರಂಗ್ 107.8 ನಲ್ಲಿ ನನ್ನ ದೇಶ ನನ್ನ ಹೆಮ್ಮೆ ಎಂಬ ವಿಷಯದ ಕುರಿತು ಭಾಷಣವನ್ನು ಮಾಡಿದ್ದಾನೆ.

ಇತ್ತೀಚಿನ ಸುದ್ದಿ

ಜಾಹೀರಾತು