11:07 PM Wednesday4 - November 2026
ಬ್ರೇಕಿಂಗ್ ನ್ಯೂಸ್
ಬಸ್ ದರ ಏರಿಕೆ | ಹೆಂಡ್ತಿಗೆ ಫ್ರಿ ಕೊಟ್ಟು ಗಂಡನಿಂದ ಡಬಲ್ ವಸೂಲಿ… Mysore | ಹುಣಸೂರು ಬಳಿ ಬೈಕ್‌ಗೆ ಒಕ್ಕಣೆ ಯಂತ್ರ ಡಿಕ್ಕಿ: ಸವಾರರಿಬ್ಬರ ದುರ್ಮರಣ ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿಯ ದರ್ಶನ ಪಡೆದ ಸಚಿವ ಕೃಷ್ಣ ಬೈರೇಗೌಡ: ₹1,000… Kodagu | ಚಲಿಸುತ್ತಿದ್ದಾಗಲೇ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಹೊಗೆ: ಪ್ರಯಾಣಿಕರಲ್ಲಿ ಆತಂಕ ಅಂತಾರಾಷ್ಟ್ರೀಯ ಸಾಧಕ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನಚರಿತ್ರೆ ‘Village Boy… ಸಿಡಿ ಫ್ಯಾಕ್ಟರಿ ಇರೋದು ಅಲ್ಲೇ: ಪ್ರಜ್ವಲ್ ರೇವಣ್ಣ ಕೇಸ್​ನಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ… ಸರ್ಕಾರಿ ಕಚೇರಿ, ಖಾಸಗಿ ಕಂಪನಿಗಳಲ್ಲಿ ಕನ್ನಡ ಬಾವುಟ ಕಡ್ಡಾಯ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ ಆಗುಂಬೆ ಬಳಿ ಭೀಕರ ಕಾರು ಅಪಘಾತ: ವೈದ್ಯ ವಿದ್ಯಾರ್ಥಿ ದುರ್ಮರಣ; 4 ಮಂದಿಗೆ… ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ‘ಇಂಡಿಯಾ’ ಮೈತ್ರಿಕೂಟ ಪಟ್ಟು |… ಬಿಜೆಪಿ ಮರುಸೇರ್ಪಡೆಗೆ ಯತ್ನಾಳ್‌ ಕಠಿಣ ಷರತ್ತು: ವಿಜಯೇಂದ್ರ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ…

ಇತ್ತೀಚಿನ ಸುದ್ದಿ

ಹಾಸನಾಂಬೆ ದರ್ಶನಕ್ಕೆ ಕೆ.ಜಿ.ಗಟ್ಟಲೆ ಬಂಗಾರ ಧರಿಸಿ ಬಂದ ‘ಗೋಲ್ಡ್ ಮ್ಯಾನ್’: ಬೆರಗಾಗಿ ನೋಡಿದ ಭಕ್ತರು!

04/11/2026, 23:06

ಹಾಸನ(reporterkarnataka.com): ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಐತಿಹಾಸಿಕ ಹಾಸನಾಂಬೆ ದರ್ಶನೋತ್ಸವ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ದೇಗುಲಕ್ಕೆ ಗಣ್ಯರು ಹಾಗೂ ಲಕ್ಷಾಂತರ ಭಕ್ತರ ದಂಡೇ ಹರಿದುಬರುತ್ತಿದೆ. ಈ ನಡುವೆ, ಹಾಸನಾಂಬೆೆಯ ಸನ್ನಿಧಿಯಲ್ಲಿ ವ್ಯಕ್ತಿಯೊಬ್ಬರು ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ.
ಮೈ-ಕೈ ತುಂಬಾ ಕಿಲೋಗಟ್ಟಲೆ ಚಿನ್ನದ ಆಭರಣಗಳನ್ನು ಧರಿಸಿ ದೇವಿಯ ದರ್ಶನಕ್ಕೆ ಆಗಮಿಸಿದ್ದ ಈ ‘ಗೋಲ್ಡ್ ಮ್ಯಾನ್’ ಅನ್ನು ಕಂಡು ಭಕ್ತರು ಅಚ್ಚರಿಯಿಂದ ಬಾಯಿ ಮೇಲೆ ಬೆರಳಿಟ್ಟು ನೋಡಿದ್ದಾರೆ!
ದೇವಾಲಯದ ಆವರಣದಲ್ಲಿ ಎಲ್ಲೆಲ್ಲೂ ಚಿನ್ನದ ಹೊಳಪು ಚೆಲ್ಲುತ್ತಿದ್ದ ಈ ವ್ಯಕ್ತಿಯನ್ನು ನೋಡಲು ಭಕ್ತರು ಮುಗಿಬಿದ್ದ ಪ್ರಸಂಗ ನಡೆಯಿತು.

*ಮೈಮೇಲೆ ಕೆ.ಜಿ.ಗಟ್ಟಲೆ ಬಂಗಾರ – ಎಲ್ಲರ ಚಿತ್ತ ಇವರತ್ತಲೇ!:*
ಕತ್ತಿನಲ್ಲಿ ಬೃಹತ್ ಗಾತ್ರದ ಚಿನ್ನದ ಸರಗಳು, ಎರಡೂ ಕೈಗಳ ತುಂಬಾ ದಪ್ಪನೆಯ ಚಿನ್ನದ ಬಳೆ-ಬ್ರೇಸ್‌ಲೆಟ್‌ಗಳು ಹಾಗೂ ಕೈಬೆರಳುಗಳ ತುಂಬೆಲ್ಲಾ ದೊಡ್ಡ ದೊಡ್ಡ ಚಿನ್ನದ ಉಂಗುರಗಳನ್ನು ಧರಿಸಿದ್ದ ಈ ವ್ಯಕ್ತಿ ದೇಗುಲದ ಆವರಣ ಪ್ರವೇಶಿಸುತ್ತಿದ್ದಂತೆ ಜನರೆಲ್ಲಾ ಅಚ್ಚರಿಯಿಂದ ನೋಡಲಾರಂಭಿಸಿದರು. ಸದ್ಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆಯೇ ಗಗನಕ್ಕೇರಿರುವ ಈ ಕಾಲದಲ್ಲಿ, ಇಷ್ಟೊಂದು ಪ್ರಮಾಣದ ಚಿನ್ನವನ್ನು ಧರಿಸಿ ಸಾರ್ವಜನಿಕವಾಗಿ ಓಡಾಡುತ್ತಿದ್ದ ದೃಶ್ಯ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು