1:04 PM Wednesday23 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಮಂಗಳೂರು ಶೀಘ್ರದಲ್ಲೇ ಗೇಮಿಂಗ್ ಮತ್ತು ಎಐಗೆ ಹಬ್ ಆಗಲಿದೆ: ಕೆಡಿಇಎಂ ಸಿಇಒ ಸಂಜೀವ್ ಕುಮಾರ್ ಗುಪ್ತಾ

13/11/2025, 12:08

ಮಂಗಳೂರು(reporterkarnataka.com): ಮಂಗಳೂರು ಭಾರತದ ಮೊದಲ ಸ್ಟಾರ್ಟ್‌ಅಪ್ ಡಿಸ್ಟ್ರಿಕ್ಟ್ ಮತ್ತು ಸಿಲಿಕಾನ್ ಬೀಚ್ ಆಗಿ ಹೊರಹೊಮ್ಮಿದ್ದು, ಗೇಮಿಂಗ್ ಮತ್ತು ಎಐಗೆ ಹಬ್ ಆಗಿ ತ್ವರಿತವಾಗಿ ಉದಯಿಸುತ್ತಿದೆ. ಈ ನಿಟ್ಟಿನಲ್ಲಿ ಬಹಳಷ್ಟು ಜಿಸಿಸಿ ಹೂಡಿಕೆಗಳು ಹರಿದು ಬಂದಿದೆ ಎಂದು ಕೆಡಿಇಎಂ ಸಿಇಒ ಸಂಜೀವ್ ಕುಮಾರ್ ಗುಪ್ತಾ ಹೇಳಿದ್ದಾರೆ.
ಕರ್ನಾಟಕ ಸ್ಟಾರ್ಟ್ಅಪ್ ಪಾಲಿಸಿ 2025–2030 ರಾಜ್ಯದಾದ್ಯಂತ ಉದ್ಯಮಶೀಲ ಅಭಿವೃದ್ಧಿ ಪ್ರಕ್ರಿಯೆಯನ್ನು ವೇಗಗೊಳಿಸಲು ಕೆಡಿಇಎಂನ ಮ್ಯಾಂಡೇಟ್ ಅನ್ನು ಬಲಪಡಿಸುತ್ತದೆ. ಈ ಪಾಲಿಸಿಯು ಶೀಘ್ರವೇ ಜಾರಿಗೆ ಬಂದರೆ ಅನುಕೂಲವಾಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ನಾಯಕತ್ವ ವಹಿಸಿರುವುದು ತಿಳಿಯುತ್ತದೆ ಹಾಗೂ ಕರ್ನಾಟಕದ ಹೊಸ ಆವಿಷ್ಕಾರ ಉದ್ದೇಶಕ್ಕೆ ಪೂರಕವಾಗಿ ಉದ್ಯಮದ ಆತ್ಮವಿಶ್ವಾಸವನ್ನು ಬಲಪಡಿಸುತ್ತದೆ ಎಂದಿದ್ದಾರೆ.
ಮಂಗಳೂರು ಭಾರತದ ಮೊದಲ ಸ್ಟಾರ್ಟ್‌ಅಪ್ ಡಿಸ್ಟ್ರಿಕ್ಟ್ ಮತ್ತು ಸಿಲಿಕಾನ್ ಬೀಚ್ ಆಗಿ ಹೊರಹೊಮ್ಮಿದ್ದು, ಗೇಮಿಂಗ್ ಮತ್ತು ಎಐಗೆ ಹಬ್ ಆಗಿ ತ್ವರಿತವಾಗಿ ಉದಯಿಸುತ್ತಿದೆ. ಈ ನಿಟ್ಟಿನಲ್ಲಿ ಬಹಳಷ್ಟು ಜಿಸಿಸಿ ಹೂಡಿಕೆಗಳು ಹರಿದು ಬಂದಿದೆ. ಚಾಮರಾಜನಗರದಲ್ಲಿ ಉದ್ಯಮಗಳು 450ಕ್ಕೂ ಹೆಚ್ಚು ಐಟಿ/ ಐಟಿಇಎಸ್ ಉದ್ಯೋಗಗಳನ್ನು ಸೃಷ್ಟಿಸಿವೆ. ಶೇ.70 ಮಹಿಳಾ ಪ್ರಾತಿನಿಧ್ಯ ವಿಶೇಷವಾಗಿದೆ. ಕೆಎಎನ್ ಮತ್ತು ಎಲಿವೇಟ್ ನಂತಹ ಯೋಜನೆಗಳು ರಾಜ್ಯದ ₹600 ಕೋಟಿ ಡೀಪ್‌ ಟೆಕ್ ಫಂಡ್ ಒದಗಿಸಿದ್ದು, 30 ದೇಶಗಳಾದ್ಯಂತ ಜಾಗತಿಕ ಪಾಲುದಾರಿಕೆಗಳು ಸಾಧ್ಯವಾಗಿದೆ. ಈ ಪಾಲಿಸಿ ಕರ್ನಾಟಕವನ್ನು ಜಾಗತಿಕವಾಗಿ ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಲ್ಲಿಸಲಿದೆ ಎಂದು ಗುಪ್ತಾ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು