3:02 PM Thursday29 - October 2026
ಬ್ರೇಕಿಂಗ್ ನ್ಯೂಸ್
ಮುಂದಿನ ಚುನಾವಣೆಯಲ್ಲಿ 130 ಸ್ಥಾನ ಗೆದ್ದು ಎನ್‌ಡಿಎ ಅಧಿಕಾರಕ್ಕೆ’: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.… Chikkamagaluru | ಕಡೂರು ಬಳಿ ಬಸ್ಸಿಗೆ ಹಿಂಭಾಗದಿಂದ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ… ಮೈಸೂರು ಅರಮನೆ ವಿಚಾರವಾಗಿ ಸಚಿವ ಯತೀಂದ್ರ ಹೇಳಿಕೆಗೆ ವಿರೋಧ: ಪ್ರಮೋದಾದೇವಿ ಒಡೆಯರ್ ಬೆಂಬಲಕ್ಕೆ… Chikkamagaluru | ಆಟೋ‌- ಬೈಕ್ ನಡುವೆ ಮುಖಾಮುಖಿ ‌ಡಿಕ್ಕಿ: ಬೈಕ್ ಸವಾರರ ಸ್ಥಳದಲ್ಲೇ… ಆಯುಧ ಪೂಜೆ–ವಿಜಯ ದಶಮಿ: ನಾಡಿನ ಒಳಿತಿಗಾಗಿ ರಾಜ್ಯಪಾಲ ಡಾ. ಸುಧಾ ಯಾದವ್ ಪ್ರಾರ್ಥನೆ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣ | ವಿಜಯದಶಮಿಯೊಳಗೆ ಆರೋಪಿಗಳ ಬಂಧಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ:… ಗೊತ್ತು ಗುರಿ ಇಲ್ಲದ ಟೂರಿಸಂ ನೀತಿ | ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾದ… ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026

ಇತ್ತೀಚಿನ ಸುದ್ದಿ

Mangaluru | ಬಿಕರ್ನಕಟ್ಟೆ ಬಾಲ ಯೇಸುವಿನ ವಾರ್ಷಿಕ ಮಹೋತ್ಸವ: ಹೊರೆ ಕಾಣಿಕೆ ಮೆರವಣಿಗೆ

05/01/2026, 13:03

ಮಂಗಳೂರು(reporterkarnataka.com): ಬಾಲ ಯೇಸುವಿನ ವಾರ್ಷಿಕ ಮಹೋತ್ಸವಕ್ಕೆ ಸಿದ್ಧತೆಯಾಗಿ ಶನಿವಾರ ನಗರದ ಕೊರ್ಡೆಲ್ ಚರ್ಚ್ ನಿಂದ ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದ ವರೆಗೆ ಭಕ್ತಿಭಾವಪೂರ್ಣ ಹೊರೆ ಕಾಣಿಕೆ ಮೆರವಣಿಗೆ ನಡೆಯಿತು.
ಅನೇಕ ಭಕ್ತರು ಕೃತಜ್ಞತೆ, ನಂಬಿಕೆ ಮತ್ತು ಆಶಯದೊಂದಿಗೆ ಕಾಣಿಕೆಗಳನ್ನು ಸಮರ್ಪಿಸಿದರು. ವಂ. ವಿಜಯ್ ಮೊಂತೆರೋ, (ಸಹಾಯಕ ಧರ್ಮಗುರು , ಕೊರ್ಡೆಲ್ ಚರ್ಚ್) ಆಶೀರ್ವಾದ ನೀಡಿ ರೂತ್ ಕ್ಯಾಸ್ಟೆಲಿನೊ, (ಉಪಾಧ್ಯಕ್ಷೆ, ಕೊರ್ಡೆಲ್ ಚರ್ಚ್) ಮೆರವಣಿಗೆಗೆ ಧ್ವಜ ಹಾರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಸೌಹಾರ್ದತೆ ಯನ್ನು ಉತ್ತೇಜಿಸುವ “ಸಹಬಾಳ್ವೆ” ಕಾರ್ಯಕ್ರಮ ಪುಣ್ಯಕ್ಷೇತ್ರದ ಆಂಗಣದಲ್ಲಿ ನಡೆಯಿತು. ಮುನೀರ್ ಕಾಟಿಪಳ್ಳ (ಸಾಮಾಜಿಕ ಕಾರ್ಯಕರ್ತ ), ಶಾಲೇಟ್ ಪಿಂಟೊ (ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ) ಹಾಗೂ ದಿನೇಶ್ ಹೆಗಡೆ, ಉಳೇಪಾಡಿ (ಮಾನವ ಹಕ್ಕುಗಳ ಹೋರಾಟಗಾರ, ವಕೀಲರು) ಭಾಗವಹಿಸಿದರು. ಸಮಾಜದಲ್ಲಿ ಸಹೋದರತ್ವ ಮತ್ತು ಏಕತೆಯ ಮಹತ್ವವನ್ನು ಅವರು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ವಂ. ಪ್ರವೀಣ್ ಮಾರ್ಟಿಸ್ (ಉಪಕುಲಪತಿ, ಸಂತ ಅಲೋಶಿಯಸ್ ವಿಶ್ವ ವಿದ್ಯಾನಿಲಯ); ಸಿಸ್ಟರ್ ರೀನಾ ಡಿಸೋಜಾ, (ಸಾಂತಾ ಕ್ರೂಸ್ ಕಾನ್ವೆಂಟ್, ಕುಲಶೇಖರ); ಹಾಗೂ ಕಾರ್ಪೊರೇಟರ್ ಗಳಾದ ಕೇಶವ್ ಮತ್ತು ನವೀನ್ ಉಪಸ್ಥಿತರಿದ್ದರು. ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಿದವರನ್ನು ಗೌರವಿಸಲಾಯಿತು. ವಂ. ಮೆಲ್ವಿನ್ ಡಿ’ಕುನ್ನಾ, ಸಂತ ಜೋಸೆಫ್ ಮಠದ ಮಠಾಧೀಶರು) ಮತ್ತು ವಂ. ಸ್ಟೀಫನ್ ಪಿರೇರಾ, ಪುಣ್ಯಕ್ಷೇತ್ರದ ನಿರ್ದೇಶಕರು ಭಕ್ತರಿಗೆ ಕೃತಜ್ಞತೆ ಸಲ್ಲಿಸಿ ಪ್ರಾರ್ಥನೆಯ ಭರವಸೆ ನೀಡಿದರು.
ಅಂತಿಮವಾಗಿ ವಂ. ಪ್ರವೀಣ್ ಮಾರ್ಟಿಸ್ ಧ್ವಜಕ್ಕೆ ಆಶೀರ್ವಾದ ನೀಡಿ ಧ್ವಜಾರೋಹಣ ಮಾಡುವ ಮೂಲಕ ನವೆನಾ ಮತ್ತು ಮಹೋತ್ಸವವನ್ನು ಅಧಿಕೃತವಾಗಿ ಉದ್ಘಾಟಿಸಿದರು.


ಈ ವರ್ಷದ ಮಹೋತ್ಸವದ ಧ್ಯಾನದ ವಿಷಯ “ ಕರೆದಿಹರು ಕಾರ್ಮೆಲ್ ಗಿರಿಗೆ, ಕುರಿಮರಿಯ ಲಗ್ನ ಉತ್ಸವಕೆ” ಎಂಬುದಾಗಿದ್ದು, ಶಿಲುಬೆಯ ಸಂತ ಯೊವಾನ್ನರ ಉಪದೇಶಗಳಿಂದ ಪ್ರೇರಿತವಾಗಿದೆ. ಅವರ ಸಂತತ್ವದ 300ನೇ ರ‍್ಷ ಮತ್ತು ಪವಿತ್ರ ರ‍್ಮಸಭೆಯ ಪಂಡಿತರೆಂದು ಘೋಷಿಸಲಾದ 100ನೇ ರ‍್ಷದ ಸ್ಮರಣೆಯೂ ಈ ವರ್ಷ ಆಚರಿಸಲಾಗುತ್ತಿದೆ.
ಜನವರಿ 5 ರಿಂದ 13ರವರೆಗೆ ದಿನವಿಡೀ ನವೆನಾವಿಧಿಗಳು, 9 ಪೂಜಾಕರ‍್ಯಗಳು ಹಾಗೂ ಪವಿತ್ರ ಸಂಸ್ಕಾರದ ಆರಾಧನೆ ನಡೆಯಲಿದ್ದು, ವರ್ಷದ ಜಾತ್ರೆ ಜನವರಿ 14 ಮತ್ತು 15, 2026ರಂದು ನಡೆಯಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು