1:30 AM Wednesday6 - May 2026
ಬ್ರೇಕಿಂಗ್ ನ್ಯೂಸ್
ದುಬಾರೆ | ಅರಣ್ಯ ಸಚಿವರಿಗೆ ಘೇರಾವ್ ಯತ್ನ: ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ ಪಶ್ಚಿಮ ಬಂಗಾಳದಲ್ಲಿ ನೂತನ ಸರಕಾರ ರಚನೆ: ಚುನಾವಣಾ ಆಯೋಗ ಅಧಿಸೂಚನೆ ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳು… ಪಶ್ಚಿಮ ಬಂಗಾಳ: ರಾಜೀನಾಮೆ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಣೆ ಧಾರವಾಡದಲ್ಲಿ ಬೌದ್ಧ ಸನ್ಯಾಸಿ ಕೊಲೆ ಪ್ರಕರಣ: ಮಹಾರಾಷ್ಟ್ರದಲ್ಲಿ 3 ಮಂದಿ ಆರೋಪಿಗಳ ಅರೆಸ್ಟ್ ಸಿದ್ದಾಪುರ: ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ದಾರುಣ ಸಾವು ಕೇವಲ 1 ಮತದಿಂದ ಡಿಎಂಕೆ ಅಭ್ಯರ್ಥಿ ವಿರುದ್ಧ ರೋಚಕ ಗೆಲುವು ಕಂಡ ಟಿವಿಕೆ… ಕೇರಳದಲ್ಲಿ ಯುಡಿಎಫ್‌ ಶತಕ: ಸಿಎಂ ರೇಸ್​ನಲ್ಲಿ ಮೂವರ ಹೆಸರು ಪಶ್ಚಿಮ ಬಂಗಾಳ: ಚುನಾವಣೆ ಫಲಿತಾಂಶ ಬಳಿಕ ಗಲಾಟೆ, ಪೊಲೀಸರಿಂದ ಲಾಠಿಚಾರ್ಜ್ ಪಶ್ಚಿಮ ಬಂಗಾಳ: ಸಿಎಂ ಮಮತಾ ಬ್ಯಾನರ್ಜಿ ನಿವಾಸದ ಎದುರು ‘ಜೈ ಶ್ರೀರಾಮ್’ ಘೋಷಣೆ…

ಇತ್ತೀಚಿನ ಸುದ್ದಿ

ಮೈಸೂರು: ಹಾಡಹಗಲೇ ಕಾರು ಅಡ್ಡಗಟ್ಟಿ ತರಕಾರಿ ವ್ಯಾಪಾರಿಯ ಭೀಕರ ಹತ್ಯೆ

07/10/2025, 20:43

ಗಿರಿಧರ್ ಕೊಂಪುಳಿರ ಮೈಸೂರು

info.reporterkarnataka@gmail.com

ಮೈಸೂರಲ್ಲಿ ಹಾಡಹಗಲೇ ಬರ್ಬರ ಕೊಲೆ ನಡೆದಿದೆ. ಮೈಸೂರು ಅರಮನೆ ಎದುರಿನ ವಸ್ತು ಪ್ರದರ್ಶನ ಮೈದಾನ ಬಳಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಅಡ್ಡಗಟ್ಟಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ವೆಂಕಟೇಶ್ ಆಲಿಯಾಸ್ ಗಿಲಿಗಿಲಿ ನಾರಾಯಣ (45) ಕೊಲೆಯಾದ ವ್ಯಕ್ತಿ. ಕಾರಿನ ಗ್ಲಾಸ್ ಓಪನ್ ಮಾಡಿಕೊಂಡು ವೆಂಕಟೇಶ್ ತೆರಳುವಾಗ ಆಟೋ ಮತ್ತು ಬೈಕ್​ನಲ್ಲಿ ಬಂದ ಕಿಡಿಗೇಡಿಗಳು, ಕಾರದ ಪುಡಿ ಎರಚಿ ದಾಳಿ ಮಾಡಿದ್ದಾರೆ. ಕೃತ್ಯ ಎಸಗುವಾಗ ನಾಲ್ಕು ಮಂದಿ ಇದ್ದರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ನಜರ್​ಬಾದ್​ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಮೃತ ವ್ಯಕ್ತಿಯ ಶವವನ್ನು ಕೆ.ಆರ್.ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ನಜರ್ ಬಾದ್ ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿ, ಮೃತದೇಹವನ್ನು ಶವಗಾರಕ್ಕೆ ಸಾಗಣೆ ಮಾಡಿದ್ದಾರೆ.
*ಸ್ನೇಹಿತ ನಾಗರಾಜು ಹೇಳಿದ್ದೇನು ?:* ಮೃತ ವೆಂಕಟೇಶ್ ಸ್ನೇಹಿತ ನಾಗರಾಜು ಕೆ.ಆರ್.ಆಸ್ಪತ್ರೆಯ ಶವಗಾರದ ಬಳಿ ಮಾಧ್ಯಮಗಳ ಜೊತೆ ಮಾತನಾಡಿ, ವೆಂಕಟೇಶ್ ಕಾರಿನಲ್ಲಿ ಹೋಗುವಾಗ ಆತನ ಕಣ್ಣಿಗೆ ಕಾರದ ಪುಡಿ ಎರಚಿ ಆತನನ್ನು ಬರ್ಬರವಾಗಿ ಕೈ ತಲೆ ಹಾಗೂ ಹೊಟ್ಟೆ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ. ಆಟೋ ಹಾಗೂ ಬೈಕಿನಲ್ಲಿ ಬಂದ ನಾಲ್ವರು ಕೊಲೆ ಮಾಡಿದ್ದಾರೆ. ವೆಂಕಟೇಶ್ RMC ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದರು ಎಂದು ಸ್ನೇಹಿತ ನಾಗರಾಜು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು