7:13 PM Wednesday22 - April 2026
ಬ್ರೇಕಿಂಗ್ ನ್ಯೂಸ್
ಚಾಮರಾಜನಗರ | ಮಲೆ ಮಹದೇಶ್ವರ ವನ್ಯಜೀವಿ ಧಾಮದ ದಟ್ಟ ಕಾಡಿನಲ್ಲಿ ಮಾನವನ ಅಸ್ಥಿಪಂಜರ… ಅಮಾನತು ಅಂತ್ಯವಲ್ಲ, ಅಬ್ದುಲ್ ಜಬ್ಬಾರ್‌ಗೆ ಇನ್ನೂ ಅವಕಾಶ ಇದೆ: ಸಚಿವ ದಿನೇಶ್ ಗುಂಡೂರಾವ್ ವರ್ಗಾವಣೆ ಆದೇಶವಿದ್ದರೂ ಪೊಲೀಸ್ ಕಮಿಷನರ್ ಕರ್ತವ್ಯದಿಂದ ಬಿಡುಗಡೆಗೊಳಿಸಿಲ್ಲ: ಮಂಗಳೂರಿನಲ್ಲಿ ಪೊಲೀಸ್ ಮಹಾ ನಿರ್ದೇಶಕ… ಕೊಡಗಿನ ಹೋಂಸ್ಟೇಯಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಮಾಲೀಕ ಸೇರಿ ಇಬ್ಬರ… ಇಡಿ ದಾಳಿಗೂ ತಂದೆ ಹ್ಯಾರಿಸ್ ಗೂ ಯಾವುದೇ ಸಂಬಂಧವಿಲ್ಲ; ನಾನೊಬ್ಬ ಒಳ್ಳೆಯ ಮಗನಾಗಲು… ಕಳಸ: ಕಾಫಿ ತೋಟದ ಕಾರ್ಮಿಕರ ಮಕ್ಕಳ ಮೇಲೆ ಸಾಕು ನಾಯಿಗಳ ದಾಳಿ; ಓರ್ವ… ಪ್ರಧಾನಿ ಮೋದಿ ಜತೆ ಗುಟ್ಟಾಗಿ ಮಾತನಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಇಡಿ ಶಾಕ್: ಶಾಸಕ ಹ್ಯಾರಿಸ್, ನಲಪಾಡ್ ನಿವಾಸ ಸೇರಿ 17… ಚಿರತೆಯಿಂದ ಅತ್ತೆಯ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಸಚಿವ ಲಕ್ಷ್ಮಿ… ಮೈಸೂರು | ಕಾವೇರಿ ನದಿಯಲ್ಲಿ ಮುಳುಗಿ 6 ಜನ‌ ಜಲಸಮಾಧಿ: ದರ್ಗಾಕ್ಕೆ ಬಂದವರು…

ಇತ್ತೀಚಿನ ಸುದ್ದಿ

ಮುಂಬಯಿ ಲೋಕಲ್ ಟ್ರೇನ್ ಗಳಲ್ಲಿ ಸಂಚರಿಸಬೇಕೇ?: ಹಾಗಾದರೆ ತಪ್ಪದೇ ಈ ರೂಲ್ಸ್ ಫಾಲೋ ಮಾಡಿ ! 

27/10/2021, 08:18

ಮುಂಬೈ(reporterkarnataka.com) : ಲೋಕಲ್ ರೈಲು ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರ ಅನುಸಾರ ಮುಂಬೈನ ಲೋಕಲ್ ರೈಲಿನಲ್ಲಿ ಪ್ರಯಾಣಿಸುವವರು ಎರಡೂ ಡೋಸ್ ಕೋವಿಡ್ ಲಸಿಕೆಗಳನ್ನು ಪಡೆದಿರಬೇಕಾದುದು ಕಡ್ಡಾಯವಾಗಿದೆ.

ಮಹಾರಾಷ್ಟ್ರದಲ್ಲಿ ಸರ್ಕಾರಿ ಕಚೇರಿಗಳು ಹಾಗೂ ಹಲವಾರು ಕಂಪನಿಗಳಲ್ಲಿ ಈಗಾಗಲೇ ಉದ್ಯೋಗಿಗಳನ್ನು ಕಚೇರಿಗೆ ಕರೆಯಲಾಗಿದೆ. ಕಚೇರಿಯಿಂದ ಕೆಲಸ ನಿರ್ವಹಿಸುವವರು, ಕಾರ್ಮಿಕರು ಮತ್ತು ಸರ್ಕಾರಿ ನೌಕರರಿಗೆ ಮುಂಬೈ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸಲು ಸಂಪೂರ್ಣ ವ್ಯಾಕ್ಸಿನೇಷನ್ ಕಡ್ಡಾಯವಾಗಿದೆ ಎಂದು ರಾಜ್ಯ ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.

ಕೋವಿಡ್ -19 ಲಸಿಕೆಯ ಎರಡೂ ಡೋಸ್‌ಗಳನ್ನು ಹಾಕಿಸಿಕೊಂಡ ಹಾಗೂ ಎರಡನೇ ಡೋಸ್ ಹಾಕಿಸಿಕೊಂಡು 14 ದಿನಗಳು ಕಳೆದುಹೋದ ಜನರನ್ನು ಸಂಪೂರ್ಣ ಲಸಿಕೆ ಹಾಕಿಸಿಕೊಂಡ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ ಎಂದು ಮಾರ್ಗಸೂಚಿಯ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು