7:52 AM Friday31 - July 2026
ಬ್ರೇಕಿಂಗ್ ನ್ಯೂಸ್
ಮಂಗಳೂರು ಪೊಲೀಸರಿಂದ ಸುಮಾರು 82 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 157… ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕಿಯರೇ ಡ್ರಗ್ಸ್ ಜಾಲದ ಡಾನ್‌ಗಳು!! ಅಸ್ಸಾಂ ಪ್ರವಾಹ ಕೊಂಚ ಇಳಿಮುಖ: 70ಕ್ಕೂ ಅಧಿಕ ಸಾವು; 4.45 ಲಕ್ಷಕ್ಕೂ ಹೆಚ್ಚು… Mysore | ಮಲೆಮಹದೇಶ್ವರ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಫೈರಿಂಗ್: ಕಾಡುಹಂದಿ ಬೇಟೆಗಾರನಿಗೆ ಬಿತ್ತು… Bangalore | ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಸತೀಶ್ ಬೈಕಂಪಾಡಿ ಸೇರಿ 4 ಮಂದಿ ಆರೋಪಿಗಳಿಗೆ… Bangalore | ಅಗ್ನಿ ದುರಂತ: ಚಂದಾಪುರದಲ್ಲಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು ಭಾರತದ ಇತಿಹಾಸದಲ್ಲೇ ಮಕ್ಕಳ ಮೇಲೆ ಈ ರೀತಿ ಹಲ್ಲೆ ನಡೆದಿಲ್ಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷದ… ನೀಟ್ ಪ್ರತಿಭಟನೆ | ಹೋರಾಟಗಾರರಿಗೆ ಉಚಿತ ಆಹಾರ ಹಂಚಿದವನ ಬಂಧನ; ನನ್ನನ್ನು ಅಪಹರಿಸಿದ್ದರು:… *ಲಗೇಜ್​ ರೂಮ್​ನಲ್ಲಿ ಹೊಗೆ: ರಾಜ್‌ಕೋಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ 194 ಮಂದಿ ಹೊತ್ತೊಯ್ಯುತ್ತಿದ್ದ…

ಇತ್ತೀಚಿನ ಸುದ್ದಿ

ಮೇ 15ರಂದು ರಾಜ್ಯಾದ್ಯಂತ ಕನ್ನಡ ಚಲನಚಿತ್ರ “ಶಿಖಂಡಿ” ಬಿಡುಗಡೆ

29/04/2026, 18:17

ಗಣೇಶ್ ಇನಾಂದಾರ್ ಬಳ್ಳಾರಿ

info.reporterkaerk@gmail
com

ಕನ್ನಡ ಚಲನಚಿತ್ರ ಶಿಖಂಡಿ ಮೇ 15ರಂದು ರಾಜ್ಯಾದ್ಯಂತ ನೂರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕರಾದ ಪೊಲಾ ಪ್ರವೀಣ್ ತಿಳಿಸಿದರು.
ಬುಧವಾರ ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು, ಈ ಚಿತ್ರದಲ್ಲಿ ಕಥಾವಸ್ತುವಿನ ಉತ್ತಮ ಸಂದೇಶವಿದೆ,ಒಳ್ಳೆಯ ಹಾಡುಗಳು ಎಲ್ಲರೂ ನೋಡಿ ಆನಂದಿಸಿ ತಾಯಿ ಪ್ರೀತಿಸುವ ವಸ್ತು, ಹಾಡು ಪ್ರೇಕ್ಷಕರ ಮನ ಕರಗಸುವಂತೆ ಮೂಡಿದೆ ಸದ್ಯದಲ್ಲಿ ಟ್ರೇಲರ್
ಬಿಡುಗಡೆ ಮಾಡಲಿದೆ ಎಂದು ತಿಳಿದರು.
ಇಂದಿನ ಸಮಾಜದಲ್ಲಿ ಮಂಗಳಮುಖಿಯರ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಅಳಿಸು ಹಾಕುವ ಹಾಗೂ ಸಮಾಜದ ಆಚರಣೆಗೆ ದೈವತ್ವದ ಕಲ್ಪನೆಯ ತುಂಬುವ ಪ್ರಯತ್ನ ಈ ಚಿತ್ರದಲ್ಲಿ ಪ್ರಯತ್ನಮಾಡಲಾಗಿದೆ ಎಂದು ವಿವರಿಸಿದರು. ಚಿತ್ರ ಲಾಭಗಳಿಸಿದರೆ ಮಂಗಳಮುಖಿ ಸಮಾಜದ ಜನರಿಗೆ ಹೊಲಿಗೆ ಯಂತ್ರ ಕೊಡಿಸಿ ಅವರು ಭಿಕ್ಷಾಟನೆಗೆ ಹೋಗುವುದನ್ನು ತಪ್ಪಿಸಲು ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ಗುರುಮೂರ್ತಿ ಮಾತನಾಡಿ,ಮಹಾಭಾರತದ ಶಿಖಂಡಿ ಪಾತ್ರವನ್ನು ಚಿತ್ರದ ಮೂಲ ವಸ್ತುವಾಗಿಟ್ಟುಕೊಂಡು ರಚಿಸಿದೆ.
ಮೊದಲಿಗೆ ರಾಜ್ಯದ ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದೆ, ನಂತರ ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡಲಿ ಬಳ್ಳಾರಿಯ 22 ಸ್ಥಳೀಯ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ.
ಬಳ್ಳಾರಿ, ಮೈಸೂರು, ಬಿಡದಿ,ಮಾಗಡಿ,ಬೆಂಗಳೂರು, ಮೊದಲಾದ ಕಡೆ ಚಿತ್ರೀ ಕರಿಸಲಾಗಿದೆ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ ಚಿತದ್ರ ಒಟ್ಟು ಸಮಯವು 2.20 ಗಂಟೆಗಳ ಕಾಲ ವಾಗಿರುತ್ತದೆ ಚಿತ್ರದ ಹಾಡುಗಳನ್ನು ಚಿನ್ನಸ್ವಾಮಿ ಹಾಡು ಬರೆದಿದ್ದಾರೆ ಎಂದು ವಿವರಿಸಿದರು.
ಚಿತ್ರದ ನಾಯಕಿ ಖ್ಯಾತಿ ಹಾಗೂ ನಾಯಕ ನಟ ಯುವರಾಜ್ ಗೌಡ ಮಾತನಾಡಿದರು, ನಿಖಿಲ್ ಮಾಳೇಕರ್,ಸ್ವಾಮಿ,ಚಾಂದಿನಿ,ಆನಂದ್ ಹೂಗಾರ್,ಸಹ ನಿರ್ದೇಶಕ ಉಮೇಶ್ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು