5:24 AM Thursday20 - August 2026
ಬ್ರೇಕಿಂಗ್ ನ್ಯೂಸ್
ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್…

ಇತ್ತೀಚಿನ ಸುದ್ದಿ

ಮೂಡುಪಲಿಮಾರು: ಅಪರಿಚಿನ ಮಾತು ನಂಬಿ ಲಕ್ಷಾಂತರ ರೂ. ಮೌಲ್ಯದ ಆಭರಣ ಕಳೆದುಕೊಂಡ ಮಹಿಳೆ

12/08/2022, 21:01

ಪಡುಬಿದ್ರೆ(reporterkarnataka.com);
ಕಾಪು ತಾಲೂಕಿನ ಮೂಡುಫಲಿಮಾರು ಎಂಬಲ್ಲಿ ಅಪರಿಚಿತ ವ್ಯಕ್ತಿಯ ಮಾತಿಗೆ ಮರುಳಾಗಿ ಮಹಿಳೆಯೊಬ್ಬರು ಲಕ್ಷಾಂತರ ರೂ. ಮೌಲ್ಯದ ಆಭರಣ ಕಳೆದುಕೊಂಡ ಘಟನೆ ನಡೆದಿದೆ.

ಮೂಡುಪಲಿಮಾರು ಎಂಬಲ್ಲಿ ಶೋಭಾ ಆಚಾರ್ಯ ಅವರು ತನ್ನ ತಾಯಿ, ಅಕ್ಕ ಮತ್ತು ತಮ್ಮನ ಜೊತೆ ವಾಸವಾಗಿದ್ದು, ಮೇ 6ರಂದು ಅಪರಿಚಿತ ವ್ಯಕ್ತಿಯೋರ್ವ ತನ್ನ ಹೆಸರು ಹರೀಶ್ ಪುತ್ತೂರು ವಿಶ್ವಕರ್ಮ ಕುಲದವರು ಎಂದು ಪರಿಚಯಿಸಿಕೊಂಡು ಬಂದಿದ್ದನು. ಅರ್ಧ ಗಂಟೆ ಮನೆಯಲ್ಲಿ ಇದ್ದು, ನಂತರ ಹೋಗಿದ್ದನು. ಆ ಬಳಿಕ ಎರಡು ದಿನ ಬಿಟ್ಟು ಅದೇ ವ್ಯಕ್ತಿಯು ಮಧ್ಯಾಹ್ನದ ವೇಳೆ ಮತ್ತೆ ಮನೆಗೆ ಬಂದಿದ್ದು, ತನಗೆ ಸೇರಿದ ಕುಂದಾಪುರದಲ್ಲಿದ್ದ 80 ಲಕ್ಷ ರೂ.‌ ಮೌಲ್ಯದ  ಜಾಗವು ಮಾರಾಟವಾಗಿದೆ. ಅದರ ದಾಖಲೆಗಳು ಬ್ಯಾಂಕಿನಲ್ಲಿರುವುದರಿಂದ ಅದನ್ನು ಬಿಡಿಸಿಕೊಳ್ಳಲು ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ. ಈ ವೇಳೆ ಶೋಭಾ ಅವರು ಹಣ ಇಲ್ಲವೆಂದು ತಿಳಿಸಿದ್ದರು. ಆದರೆ ಶೋಭಾ ಹಾಗೂ ಅವರ ಅಕ್ಕ ಶ್ಯಾಮಲಾ ಅವರನ್ನು ನಂಬಿಸಿ 1.65 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪಡೆದುಕೊಂಡು ಹೋಗಿದ್ದನು‌. ಚಿನ್ನದ ಹಣದ ಜೊತೆಗೆ ಜಾಗ ಮಾರಾಟ ಮಾಡಿ ಬಂದಿರುವ ಹಣದಲ್ಲಿ ಹೆಚ್ಚುವರಿಯಾಗಿ ಹಣ ಕೊಡುತ್ತೇನೆ ಎಂದು ನಂಬಿಸಿ ಮೇ16 ರಂದು ಹೋಗಿದ್ದನು. ಬಳಿಕವೂ ಮನೆಗೆ ಬಂದು ಎರಡು ದಿನ ಮನೆಯಲ್ಲಿದ್ದು, ಆ ನಂತರ ಮನೆಯಿಂದ ಹೋದವನು ಈವರೆಗೂ ಬಂದಿಲ್ಲ. ಅಲ್ಲದೆ, ತೆಗೆದುಕೊಂಡು ಹೋದ ಚಿನ್ನಾಭರಣ ನೀಡಿದೆ ವಂಚಿಸಿದ್ದಾರೆ ಎಂದು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು